Top

ಕೊಡಗು ನೆರೆ ಸಂತ್ರಸ್ತರ ನೆರವಿಗಾಗಿ ಬೀದಿಗಿಳಿದ ಶಾಸಕ

ಕೊಡಗು ನೆರೆ ಸಂತ್ರಸ್ತರ ನೆರವಿಗಾಗಿ ಬೀದಿಗಿಳಿದ ಶಾಸಕ
X

ಬೆಂಗಳೂರು : ವೀರ ಯೋಧರ ನಾಡು, ಕೊಡಗಿನ ನೆರೆ ಸಂತ್ರಸ್ತರಿಗಾಗಿ ಬೊಮ್ಮನಹಳ್ಳಿಯ ಬಿಜೆಪಿ ಶಾಸಕರು, ರಸ್ತೆಗಿಳಿದರು. ಈ ಮೂಲಕ ಸಂತ್ರಸ್ತರ ನೆರವಿಗಾಗಿ ದೇಣಿಗೆ ಸಂಗ್ರಹಿಸಿ, ನೀಡಿದರು.

ನೆರೆ ಸಂತ್ರಸ್ತರಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದು ಬೊಮ್ಮನಹಳ್ಳಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ರವರು ಬೀದಿಗಳಿದು ಪರಿಹಾರ ನಿಧಿ ಸಂಗ್ರಹಿಸಿ ಕೊಡಗಿನ ಜನರಿಗೆ ನೆರವಾದರು.

ನೆರೆಪೀಡಿತ ಕೊಡಗಿನ ಜನರಿಗೆ ನೆರವಾಗಳೆಂದು ಬೆಂಗಳೂರಿನ ಹೆಚ್ ಎಸ್ ಆರ್ ಲೇಔಟ್, ಮಂಗಮ್ಮ ಪಾಳ್ಯ ಬಿಡಿಎ ಕಾಂಪ್ಲೆಕ್ಸ್ ಸೇರಿದಂತೆ ಬೀದಿ ಅಂಗಡಿ ಹೋಗಿ ಪರಿಹಾರ ನೀಧಿಯನ್ನ ಸಂಗ್ರಹ ಮಾಡಿದರು.

ಇದೇ ವೇಳೆ ಶಾಸಕ ಸತೀಶ್ ರೆಡ್ಡಿ ಮಾತನಾಡಿದ ಕೊಡಗಿನ ಜನ ಮಳೆಯಿಂದ ನಿರಾಶ್ರಿತರಾಗಿದ್ದು ಮನೆ ಮಠ ಕಳೆದುಕೊಂಡಿದ್ದು, ಒಂದು ಹೊತ್ತು ಊಟಕ್ಕೂ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಅದ್ದರಿಂದ ನಾವುಗಳು ಅವರಿಗೆ ನಮ್ಮ ಕೈಲಾದ ಸಹಾಯ ಮಾಡುವ ಮೂಲಕ ನೆರವಾಗಬೇಕಿದೆ ಶ್ರೀಮಂತರಿರಲಿ ಬಡವಾರಾಗಿರಲಿ ಕೊಡಗಿನ ಜನರಿಗಾಗಿ ತಮ್ಮ ಕೈಲಾದ ಸಹಾಯ ಮಾಡಬೇಕು..

ಪರಿಹಾರ ನಿಧಿ ಹಾಗೂ ಅಂಗಡಿಗಳಲ್ಲಿ ಬಟ್ಟೆ ಆಹಾರ ಪದಾರ್ಥಗಳನ್ನು ಸಂಗ್ರಹಿಸಿದ್ದು ಪ್ರವಾಹ ಪೀಡಿತ ಜನರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

Next Story

RELATED STORIES