ಏಷ್ಯನ್ ಗೇಮ್ಸ್ : ಭಾರತಕ್ಕೆ ಮತ್ತೊಂದು ಚಿನ್ನದ ಪದಕ

ಜರ್ಕತಾ : ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 2018 ರ ಏಷ್ಯನ್ ಗೇಮ್ಸ್ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ದೊರೆತಿದೆ.
ಮಹಿಳೆಯರ 50 ಕೆಜಿ ವಿಭಾಗದ ಕುಸ್ತಿ ಪಂದ್ಯಾವಳಿಯನ್ನು ವಿನೇಶ್ ಪೋಗತ್ ಜಪಾನ್ ನ ಯುಕಿ ಐರೀಯನ್ನು 6-2 ಅಂತರದಲ್ಲಿ ಮಣಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.
ಕಳೆದ ನಿನ್ನೆಯಷ್ಟೇ ಏಷ್ಯನ್ ಗೇಮ್ಸ್ನಲ್ಲಿ ಕುಸ್ತಿ ವಿಭಾಗದಲ್ಲಿ ಭಜರಂಗ್ ಪುನಿಯಾ ಮೊದಲ ಚಿನ್ನವನ್ನು ತಂದು ಕೊಟ್ಟಿದ್ದರು.
ಇದರ ಬೆನ್ನಲ್ಲೇ ಇದೀಗ 50 ಕೆಜಿ ಮಹಿಳೆಯರ ಕುಸ್ತಿ ಪಂದ್ಯಾವಳಿಯಲ್ಲಿ ವಿನೇಶ್ ಪೋಗತ್ ಜಪಾನ್ನ ಯುಕಿ ಐರೀಯನ್ ಸೋಲಿಸುವ ಮೂಲಕ ಎರಡನೇಯ ಚಿನ್ನವನ್ನು ದೇಶಕ್ಕೆ ತಂದುಕೊಟ್ಟಿದ್ದಾರೆ.
https://twitter.com/rashtrapatibhvn/status/1031522069685522433
ರಾಷ್ಟ್ರಪತಿ ರಾಮಾನಂದ ಕೊವಿಂದ್ ಮಹಿಳೆಯ ಕುಸ್ತಿ ಪಂದ್ಯಾವಳಿಯಲ್ಲಿ ದೇಶಕ್ಕೆ ಎರಡನೇಯ ಚಿನ್ನದ ಪದಕ ತಂದು ಕೊಟ್ಟ ವಿನೇಶ್ ಪೋಗತ್ ಅವರನ್ನು ಕುರಿತ್ತು ಟ್ವಿಟ್ ಮಾಡ್ದಿದ್ದು, ವಿನೇಶ್ ಪೋಗತ್ಗೆ ಅಭಿನಂದನೆಗಳು, ವಿನೇಶ್ ಪೋಗತ್ ಸಾಧನೇ, ಹರಿಯಾಣಕ್ಕೆ ಮತ್ತು ಭಾರತಕ್ಕೆ ಕೀರ್ತಿ ತಂದಿದೆ ಎಂದು ಹೇಳಿದ್ದಾರೆ.
https://twitter.com/narendramodi/status/1031551008957071360
ಈ ಕುರಿತು ಟ್ವಿಟರ್ನಲ್ಲಿ ಹರ್ಷ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಇದು ದೇಶಕ್ಕೆ ಹೆಮ್ಮೆಯ ವಿಷಯವಾಗಿದೆ. ಚಿನ್ನದ ಪದಕ ತಂದುಕೊಟ್ಟ ವಿನೇಶ್ ಪೋಗತ್ಗೆ ಅಭಿನಂದನೆ ಸಲ್ಲಿಸುತ್ತೇನೆ.
ಕುಸ್ತಿ ಪಂದ್ಯದಲ್ಲಿ ವಿನೇಶ್ ಪೋಗತ್ ಮಾಡಿರುವ ಸಾಧನೆ, ಏಷ್ಯನ್ ಗೇಮ್ಸ್ನ ಮುಂದಿನ ಅಥ್ಲೆಟಿಕ್ ಪಟುಗಳಿಗೆ ಸ್ಪೂರ್ತಿಯಾಗಲಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆಯಾಗಿ ಏಷ್ಯನ್ ಗೇಮ್ಸ್ನಲ್ಲಿ ಭಜರಂಗ್ ಪುನಿಯಾ ಪುರುಷರ ವಿಭಾಗದ ಕುಸ್ತಿ ಪಂದ್ಯದಲ್ಲಿ ಭಾರತಕ್ಕೆ ಮೊದಲ ಚಿನ್ನ ತಂದುಕೊಟ್ಟರೇ, ಮಹಿಳೆಯರ ಕುಸ್ತಿ ಪಂದ್ಯದಲ್ಲಿ ವಿನೇಶ್ ಪೋಗತ್ ಎರಡನೇ ಚಿನ್ನದ ಪದಕ ತಂದುಕೊಟ್ಟಿದ್ದಾರೆ.
ಭಾರತಕ್ಕೆ ಏಷ್ಯನ್ ಗೇಮ್ಸ್ನಲ್ಲಿ ಬಂದ ಪದಕಗಳ ಪಟ್ಟಿ
- ಎರಡು ಚಿನ್ನದ ಪದಕ
- ಎರಡು ಬೆಳ್ಳಿ ಪದಕ
- ಒಂದು ಕಂಚು