ಏಷ್ಯನ್ ಗೇಮ್ಸ್: ಪದಕ ತಂದ ಶೂಟರ್ಸ್, ಸುಶೀಲ್ ಕುಮಾರ್ಗೆ ಆಘಾತ

X
TV5 Kannada19 Aug 2018 7:51 AM GMT
ಇಂಡೋನೇಷ್ಯಾದ ಜಕಾರ್ತದಲ್ಲಿ ಭಾನುವಾರ ಆರಂಭಗೊಂಡ ಏಷ್ಯನ್ ಗೇಮ್ಸ್ನ ಮೊದಲ ದಿನವೇ ಭಾರತೀಯ ಶೂಟರ್ ಗಳು ಪದಕದ ಖಾತೆ ತೆರೆದರೆ, ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಮೊದಲ ಸುತ್ತಿನಲ್ಲೇ ಸೋತು ಆಘಾತ ಅನುಭವಿಸಿದ್ದಾರೆ.
ಅಪೂರ್ವಿ ಚಾಂಡಿಲಾ ಮತ್ತು ರವಿಕುಮಾರ್ ಜೋಡಿ 10 ಮೀ. ಏರ್ ರೈಫಲ್ಸ್ ಮಿಶ್ರ ತಂಡದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಮೊದಲ ಪದಕ ತಂದುಕೊಟ್ಟರು. ಈ ಜೋಡಿ 429.9 ಅಂಕ ಗಳಿಸಿತು.
ಎರಡು ಬಾರಿ ಒಲಿಂಪಿಕ್ಸ್ನಲ್ಲಿ ಪದಕ ಗೆದ್ದು ಇತಿಹಾಸ ಬರೆದಿರುವ ಕುಸ್ತಿಪಟು ಸುಶೀಲ್ ಕುಮಾರ್ ಪುರುಷರ 74 ಕೆಜಿ ವಿಭಾಗದ ಮೊದಲ ಸುತ್ತಿನಲ್ಲೇ ಬಾಂಗ್ಲಾದೇಶದ ಆ್ಯಡಂ ಬೈಟ್ರೊವ್ ವಿರುದ್ಧ 3-5ರಿಂದ ಆಘಾತ ಅನುಭವಿಸಿದರು. ಇದೀಗ ಆ್ಯಡಂ ಫೈನಲ್ ಪ್ರವೇಶಿಸಿದರೆ ಮಾತ್ರ ಸುಶೀಲ್ ಗೆ ಮತ್ತೊಂದು ಅವಕಾಶ ಲಭಿಸಲಿದೆ. ಇಲ್ಲದಿದ್ದರೆ ಟೂರ್ನಿಯಿಂದ ಹೊರಬಿದ್ದಂತೆ.
Next Story