Top

ಕೊಡಗಿನ ಸಂತ್ರಸ್ತರಿಗೆ ಜನಪ್ರತಿನಿಧಿಗಳ ನೆರವಿನ ಹಸ್ತ

ಕೊಡಗಿನ ಸಂತ್ರಸ್ತರಿಗೆ ಜನಪ್ರತಿನಿಧಿಗಳ ನೆರವಿನ ಹಸ್ತ
X

ಬೆಂಗಳೂರು : ಕೊಡಗಿನ ಸಂತ್ರಸ್ತರಿಗೆ ರಾಜ್ಯದ ಜನರ ನೆರವಿನ ಮಹಾಪೂರವನ್ನೇ ನೀಡುತ್ತಿದ್ದಾರೆ. ಇತ್ತ ರಾಜ್ಯದ ಜನರಂತೇ, ಈಗ ಶಾಸಕರುಗಳು ಕೂಡ ಭಾಗಿಯಾಗಲು ಮುಂದಾಗಿದ್ದಾರೆ.

ಕಾವೇರಿನಾಡಿನಲ್ಲಿ ಉಂಟಾದ ಪ್ರವಾಹದಿಂದ ಜನರು ತಮ್ಮ ಆಸ್ತಿ-ಪಾಸ್ತಿ ಕಳೆದುಕೊಂಡಿದ್ದು, ಅವರ ಬದುಕು ನೆರವಾಗಲು ಜನಪ್ರತಿನಿಧಿಗಳು ತಮ್ಮ ತಿಂಗಳ ಸಂಬಳವನ್ನು ನೀಡಿದ್ದಾರೆ.

ಕೊಡಗು ನೆರೆ ಸಂತ್ರಸ್ತರ ಕುರಿತು ನಾಡಿನೆಲ್ಲೆಡೆ ಜನರು ಮಿಡಿದಿದ್ದು, ಅವರಿಗೆ ಅಗತ್ಯ ವಸ್ತುಗಳನ್ನು ಜನಸಾಮಾನ್ಯರು ನೀಡುತ್ತಿದ್ದಾರೆ.

ಇನ್ನೂ ಕಾಂಗ್ರೆಸ್​, ಬಿಜೆಪಿ ಶಾಸಕರು ತಮ್ಮ 1 ತಿಂಗಳ ಸಂಬಂಳವನ್ನು ನೀಡಲು ನಿರ್ಧರಿಸಿದ್ದಾರೆ. ಈ ನಿರ್ಧಾವರನ್ನು ಇಂದು ಉಭಯ ಪಕ್ಷಗಳ ಜನಪ್ರತಿನಿಧಿಗಳು ಪ್ರಕಟಿಸಿದ್ದಾರೆ.ಇಂದು ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಶಾಸಕರು ತಮ್ಮ ಎರಡು ತಿಂಗಳ ವೇತನವನ್ನು ನೀಡುವಂತೆ ಆರ್​ ಅಶೋಕ್‌ಗೆ ಮನವಿ ಮಾಡಿದರು.

ಅದರಂತೆ ಎಲ್ಲಾ ಬಿಜೆಪಿ ಶಾಸಕರು ತಮ್ಮ ಸಂಬಳ ನೀಡಲು ಮುಂದಾಗಿದ್ದಾರೆ. ಅಲ್ಲದೇ ಬಿಬಿಎಂಪಿ ಸದಸ್ಯರು ಹಾಗೂ ಪದಾಧಿಕಾರಿಗಳು 10 ಸಾವಿರ ನೀಡಲು ನಿರ್ಧರಿಸಿದ್ದಾರೆ.

ಇತ್ತ ಕಾಂಗ್ರೆಸ್​ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಸಂಸದರು ಕೂಡ ತಮ್ಮ ಒಂದು ತಿಂಗಳ ಸಂಬಳ ಕೊಡುವಂತೆ ಕಾಂಗ್ರೆಸ್ ಜನಪ್ರತಿನಿಧಿಗಳಿಗೆ ಕಾಂಗ್ರೆಸ್​ ಅಧ್ಯಕ್ಷ ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆ.

ಈ ಹಿನ್ನಲೆಯಲ್ಲಿ ಬಿಜೆಪಿ ಜನಪ್ರತಿನಿಧಿಗಳಂತೆ, ಕಾಂಗ್ರೆಸ್‌ನ ಜನಪ್ರತಿನಿಧಿಗಳು ನೆರೆ ಹಾವಳಿಗೆ ತುತ್ತಾದ ಜನರಿಗೆ ನೆರವಾಗಲು ಮುಂದಾಗಿದ್ದಾರೆ. ಈ ಮಧ್ಯೆ ಕೊಡಗು ನೆರೆ ಸಂತ್ರಸ್ತರಿಗೆ ನೆರವಾಗಲಿ ಸಚಿವ ಜಮೀರ್​ ಅಹಮದ್​ ಕೂಡ ತಮ್ಮ ಒಂದು ತಿಂಗಳ ಸಂಬಳವನ್ನು ನೀಡುವುದಾಗಿ ಘೋಷಿಸಿದ್ದಾರೆ.

Next Story

RELATED STORIES