ಏಷ್ಯನ್ ಗೇಮ್ಸ್ : ಭಾರತಕ್ಕೆ ಮೊದಲ ಚಿನ್ನ ತಂದ 'ಭಜರಂಗ್ ಪುನಿಯಾ'

ಜಖಾರ್ತ್ನಲ್ಲಿ ನಡೆಯುತ್ತಿರುವ 2018ರ ಏಷ್ಯನ್ ಗೇಮ್ಸ್ನಲ್ಲಿ ಭಾರತಕ್ಕೆ ಭಜರಂಗ್ ಪುನಿಯಾ ಮೊದಲ ಚಿನ್ನದ ಪದಕ ತಂದು ಕೊಟ್ಟಿದ್ದಾರೆ.
ಜಪಾನಿನ ದೈಚಿ ತಕ್ತಾನಿ ವಿರುದ್ಧ ನಡೆದ ಪುರುಷರ ವಿಭಾಗದ ಕುಸ್ತಿಯಲ್ಲಿ, 11-8, ಅಂಕ ಗಳಿಸುವ ಮೂಲಕ 65ಕೆಜಿ ಫ್ರೀಸೈಲ್ ನಲ್ಲಿ ಚಿನ್ನದ ಪದಕವನ್ನು ಕೊರಳ ಮಾಲೆಯಾಗಿ ಸ್ವೀಕರಿಸಿದರು.
ಏಷ್ಯನ್ ಗೇಮ್ನಲ್ಲಿ ಇದು ಭಜರಂಗ್ ಪುನಿಯಾ ಗಳಿಸಿದ ಎರಡನೇಯ ಪದಕವಾಗಿದೆ. ಈ ಹಿಂದೆ 2014ರಲ್ಲಿ ನಡೆದ ಏಷಿಯನ್ ಗೇಮ್ನಲ್ಲೂ ಪುರುಷರ ವಿಭಾಗ ಕುಸ್ತಿಯಲ್ಲಿ ಪದಕವನ್ನು ಪಡೆದಿದ್ದರು.
ಅಂದಹಾಗೇ, ಕೇವಲ 24ನೇ ವಯಸ್ಸಿನಲ್ಲಿಯೇ ಕಂಚಿನ ಪದಕ ಪಡೆಯುವ ಮೂಲಕ 2013ರಲ್ಲಿ ವಿಶ್ವಚಾಂಪಿಯನ್ ಆಗಿ ಭಜರಂಗ್ ಪುನಿಯಾ ಹೊರ ಹೊಮ್ಮಿದ್ದರು.
ಆನಂತ್ರದ 2014ರಲ್ಲಿ ನಡೆದ ಏಷ್ಯನ್ ಮತ್ತು ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತಕ್ಕೆ ಬೆಳ್ಳಿ ಪದಕವನ್ನು ತಂದು ಕೊಟ್ಟಿದ್ದರು.
https://twitter.com/AmitShah/status/1031186745226752000
ಏಷ್ಯನ್ ಗೇಮ್ಸ್ನಲ್ಲಿ ಭಾರತಕ್ಕೆ ಮೊದಲ ಕುಸ್ತಿ ತಂದು ಕೊಟ್ಟ ಭಜರಂಗ್ ಪುನಿಯಾ ಬಗ್ಗೆ ಟ್ವಿಟ್ ಮಾಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಭಜರಂಗ್ ಪುನಿಯಾ ದೇಶಕ್ಕೆ ಕೀರ್ತಿ ತಂದಿದ್ದಾರೆ. ಅಭಿನಂದನೆಗಳು ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.