Top

ಕೇರಳಕ್ಕೆ ಹರಿದು ಬಂದ ನೆರವು: ಯಾರಿಂದ ಎಷ್ಟು ಗೊತ್ತಾ?

ಕೇರಳಕ್ಕೆ ಹರಿದು ಬಂದ ನೆರವು: ಯಾರಿಂದ ಎಷ್ಟು ಗೊತ್ತಾ?
X

ಶತಮಾನದ ಮಳೆ ಹಾಗೂ ಪ್ರವಾಹ ಪರಿಸ್ಥಿತಿಯಿಂದ ಕೇರಳ ಪೂರ್ತಿ ಜಲಾವೃತಗೊಂಡಿದೆ. 350ಕ್ಕೂ ಅಧಿಕ ಮಂದಿ ಜೀವ ಕಳೆದುಕೊಂಡಿದ್ದರೆ, ಲಕ್ಷಾಂತರ ಮಂದಿ ನಿರ್ವಸತಿಗರಾಗಿದ್ದಾರೆ. ವಿವಿಧ ಸರಕಾರಗಳು, ಕಂಪನಿಗಳು, ಬಾಲಿವುಡ್ ಸೆಲೆಬ್ರೆಟಿಗಳು, ಮೊಬೈಲ್ ಕಂಪನಿಗಳು ತಮ್ಮದೇ ಆದ ರೀತಿಯಲ್ಲಿ ನೆರವು ಘೋಷಿಸಿದ್ದಾರೆ.

ಬಾಲಿವುಡ್ ನಟ-ನಟಿಯರು ಕೂಡ ದೇಣಿಗೆ ನೀಡಿದ್ದರೂ ಅದನ್ನು ಘೋಷಿಸಿಲ್ಲ. ಅಲ್ಲದೇ ನೆರವಿಗೆ ಮುಂದಾಗುವಂತೆ ಆಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಕೇರಳ ಸರಕಾರ ಸಂತ್ರಸ್ತರಿಗೆ ನೆರವಾಗುವಲ್ಲಿ ಮಹತ್ವದ ಪಾತ್ರ ವಹಿಸಿರುವ ಸ್ಥಳೀಯ ದೋಣಿಗಳಿಗೆ ಪ್ರತಿ ದಿನ ತಲಾ 3 ಸಾವಿರ ರೂ. ಹಾಗೂ ದುರಸ್ತಿಯ ಸಂಪೂರ್ಣ ಖರ್ಚನ್ನು ಸರಕಾರ ಘೋಷಿಸಿದೆ.

ಯಾರೆಲ್ಲಾ ಏನೆಲ್ಲಾ ಸಹಾಯ ಮಾಡಿದ್ದಾರೆ ಅಂಕಿ ಅಂಶ ಇಲ್ಲಿದೆ.

ಸರಕಾಗಳು

  • ಕೇಂದ್ರ ಸರಕಾರ 700 ಕೋಟಿ ರೂ.
  • ದೆಹಲಿ ಸರಕಾರ 10 ಕೋಟಿ ರೂ.
  • ಬಿಹಾರ 10 ಕೋಟಿ ರೂ.
  • ಒಡಿಶಾ 10 ಕೋಟಿ ರೂ. ಮತ್ತು 245 ಅಗ್ನಿಶಾಮಕ ಸಿಬ್ಬಂದಿ
  • ತಮಿಳುನಾಡು 10 ಕೋಟಿ,
  • ಆಂಧ್ರಪ್ರದೇಶ 10 ಕೋಟಿ ರೂ.
  • ಪುದುಚೇರಿ 1 ಕೋಟಿ ರೂ.
  • ಜಾರ್ಖಂಡ್ 5 ಕೋಟಿ ರೂ.
  • ಮಹಾರಾಷ್ಟ್ರ 20 ಕೋಟಿ ರೂ.
  • ಗುಜರಾತ್ 10 ಕೋಟಿ ರೂ.
  • ಪಂಜಾಬ್ 10 ಕೋಟಿ ರೂ.
  • ತೆಲಂಗಾಣ 25 ಕೋಟಿ ರೂ.
  • ಹಿಮಾಚಲ ಪ್ರದೇಶ 5 ಕೋಟಿ ರೂ.
  • ಉತ್ತರಾಖಂಡ್ 5 ಕೋಟಿ ರೂ.
  • ಚತ್ತೀಸ್​ಗಢ್ 3 ಕೋಟಿ ರೂ.
  • ಮಧ್ಯಪ್ರದೇಶ 10 ಕೋಟಿ ರೂ.
  • ಕರ್ನಾಟಕ 10 ಕೋಟಿ ರೂ.
  • ಪಶ್ಚಿಮ ಬಂಗಾಳ 10 ಕೋಟಿ ರೂ.
  • ಮಣಿಪುರ 2 ಕೋಟಿ ರೂ.

ಜನಪ್ರತಿನಿಧಿಗಳು

  • ಆಪ್ ಶಾಸಕರು, ಸಂಸದರಿಂದ 1 ತಿಂಗಳ ವೇತನ
  • ಜಮ್ಮು-ಕಾಶ್ಮೀರ ಮಾಜಿ ಸಿಎಂ ಓಮರ್ ಅಬ್ದುಲ್ಲಾ 1 ತಿಂಗಳ ವೇತನ
  • ಇಸ್ಲಾಮಿಕ್ ಸೆಂಟರ್ ನಿಂದ ಬಕ್ರಿದ್​ಗೆ ಮೀಸಲಿಟ್ಟಿದ್ದ ನಿಧಿಯಲ್ಲಿ ಶೇ.10ರಷ್ಟು ದೇಣಿಗೆ
  • ಡಿಎಂಕೆ ಪಕ್ಷದಿಂದ 1 ಕೋಟಿ ರೂ.
  • ಬಿಜೆಪಿ ಮುಖಂಡ ವರುಣ್ ಗಾಂಧಿ 2 ಲಕ್ಷ ರೂ.
  • ಕಮಲ್ ಹಾಸನ್ ಪಕ್ಷದಿಂದ 25 ಲಕ್ಷ ರೂ.
  • ಅಮ್ಮ ಸಂಘಟನೆಯಿಂದ 10 ಲಕ್ಷ ರೂ.

ಉದ್ಯಮಿಗಳು

  • ಎನ್​ಆರ್​ಐ ಎಂ.ಎ. ಯೂಸಫ್ 5 ಕೋಟಿ ರೂ.
  • ಪೇಟಿಯಂ ಸಂಸ್ಥಾಪಕ ಶೇಖರ್ 10 ಸಾವಿರ ರೂ.
  • ಪೇಟಿಯಂ ಸಂಸ್ಥೆಯಿಂದ 10 ಕೋಟಿ ಸಂಗ್ರಹ
  • ಮೀನು ಮಾರುವ ಹುಡುಗಿ ಹನಾನ್ 1.5 ಲಕ್ಷ ರೂ.

ಸಿನಿಮಾ ರಂಗ

  • ರಜನಿಕಾಂತ್ 15 ಲಕ್ಷ ರೂ.
  • ನಿರ್ದೇಶಕ ಶಂಕರ್ 10 ಲಕ್ಷ ರೂ.
  • ತಮಿಳುನಟ ಸೂರ್ಯ 25 ಲಕ್ಷ ರೂ.
  • ತಮಿಳುನಟ ಧನುಷ್ 15 ಲಕ್ಷ ರೂ.
  • ವಿಶಾಲ್, ಶಿವಕಾರ್ತಿಕೇಯನ್ ತಲಾ 10 ಲಕ್ಷ ರೂ.
  • ತೆಲುಗು ನಟ ವಿಜಯ್ 5 ಲಕ್ಷ ರೂ.
  • ವಿಜಯ್ ಸೇತುಪಥಿ 25 ಲಕ್ಷ ರೂ.
  • ಮಲಯಾಳಂ ನಟ ಮಮ್ಮುಟ್ಟಿ- ಪುತ್ರ ಡುಲ್ಫಿಕರ್ 25 ಲಕ್ಷ ರೂ.
  • ಮಲಯಾಳಂ ನಟ ಮೋಹನ್ ಲಾಲ್ 25 ಲಕ್ಷ ರೂ.

ಸಂಘ-ಸಂಸ್ಥೆಗಳು- ಕಂಪನಿಗಳು

  • ಸಹಾರಾ ಸಂಸ್ಥೆ 2 ಕೋಟಿ ರೂ.
  • ಜಿಯೊ, ಐಡಿಯಾ ಮುಂತಾದ ಟೆಲಿಕಾಂ ಕಂಪನಿಗಳು ಕೇರಳ ಜನತೆಗೆ ಉಚಿತ ಟಾಕ್​ಟೈಮ್ ಸೇವೆ ಘೊಷಿಸಿವೆ.

Next Story

RELATED STORIES