Top

ಮಡಿಕೇರಿಯಲ್ಲಿ ತಗ್ಗಿದ ಮಳೆಯ ಬಿರುಸು: ಪರಿಹಾರ ಕಾರ್ಯ ಚುರುಕು

ಮಡಿಕೇರಿಯಲ್ಲಿ ತಗ್ಗಿದ ಮಳೆಯ ಬಿರುಸು: ಪರಿಹಾರ ಕಾರ್ಯ ಚುರುಕು
X

ಕೊಡಗಿನಲ್ಲಿ ಕಳೆದ ಒಂದು ವಾರದಿಂದ ಸತತವಾಗಿ ಸುರಿಯುತ್ತಿದ್ದ ಮಳೆಯ ಬಿರುಸು ಭಾನುವಾರ ಕಡಿಮೆಯಾಗಿದ್ದು, ಪ್ರವಾಹ ಪರಿಸ್ಥಿತಿ ನಿಧಾನವಾಗಿ ಕಡಿಮೆಯಾಗುತ್ತಿದೆ. ಇದರ ಬೆನ್ನಲ್ಲೇ ಪರಿಹಾರ ಕಾರ್ಯ ಚುರುಕುಗೊಂಡಿದೆ.

ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿರುವುದರಿಂದ ರಕ್ಷಣಾ ತಂಡಗಳು ಸಂತ್ರಸ್ತ ಜನರನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸುತ್ತಿದ್ದಾರೆ.

ಜಿಲ್ಲೆಯ ಹಲವೆಡೆ ಗುಡ್ಡ ಕುಸಿತದಿಂದ ಅವಶೇಷಗಳಿಂದ ಮುಚ್ಚಿಹೋಗಿದ್ದ ರಸ್ತೆಗಳ ತೆರವು ಕಾರ್ಯಾಚರಣೆ ಆರಂಭಿಸಲಾಗಿದೆ. ಪ್ರವಾಹ ಹಾಗೂ ಗುಡ್ಡ ಕುಸಿತದಿಂದ ದ್ವೀಪಪ್ರದೇಶದಂತಾಗಿ ನಾಪತ್ತೆಯಾಗಿದ್ದ ನೂರಾರು ಜನರನ್ನು ಎನ್ ಡಿಆರ್ ಎಫ್, ಕ್ಷಿಪ್ರಕಾರ್ಯ ಪಡೆ ಹಾಗೂ ಯೋಧರು ರಕ್ಷಿಸಿದ್ದಾರೆ.

ಪ್ರತಿಕೂಲ ಹವಾಮಾನದಲ್ಲಿಯೂ ಮಡಿಕೇರಿಗೆ ಆಗಮಿಸಿದ ಹೆಲಿಕಾಪ್ಟರ್ ಗಳ ಸಹಾಯದಿಂದ ಸಂತ್ರಸ್ತರನ್ನು ರಕ್ಷಿಸಲಾಯಿತು. ಕೆಲವು ಕಡೆಗಳಲ್ಲಿ ಕಿಲೋ ಮೀಟರ್ ದೂರದಲ್ಲಿದ್ದ ಜನರನ್ನು ರಕ್ಷಿಸಲಾಗಿದೆ. ಜೋಡುಪಾಳ್ಯದಲ್ಲಿ ಗರ್ಭೀಣಿ ಸೇರಿದಂತೆ ಹಲವು ಜನರು ಎನ್ ಡಿಆರ್ ಎಫ್ ಸಿಬ್ಬಂದಿ ರಕ್ಷಿಸಿದ್ದಾರೆ. ನಿನ್ನೆ ಗುಡ್ಡ ಕುಸಿತದಿಂದ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರ ಶವ ಇಂದು ಪತ್ತೆಯಾಗಿದೆ.

ಮಳೆ ಭಾದಿತ ಪ್ರದೇಶಗಳಿಗೆ ಭೇಟಿ ನೀಡಿದ್ದ ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಡಿ. ವಿ. ಸದಾನಂದಗೌಡ, ಗುಡ್ಡ ಕುಸಿತ ಹಾಗೂ ಪ್ರವಾಹದಿಂದಾಗಿ ಸುಮಾರು 40 ಜನರು ನೀರಿನಲ್ಲಿ ಕೊಚ್ಚಿಹೋಗಿದ್ದು, ಇಂತಹ ವಿಪತ್ತನ್ನು ನನ್ನ ಜೀವಮಾನದಲ್ಲಿಯೇ ಕಂಡಿರಲಿಲ್ಲ . ಯೋಧರು ಶ್ರಮವಹಿಸಿ ಸಂಕಷ್ಟದಲ್ಲಿ ಸಿಲುಕಿದ 500 ಜನರನ್ನು ರಕ್ಷಿಸಿದ್ದಾರೆ ಎಂದು ಹೇಳಿದರು.

ಕೇಂದ್ರ ಸರ್ಕಾರ ಅಗತ್ಯ ಸಹಕಾರ ನೀಡುತ್ತಿದ್ದು, ಹಾನಿ ಕುರಿತು ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ ಹಾಗೂ ನಿತಿನ್ ಗಡ್ಕರಿ ಅವರಿಗೆ ವರದಿ ಸಲ್ಲಿಸುವುದಾಗಿ ತಿಳಿಸಿದರು.

ಶಾಸಕ ಕೆ. ಜಿ. ಬೋಪಯ್ಯ ಮಾತನಾಡಿ, ಜಿಲ್ಲಾಡಳಿತದಿಂದ ಅಗತ್ಯ ಹಣ ಬಿಡುಗಡೆಯಾಗಿಲ್ಲ. ಇದರ ಬಗ್ಗೆ ಕೇಳಿದರೆ ಲಿಖಿತ ಹೇಳಿಕೆಯಲ್ಲಿ ನೀಡುವಂತೆ ಕೇಳಲಾಗಿದೆ ಎಂದು ಆರೋಪಿಸಿದ ಅವರು ಕ್ಷಿಪ್ರ ಕಾರ್ಯ ಕೈಗೊಳ್ಳದ ಜಿಲ್ಲಾಡಳಿತದ ಬಗ್ಗೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇನೆ ಎಂದು ತಿಳಿಸಿದರು.

Next Story

RELATED STORIES