Top

ಮಧ್ಯಮ ವೇಗಿ ಮಿಚೆಲ್ ಜಾನ್ಸನ್ ಕ್ರಿಕೆಟ್​ಗೆ ವಿದಾಯ

ಮಧ್ಯಮ ವೇಗಿ ಮಿಚೆಲ್ ಜಾನ್ಸನ್ ಕ್ರಿಕೆಟ್​ಗೆ ವಿದಾಯ
X

ಆಸ್ಟ್ರೇಲಿಯಾದ ಮಧ್ಯಮ ಎಡಗೈ ವೇಗಿ ಮಿಚೆಲ್ ಜಾನ್ಸನ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ್ದಾರೆ.

ಭಾನುವಾರ ಸುದ್ದಿಗೋಷ್ಠಿ ನಡೆಸಿದ ಮಿಚೆಲ್ ಜಾನ್ಸನ್ ಎಲ್ಲಾ ಮಾದರಿಯ ಕ್ರಿಕೆಟ್​ನಿಂದ ದೂರ ಸರಿಯುವುದಾಗಿ ಘೋಷಿಸಿದರು.

ಕಳೆದ ಐಪಿಎಲ್​ನಲ್ಲಿಯೇ ಸತತ ಬೆನ್ನುನೋವು ಕಾಡಿತ್ತು. ಇದು ನಿವೃತ್ತಿಯ ಮುನ್ಸೂಚನೆ ಎನಿಸಿಕೊಂಡಿತು. ನಾನೀಗಾಗಲೇ ಕೊನೆಯ ಪಂದ್ಯ ಆಡಿದ್ದೇನೆ. ಕೊನೆಯ ವಿಕೆಟ್ ಕೂಡ ಪಡೆದಿದ್ದೇನೆ ಎಂದರು.

2001ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಜಾನ್ಸನ್, 2007ರಲ್ಲಿ ಟೆಸ್ಟ್ ಕ್ರಿಕೆಟ್​ಗೆ ಕಾಲಿಟ್ಟರು. 2008ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 61 ರನ್​ಗೆ 8 ವಿಕೆಟ್ ಪಡೆದಿದ್ದು ಶ್ರೇಷ್ಠ ಪ್ರದರ್ಶನವಾಗಿದೆ.

ಆಸ್ಟ್ರೇಲಿಯಾ ಪರ 73 ಟೆಸ್ಟ್ ಆಡಿರುವ ಜಾನ್ಸನ್, 313 ವಿಕೆಟ್ ಪಡೆದಿದ್ದಾರೆ. 153 ಏಕದಿನ ಪಂದ್ಯಗಳಲ್ಲಿ 239 ವಿಕೆಟ್ ಕಬಳಿಸಿದ್ದಾರೆ. ಆಸ್ಟ್ರೇಲಿಯಾ ಪರ 30 ಟಿ-20 ಆಡಿದ್ದು 38 ವಿಕೆಟ್ ಗಳಿಸಿದ್ದಾರೆ.

Next Story

RELATED STORIES