Top

ತೋತಾಪುರಿ ಬೆಳೆಯೋಕೆ ನವರಸ ನಾಯಕ ರೆಡಿ.!

ತೋತಾಪುರಿ ಬೆಳೆಯೋಕೆ ನವರಸ ನಾಯಕ ರೆಡಿ.!
X

8MM ಪಿಸ್ತೂಲ್ ಹಿಡಿದು ಕ್ರೈಂ ಮಾಡೋಕೆ ಬರ್ತಿರೋ ನವರಸನಾಯಕ ಜಗ್ಗೇಶ್, ಇದೀಗ ಅದಕ್ಕೂ ಮೊದಲು ಮತ್ತೊಂದು ಹೊಸ ವೃತ್ತಿ ಆರಂಭಿಸಿದ್ದಾರೆ. ತೋತಾಪುರಿ ಮಾವು ಬೆಳೆಯೋ ಮೂಲಕ ಕೃಷಿಕನಾಗೋಕೆ ಹೊರಟಿದ್ದಾರೆ ಜಗ್ಗಣ್ಣ. ಇದೇನ್‌ ಕತೆ ಅಂತ ಯೋಚಿಸಬೇಡಿ. ಮುಂದೆ ಓದಿ ಗೊತ್ತಾಗುತ್ತೆ..

ಜಗ್ಗೇಶ್ ಅಂದ್ರೆ ಹಾಸ್ಯ.. ಹಾಸ್ಯ ಅಂದ್ರೆ ಜಗ್ಗೇಶ್. ಈ ನವರಸ ನಾಯಕ ಎಲ್ಲಿ ಇರ್ತಾರೋ ಅಲ್ಲಿ ಹಾಸ್ಯದ ರಸದೌತಣ ಕನ್ಫರ್ಮ್​. ಸದ್ಯ ನೀರ್​ದೋಸೆ ನಂದ್ರ ವರಸೆ ಬದಲಿಸಿದ ಡಾನ್ ಆಗೋಕೆ ಹೊರಟಿದ್ದ ಜಗ್ಗಣ್ಣ, ಮತ್ತೆ ಕಾಮಿಡಿ ಟ್ರ್ಯಾಕ್​ಗೆ ಮರಳಿದ್ದಾರೆ.

ಸದ್ದಿಲ್ಲದೆ ಸೆಟ್ಟೇರಿತು ಜಗ್ಗೇಶ್ ಹೊಸ ಚಿತ್ರ ತೋತಾಪುರಿ

ಹೌದು... ತೋತಾಪುರಿ ಅನ್ನೋ ಶೀರ್ಷಿಕೆಯಲ್ಲಿ ಜಗ್ಗೇಶ್ ಹೊಸ ಚಿತ್ರ ಮಾಡ್ತಿದ್ದಾರೆ. ಲೇಡಿಸ್ ಟೈಲರ್ ಸಿನಿಮಾ ಮಾಡೋದಾಗಿ ಕೆಲ ಸಿದ್ದತೆ ಮಾಡಿಕೊಂಡಿದ್ದ ನಿರ್ದೇಶಕ ವಿಜಯ್ ಪ್ರಸಾದ್, ಇದೀಗ ಅದನ್ನ ಕೈಬಿಟ್ಟು, ಅದೇ ಜಗ್ಗೇಶ್ ಜತೆಗೂಡಿ ತೋತಾಪುರಿಗೆ ಕೈ ಹಾಕಿದ್ದಾರೆ. ಶ್ರೀರಂಗಪಟ್ಟಣದ ನಿಮಿಷಾಂಬ ದೇವಸ್ಥಾನದಲ್ಲಿ ಸರಳ ಪೂಜೆಯೊಂದಿಗೆ ಸೆಟ್ಟೇರಿದ ಈ ಚಿತ್ರ ಸದ್ಯ ಟೈಟಲ್​ನಿಂದ ಗಾಂಧಿನಗರದಲ್ಲಿ ಸಖತ್ ಸದ್ದು ಮಾಡ್ತಿದೆ.

ಜಗ್ಗೇಶ್ ಈ ಸಿನಿಮಾದಲ್ಲಿ ಮತ್ತೆ ಹಾಸ್ಯದ ಹೊನಲು ಹರಿಸಲಿದ್ದು, ನೋಡುಗರ ಹೊಟ್ಟೆ ಹುಣ್ಣಾಗಿಸೋ ಹಾಗೆ ನಗಿಸೋ ಧಾವಂತದಲ್ಲಿದ್ದಾರೆ. ಅಂದಹಾಗೆ ಜಗ್ಗೇಶ್ ತೋತಾಪುರಿ ಚಿತ್ರದಲ್ಲಿ ಹೆಸರಿಗೆ ತಕ್ಕನಾಗಿ ಮಾವು ಬೆಳೆಯೋ ಕೃಷಿಕನ ಪಾತ್ರದಲ್ಲಿ ಕಾಣಸಿಗಲಿದ್ದಾರೆ. ಈಗಾಗ್ಲೇ ಅವರ ಫಸ್ಟ್​ಲುಕ್ ಗೆಟಪ್ ರಿವೀಲ್ ಆಗಿದ್ದು, ಬೊಂಬಾಟ್ ರೆಸ್ಪಾನ್ಸ್ ಕೂಡ ಸಿಕ್ಕಿದೆ.

ಮುಹೂರ್ತದ ದಿನವೇ ಶೂಟಿಂಗ್​ಗೆ ಕಿಕ್ ಸ್ಟಾರ್ಟ್​

ಶ್ರಾವಣಿ ಸುಬ್ರಮಣ್ಯ, ಗೋವಿಂದಾಯನಮಃ, ಶಿವಲಿಂಗದಂತಹ ಸೂಪರ್ ಹಿಟ್ ಸಿನಿಮಾಗಳನ್ನ ಸ್ಯಾಂಡಲ್​ವುಡ್​ಗೆ ಕೊಟ್ಟಂತಹ ಕೆ.ಎ.ಸುರೇಶ್, ಈ ಸಿನಿಮಾನ ನಿರ್ಮಾಣ ಮಾಡ್ತಿರೋದು ವಿಶೇಷ. ಇನ್ನು ವಿಷ್ಣುವರ್ಧನ್ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ ಚಿತ್ರಕ್ಕಿರಲಿದ್ದು. ಮುಹೂರ್ತದ ಜೊತೆ ಜೊತೆಗೇ ಶೂಟಿಂಗ್ ಕೂಡ ಶುರುವಿಟ್ಟಿದೆ ಚಿತ್ರತಂಡ.

ನೀರ್​ದೋಸೆ ನಂತ್ರ ಮತ್ತೆ ಅಂತಹದ್ದೇ ಔಟ್ ಅಂಡ್ ಔಟ್ ಕಾಮಿಡಿ ಕಮರ್ಷಿಯಲ್ ಎಂಟ್ರಟೈನರ್ ಕೊಡೋ ಸನ್ನಾಹದಲ್ಲಿದ್ದಾರೆ ನಿರ್ದೇಶಕ ವಿಜಯ್ ಪ್ರಸಾದ್.

ಒಟ್ಟಾರೆ ತೋತಾಪುರಿ ಟೈಟಲ್, ಜಗ್ಗೇಶ್-ವಿಜಯ್ ಪ್ರಸಾದ್- ಸುರೇಶ್ ಮೆಗಾ ಕಾಂಬಿನೇಷನ್​ನಿಂದ ಇದೊಂದು ಸೂಪರ್ ಹಿಟ್ ಸಿನಿಮಾ ಆಗೋ ಸೂಚನೆ ಕೊಟ್ಟಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ ಹೆಡ್‌, ಟಿವಿ5

Next Story

RELATED STORIES