Top

ಸಿಎಂ ಕರೆಗೆ ಓಗೊಟ್ಟ ವೈದ್ಯರು : ಕೊಡಗು ಸಂತ್ರಸ್ತರ ನೆರವಿಗೆ ಸ್ಪಂದನೆ

ಸಿಎಂ ಕರೆಗೆ ಓಗೊಟ್ಟ ವೈದ್ಯರು : ಕೊಡಗು ಸಂತ್ರಸ್ತರ ನೆರವಿಗೆ ಸ್ಪಂದನೆ
X

ಹಾಸನ : ಕೊಡಗು ಮತ್ತು ಕೇರಳದ ನೆರೆ ಸಂತ್ರಸ್ತರಿಗೆ ರಾಜ್ಯದ ಜನತೆ ಉತ್ತಮವಾಗಿ ಸ್ಪಂದಿಸುತ್ತಿದ್ದು, ಅವಶ್ಯಕವಾಗಿರುವ ವಸ್ತುಗಳನ್ನು ಒದಗಿಸುತ್ತಿದ್ದಾರೆ.

ಈ ನಡುವೆ ಮಡಿಕೇರಿ ಪ್ರವಾಹ ಸಂತ್ರಸ್ತರ ಆರೋಗ್ಯಕ್ಕಾಗಿ ಖುದ್ದು ಸಿಎಂ ಕುಮಾರಸ್ವಾಮಿಯವರ ಮನವಿಗೆ ಸ್ಪಂದಿಸಿರುವ ವೈದ್ಯರುಗಳು ಭಾನುವಾರ ಮಡಿಕೇರಿಗೆ ದೌಡಾಯಿಸಿದ್ದಾರೆ.

ಮೈಸೂರಿನ ಕೆ.ಆರ್. ಆಸ್ಪತ್ರೆ, ಜೆಎಸ್‍ಎಸ್ ಆಸ್ಪತ್ರೆ ಸೇರಿದಂತೆ ನೆರೆಯ ಜಿಲ್ಲೆಗಳಿಂದ ವೈದ್ಯರ ತಂಡ ಆಗಮಿಸಿ ಜನರ ಶುಶ್ರೂಷೆಯಲ್ಲಿ ತೊಡಗಿದ್ದಾರೆ.

ಈಗಾಗಲೇ ತಾತ್ಕಾಲಿಕ ಆಸ್ಪತ್ರೆ ಹಾಗೂ ತಾಲೂಕಿನ ಎಲ್ಲಾ ಆಸ್ಪತ್ರೆಗಳಿಗೆ ಹೆಚ್ಚುವರಿಯಾಗಿ ಔಷಧಿಯನ್ನು ಪೂರೈಸಲಾಗಿದೆ.

ವೈದ್ಯರ ತಂಡಕ್ಕೆ ಡಿಸಿ ರೋಹಿಣಿ ಸಿಂಧೂರಿ ಮಾರ್ಗದರ್ಶನನೀಡಿದ್ದು, ಒಂದು ಆಂಬ್ಯುಲೆನ್ಸ್ ಜೊತೆಗೆ ಮತ್ತೊಂದು ವಾಹನದಲ್ಲಿ ಔಷಧಿಯೊಂದಿಗೆ ವೈದ್ಯರ ತಂಡ ತೆರಳಿದೆ.

ಪರಿಸ್ಥಿತಿ ನೋಡಿ ಅಗತ್ಯಾನುಸಾರ ಹೆಚ್ಚುವರಿ ವೈದ್ಯರು ಭಾಗಿಯಾಗಲಿದ್ದು ಸಿ.ಎಂ ಕುಮಾರಸ್ವಾಮಿ ಕರೆಗೆ ಓಗೊಟ್ಟು ಸ್ವಯಂ ಪ್ರೇರಿತರಾಗಿ ಹೋರಟಿದ್ದೇವೆ ಎಂದು ಆಸ್ಪತ್ರೆ ಮುಖ್ಯಸ್ಥ ಡಾ.ಅಬ್ದುಲ್ ಬಷೀರ್ ಹೇಳಿದ್ದಾರೆ.

Next Story

RELATED STORIES