ಮೂರನೇ ಟೆಸ್ಟ್: ಭಾರತ 329ಕ್ಕೆ ಆಲೌಟ್

X
TV5 Kannada19 Aug 2018 11:20 AM GMT
ಮಧ್ಯಮ ವೇಗಿಗಳಾದ ಸ್ಟುವರ್ಟ್ ಬ್ರಾಡ್ ಮತ್ತು ಜೇಮ್ಸ್ ಆ್ಯಂಡರ್ಸನ್ ದಾಳಿಗೆ ತತ್ತರಿಸಿದ ಭಾರತ ತಂಡ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ 329 ರನ್ ಗಳಿಗೆ ಆಲೌಟಾಗಿದೆ.
6 ವಿಕೆಟ್ಗೆ 307 ರನ್ ಗಳಿಂದ ಎರಡನೇ ದಿನವಾದ ಭಾನುವಾರ ಮೊದಲ ಇನಿಂಗ್ಸ್ ಮುಂದುವರಿಸಿದ ಭಾರತ ತಂಡ ಅಲ್ಪಾವಧಿಯ ಆಟದಲ್ಲೇ ಆಲೌಟಾಯಿತು.
ನಿನ್ನೆ ಕ್ರಿಸ್ ನಲ್ಲಿದ್ದ ರಿಷಭ್ ಪಂತ್ ನಿನ್ನೆ ಮೊತ್ತಕ್ಕೆ 2 ರನ್ ಸೇರಿಸಿ (24) ಮೊದಲಿಗರಾಗಿ ಔಟಾದರು. ಪಂತ್ ಔಟಾಗುತ್ತಿದ್ದಂತೆ ಉಳಿದ ಬ್ಯಾಟ್ಸ್ ಮನ್ ಗಳು ಪೆವಿಲಿಯನ್ ಪೇರೆಡ್ ನಡೆಸಿದರು.
ಇಂಗ್ಲೆಂಡ್ ಪರ ಬ್ರಾಡ್ ಮತ್ತು ಆ್ಯಂಡರ್ಸನ್ ತಲಾ 3 ವಿಕೆಟ್ ಪಡೆದರು.
Next Story