Top

ನೆರೆ ಸಂತ್ರಸ್ತರ ನೆರವಿಗೆ ನಿಂತ ರಾಜಕೀಯ ನಾಯಕರು

ಬೆಂಗಳೂರು : ಕಾಫಿನಾಡು ಕೊಡಗು ನೆರೆ ಹಾವಳಿಯಿಂದ ತತ್ತರಿಸಿಹೋಗಿದೆ. ಭೀಕರ ಪ್ರವಾಹ ಪರಿಸ್ಥಿತಿಯಿಂದ ಸಾವಿರಾರು ಜನ ಮನೆ ಮಠ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ರಾಜ್ಯದ ಮೂಲೆಮೂಲೆಗಳಿಂದಲೂ ಸೈನಿಕರ ನಾಡಿಗೆ ನೆರವಿನ ಮಹಾಪೂರವೇ ಹರಿದುಬಂದಿದೆ. ಸರ್ಕಾರ ಹಾಗೂ ರಾಜಕೀಯ ಪಕ್ಷಗಳ ನಾಯಕರು ಕೂಡ ನೆರವಿನ ಹಸ್ತ ನೀಡಿದ್ದಾರೆ..ಹಾಗಾದ್ರೆ ಇವತ್ತಿನ ಒಟ್ಟು ರಾಜಕೀಯ ಬೆಳವಣಿಗೆಗಳ ಬಗೆಗಿನ ಸಮಗ್ರ ವರದಿ ಇಲ್ಲಿದೆ ಓದಿ..

ಪ್ರವಾಹದಿಂದ ನಲುಗಿಹೋಗಿದೆ ಕರ್ನಾಟಕದ ಕಾಶ್ಮೀರ

ಮೂಲೆಮೂಲೆಗಳಿಂದ ಹರಿದು ಬರುತ್ತಿದೆ ನೆರವಿನ ಹಸ್ತ

ವಾಯ್ಸ್: ನೆರೆಹಾವಳಿಯಿಂದಾಗಿ ಕರ್ನಾಟಕದ ಕಾಶ್ಮೀರ ಕೊಡಗು ಭಾಗಶಃ ನಾಶವಾಗಿದೆ. ಭೀಕರ ಪ್ರವಾಹದಿಂದಾಗಿ ಮನೆ ಮಠ ಕಳೆದುಕೊಂಡು ಜನಜಾನುವಾರುಗಳು ಸಂಕಷ್ಟಕ್ಕೀಡಾಗಿದ್ದಾರೆ. ನಿಲ್ಲಲು ನೆಲೆ ಇಲ್ಲದೆ, ತಿನ್ನಲು ಆಹಾರವಿಲ್ಲದೆ ಒದ್ದಾಡುತ್ತಿದ್ದಾರೆ. ಪ್ರವಾಸಿಗ ಸ್ವರ್ಗದ ಈ ಧಾರುಣ ಘಟನೆಗೆ ಇಡೀ ರಾಜ್ಯವೇ ಮಮ್ಮಲಮರುಗಿದೆ. ಮೂಲೆಮೂಲೆಗಳಿಂದ ಕೊಡಗಿನೆ ನೆರವಿನ ಮಹಾಪೂರವೇ ಹರಿದು ಬರುತ್ತಿದೆ..ಇದೀಗ ರಾಜಕೀಯ ಪಕ್ಷಗಳು ಕೂಡ ನೆರವಿನ ಹಸ್ತವನ್ನ ಚಾಚಿದ್ದಾರೆ.

ಬಿಬಿಎಂಪಿಯಿಂದ 3 ಕೋಟಿ 18 ಲಕ್ಷ ದೇಣಿಗೆ

ಪ್ರವಾಹ ಪೀಡಿತ ಕೊಡಗಿಗೆ ಈಗಾಗಲೇ ಸರ್ಕಾರ ನೆರವಿನ ಹಸ್ತವನ್ನ ಚಾಚಿದೆ. ಬೆಳಗ್ಗೆ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಡಿಸಿಎಂ ಪರಮೇಶ್ವರ್ ಕೊಡಗಿನ ಸಂಪೂರ್ಣ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದ್ರು.

ನಂತರ ಬಿಬಿಎಂಪಿ ವತಿಯಿಂದ 3ಕೋಟಿ18ಲಕ್ಷ ರೂಗಳನ್ನ ಕೊಡಗಿನ ಸಂತ್ರಸ್ಥರ ಪರಿಹಾರ ನಿಧಿಗೆ ನೀಡಿದ್ರು. ಅಲ್ಲದೆ ಬಿಬಿಎಂಪಿಯಿಂದ 2 ಟ್ರಕ್ ಅಗತ್ಯ ವಸ್ತುಗಳನ್ನ ಕೊಡಗಿಗೆ ಕಳಿಸಲಾಯ್ತು. ಇದೇ ವೇಳೆ ತಮ್ಮದೇ ಸಿದ್ದಾರ್ಥ ಶಿಕ್ಷಣ ಸಂಸ್ಥೆಯಿಂದ ನೀಡಲಾದ 3 ಟ್ರಕ್​ ಆಹಾರ,ಮೆಡಿಸಿನ್ ಮುಂತಾದ ಸಾಮಾಗ್ರಿಗಳನ್ನ ಕೊಡಗಿಗೆ ಕಳಿಸಲು ಚಾಲನೆ ನೀಡಿದ್ರು..

ಕೆಪಿಸಿಸಿಯಿಂದ 4 ಬೃಹತ್ ಟ್ರಕ್​ ಆಹಾರ ಪದಾರ್ಥ ರವಾನೆ

ಕಾಂಗ್ರೆಸ್​ ನಾಯಕರಿಂದ ಸಂತ್ರಸ್ಥರಿಗೆ 10 ಕೋಟಿ ದೇಣಿಗೆ

ಇನ್ನು ಕೆಪಿಸಿಸಿ ವತಿಯಿಂದ ಕೇರಳ ಹಾಗೂ ಕೊಡಗಿನ ನೆರೆ ಸಂತ್ರಸ್ಥರಿಗಾಗಿ 4 ಬೃಹತ್ ಟ್ರಕ್​ಗಳಲ್ಲಿ ಆಹಾರ ಸಾಮಾಗ್ರಿಗಳನ್ನ ಕಳುಹಿಸಲಾಯ್ತು. ಕೊಡಗಿಗೆ 500ಕ್ವಿಂಟಾಲ್ ಅಕ್ಕಿ, 100ಕ್ವಿಂಟಾಲ್ ಸಕ್ಕರೆ, 50 ಸಾವಿರ ಜನರಿಗಾಗುವಷ್ಟು ಸಾಂಬಾರ್ ಪುಡಿ ಹಾಗೂ 10 ಸಾವಿರ ಬ್ಲಾಂಕೆಟ್​ಗಳನ್ನ ರವಾನಿಸಲಾಯ್ತು.

ಕೇರಳಕ್ಕೂ ಇಷ್ಟೇ ಪ್ರಮಾಣದ ಆಹಾರ ಪದಾರ್ಥಗಳನ್ನ ರವಾನಿಸಲಾಯ್ತು. ಜೊತೆಗೆ ಶಾಸಕರು, ಸಂಸದರು ಹಾಗೂ ಮೇಲ್ಮನೆ ಸದಸ್ಯರು ತಮ್ಮ ಎರಡು ತಿಂಗಳ ವೇತನವನ್ನ ನೇರೆ ಸಂತ್ರಸ್ಥರಿಗೆ ನೀಡಿದ್ದಾರೆ. ಒಟ್ಟು 10 ಕೋಟಿ ಹಣವನ್ನ ಕೊಡಗಿನ ನೆರೆ ಸಂತ್ರಸ್ಥರಿಗೆ ನೀಡುವಲ್ಲಿ ಕಾಂಗ್ರೆಸ್​ ಮುಂದಾಯ್ತು..

ನೆರೆ ಸಂತ್ರಸ್ತರಿಗೆ ನಾಯಿಗಳಂತೆ ಬಿಸ್ಕೆಟ್ ಎಸೆದ್ರು ಸಚಿವ ರೇವಣ್ಣ

ಅಣ್ಣನ ನಡೆಯನ್ನ ಸಮರ್ಥಿಸಿಕೊಂಡ್ರು ತಮ್ಮ ಸಿಎಂ ಕುಮಾರಸ್ವಾಮಿ

ಲೋಕೋಪಯೋಗಿ ಸಚಿವ ಹೆಚ್​.ಡಿ.ರೇವಣ್ಣ ನೆರೆ ಸಂತ್ರಸ್ಥರ ಬಳಿ ಅಹಂಕಾರ ಪ್ರದರ್ಶಿಸಿದ್ರು. ಸಂತ್ರಸ್ಥರಿಗೆ ಬಿಸ್ಕೆಟ್ ಹಂಚುವ ವೇಳೆ ಪ್ರಾಣಿಗಳಿಗೆ ಎಸೆದಂತೆ ಎಸೆಯುವ ಮೂಲಕ ತಮ್ಮ ಉದ್ಧಟತನ ಮೆರೆದಿದ್ದಾರೆ. ಒಬ್ಬ ಜವಾಬ್ದಾರಿಯುತ ಸಚಿವರಾಗಿ ರೇವಣ್ಣ ವರ್ತಿಸಿದ ರೀತಿಗೆ ಇಡೀ ರಾಜ್ಯಾಧ್ಯಂತ ತೀರ್ವ ಆಕ್ರೋಶ ವ್ಯಕ್ತವಾಗಿದೆ.

ಇನ್ನು ಸಹೋದರ ರೇವಣ್ಣನಿಗೆ ಬುದ್ಧಿ ಹೇಳಬೇಕಾದ ಸಿಎಂ ಕುಮಾರಸ್ವಾಮಿ ಸಹೋದರ ನಡೆಯನ್ನ ಸಮರ್ಥಿಸಿಕೊಂಡಿದ್ದಾರೆ. ಆ ಹಾಲ್​ನಲ್ಲಿ ಸುಮಾರು 5 ಸಾವಿರ ಜನ ಸಂತ್ರಸ್ಥರಿದ್ದರಿಂದ ಆ ರೀತಿ ನಡೆದುಕೊಂಡಿದ್ದಾರೆ. ಬಿಜೆಪಿಯವರಿಗೆ ಆರೋಪ ಮಾಡುವುದು ಬಿಟ್ಟು ಬೇರೆನಿದೆ ಅಂತ

ಸಹೋದರನ ಪರ ಬ್ಯಾಟಿಂಗ್ ಮಾಡಿದ್ದಾರೆ. ಸಿಎಂ ಅವರ ಈ ನಡೆ ಮತ್ತಷ್ಟು ಆಕ್ರೋಶಕ್ಕೆ ಅವಕಾಶ ಮಾಡಿಕೊಟ್ಟಂತಾಗಿದೆ.

ಕೊಡಗಿನ ನೆರೆಸಂತ್ರಸ್ಥರಿಗೆ ಬಿಜೆಪಿಯಿಂದಲೂ ನೆರವು

ಕೊಡಗಿನ ನೆರೆ ಸಂತ್ರಸ್ಥರ ನೆರವಿಗೆ ಬಿಜೆಪಿ ಕೂಡ ಸಹಾಯ ಹಸ್ತ ನೀಡಿದೆ. ಇಂದು ಬೆಂಗಳೂರಿನ ಅವೆನ್ಯೂ ರಸ್ತೆಯಲ್ಲಿ ಮಾಜಿ ಡಿಸಿಎಂ ಆರ್.ಅಶೋಕ್ ನೇತೃತ್ವದಲ್ಲಿ ವ್ಯಾಪಾರಿಗಳು,ಅಂಗಡಿ ಮುಂಗಟ್ಟುಗಳಿಂದ ದೇಣಿಗೆಯನ್ನ ಸಂಗ್ರಹಿಸಲಾಯ್ತು.

ಮಳೆಯಲ್ಲೂ ಪಬ್ಲಿಸಿಟಿಗಾಗಿ ಹಿರಿಯ ಅಧಿಕಾರಿಗಳ ವಾರ್

ಕೊಡಗಿನ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಫೈರ್ ಆಂಡ್ ಎಮರ್ಜೆನ್ಸಿ ಸಿಬ್ಬಂದಿಯನ್ನ ಹಿರಿಯ ಅಧಿಕಾರಿಗಳು ವಾಪಸ್ ಕರೆಸಿಕೊಂಡಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಸಿವಿಲ್ ಡಿಫೆನ್ಸ್ ಸಿಬ್ಬಂದಿಗಳ ಬಗ್ಗೆ ಮೆಚ್ಚುಗೆ

ವ್ಯಕ್ತವಾದ ಹಿನ್ನೆಲೆ ತಮ್ಮ ಸಿಬ್ಬಂದಿಯನ್ನ ಐಜಿ ಎಂ.ಎನ್​.ರೆಡ್ಡಿ ಸೂಚನೆ ಮೇಲೆ ಡಿ.ರೂಪಾ ವಾಪಸ್ ಕರೆಸಿಕೊಂಡಿದ್ದಾರೆ. ಸಿವಿಲ್ ಡಿಫೆನ್ಸ್ ಸಿಬ್ಬಂದಿಗೆ ಮಾತ್ರ ಪಬ್ಲಿಸಿಟಿ ನಮಗ್ಯಾಕಿಲ್ಲ ಅಂತ ಸಿಬ್ಬಂದಿಯನ್ನ ವಾಪಸ್ ಕರೆಸಿಕೊಂಡಿದ್ದಾತೆ. ಇದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

ಒಂದು ಕಡೆ ಸರ್ಕಾರ ಹಾಗೂ ರಾಜಕೀಯ ಪಕ್ಷಗಳು ಕೊಡಗಿನ ನೆರೆ ಹಾವಳಿಗೆ ಸಹಾಯ ಹಸ್ತ ಚಾಚುವ ಮೂಲಕ ಶ್ಲಾಘನೆಗೆ ಒಳಗಾಗಿವೆ. ಆದ್ರೆ ಮತ್ತೊಂದು ಕಡೆ ಸರ್ಕಾರದ ಸಚಿವರೇ ಸಂತ್ರಸ್ಥರ ಮುಂದೆ ಅಹಂಕಾರ ಪ್ರದರ್ಶಿಸುವ ಮೂಲಕ ಸರ್ಕಾರಕ್ಕೂ ಕೆಟ್ಟ ಹೆಸರು ಬಂದಂತಾಗಿದೆ. ಇನ್ನೊಂದು ಕಡೆ ಡರ್ಟಿ ಪಬ್ಲಿಸಿಟಿ ಪಾಲಿಟಿಕ್ಸ್​ಗೆ ಬೆಲೆ ನೀಡುವ ಮೂಲಕ ಅಧಿಕಾರಿಗಳು ನಗೆಪಾಟಲಿಗೀಡಾಗಿದ್ದಾರೆ.

ಪೊಲಿಟಿಕಲ್ ಬ್ಯೂರೋ, ಟಿವಿ5 ಬೆಂಗಳೂರು

Next Story

RELATED STORIES