Top

ಆಗಸ್ಟ್ 23ಕ್ಕೆ ಒಂದಲ್ಲ ಎರಡಲ್ಲ ರಾಜ್ಯಾದ್ಯಂತ ತೆರೆಗೆ.!

ಆಗಸ್ಟ್ 23ಕ್ಕೆ ಒಂದಲ್ಲ ಎರಡಲ್ಲ ರಾಜ್ಯಾದ್ಯಂತ ತೆರೆಗೆ.!
X

ಬೆಂಗಳೂರು : ರಾಮಾ ರಾಮಾ ರೇ ಖ್ಯಾತಿಯ ಸತ್ಯ ಪ್ರಕಾಶ್ ಪರಿಕಲ್ಪನೆಯಲ್ಲಿ ಮೂಡಿಬಂದಿರುವ ಒಂದಲ್ಲ ಎರಡಲ್ಲ ಸಿನಿಮಾ ರಿಲೀಸ್​ಗೆ ಸರ್ವ ಸನ್ನಧವಾಗಿದೆ.. ತಮ್ಮ ಮೇಲೋಡಿ ಹಾಡುಗಳಿಂದಲೇ ಚಿತ್ರದಲ್ಲಿ ಏನೋ ಅಡಗಿದೆ ಅನ್ನೋ ಭಾವನ್ನು ಪ್ರೇಕ್ಷಕರಲ್ಲಿ ಮೂಡಿಸುತ್ತಿದೆ.. ಮುಂದಿನ ವಾರ ರಾಜ್ಯದ್ಯಾಂತ ತೆರೆಕಾಣುತ್ತಿರುವ ಒಂದಲ್ಲ ಎರಡಲ್ಲ ಸಿನಿಮಾದ ಕುರಿತು ಒಂದಷ್ಟು ಇಂಟ್ರಸ್ಟಿಂಗ್ ಸಮಾಚಾರ್ ಮುಂದೆ ಓದಿ..

ರಾಮಾ ರಾಮಾ ರೇ ಅನ್ನೋ ವಂಡರ್​ ಥಂಡರ್ ಸಿನಿಮಾವನ್ನು ಚಿತ್ರರಂಗಕ್ಕೆ ಕೊಟ್ಟು ಇಡೀ ದಕ್ಷಿಣ ಭಾರತವೇ ಕನ್ನಡ ಸಿನಿರಂಗದತ್ತ ನೋಡುವಂತೆ ಮಾಡಿದ್ರು ನಿರ್ದೇಶಕ ಸತ್ಯ ಪ್ರಕಾಶ್​.. ರಾಮಾ ರಾಮಾ ರೇ ನಂತರ ಸತ್ಯ ಪ್ರಕಾಶ್ ಏನು ಮಾಡಲಿದ್ದಾರೆ ಎಂದು ಅಭಿಮಾನಿಗಳು ಕೇಳುತ್ತಿರುವಾಗಲೇ ಒಂದಲ್ಲಾ ಎರಡಲ್ಲಾ ಚಿತ್ರದ ಮೂಲಕ ಬರುತ್ತಿದ್ದಾರೆ..

ಸತ್ಯ ಪ್ರಕಾಶ್ ಕಲ್ಪನೆಯೇ ಅದ್ಭುತ.. ಅದನ್ನು ಈಗಾಲ್ಲೇ ಜಯನಗರ 4th ಬ್ಲಾಕ್ ಮತ್ತು ರಾಮಾ ರಾಮಾ ರೇ ಚಿತ್ರದ ಮೂಲಕ ತೋರಿಸಿದ್ದಾರೆ. ಈಗ ನಮ್ಮೊಳ್ಳಗೆ ಕಳೆದು ಹೋಗಿರುವ ಒಬ್ಬ ಮುಗ್ದ ಹುಡ್ಗನನ್ನು ಪತ್ತೆ ಹಚ್ಚಲು ಒಂದಲ್ಲಾ ಎರಡಲ್ಲಾ ಚಿತ್ರದ ಮೂಲಕ ಬರುತ್ತಿದ್ದಾರೆ.. ಈಗಾಗಲೇ ಟ್ರೈಲರ್ ಮತ್ತು ಸಾಂಗ್ಸ್ ನಿರೀಕ್ಷೆಯನ್ನು ಮೂಡಿಸಿದ್ದು ಈ ಸಿನಿಮಾ ನೋಡಲೇ ಬೇಕು ಅನ್ನೋ ಆಸೆಯನ್ನು ಅಭಿಮಾನಿಗಳಲ್ಲಿ ಮೂಡಿಸಿದೆ..

ಇನ್ನು ಒಂದಲ್ಲ ಎರಡಲ್ಲ ಹಾಡುಗಳ ಬಗ್ಗೆ ಬಣ್ಣಿಸಲೇ ಬೇಕು.. ರಾಮಾ ರಾಮಾ ರೇ ಚಿತ್ರದ ಮೂಲಕ ಗುರುತ್ತಿಸಿಕೊಂಡ ಎಂಗ್ ಮಲ್ನಾಡ ಮೇಲೋಡಿ ಕಿಂಗ್ ವಾಸುಕಿ ವೈಭವ್ ಸ್ವರಕ್ಕೆ , ಸೂತ್ರಧಾರ ಸತ್ಯ ಪ್ರಕಾಶ್ ಸಾಹಿತ್ಯ ಸಿರಿ ಅದ್ಭುತವಾಗಿ ಮ್ಯಾಚ್ ಆಗಿದೆ.. ಕಳೆದ ಬಾರಿ ರಾಮಾ ರಾಮಾ ರೇ ಚಿತ್ರಕ್ಕೆ ನಾಬಿಲ್ ಪಾಲ್ ಹಿನ್ನಲೆ ಸಂಗೀತ ಒದಗಿಸಿದ್ರು.. ಆದ್ರೆ ಈಗ ವಾಸುಕಿ ಜೊತೆಗೆ ನಾಬಿಲ್ ಪಾಲ್ ಕೂಡ ಸಂಗೀತ ಸಂಯೋಜನೆ ಮಾಡಿದ್ದಾರೆ.. ಇಬ್ಬರ ಜಂಟಿ ವಾಧ್ಯಗೋಷ್ಠಿ ಚಿತ್ರಕ್ಕೆ ಪುಷ್ಟಿಕೊಟ್ಟಿದೆ..

ಸತ್ಯ ಪ್ರಕಾಶ್ ಕನಸಿಗೆ ನಿರೇರೆದವರು ನಿರ್ಮಾಪಕ ಉಮಾಪತಿ.. ಅದ್ದೂರಿಯಾಗಿ ಹೆಬ್ಬುಲಿ ಚಿತ್ರವನ್ನು ನಿರ್ಮಾಣ ಮಾಡಿದ್ದ ಉಮಾಪತಿ ಈ ಬಾರಿ ಒಂದೊಳ್ಳೆ ಕುತೂಹಲ ಭರಿತ ಸಿನಿಮಾಕ್ಕೆ ಬಂಡವಾಳ ಹುಡಿದ್ದಾರೆ..

ಇನ್ನು ಇದು ಮಕ್ಕಳ ಸಿನಿಮಾ ಅನ್ನೋದು ಮೇಲೋಟಕ್ಕೆ ಸ್ಪಷ್ಟವಾಗುತ್ತೆ.. ಆದ್ರೆ ಚಿತ್ರತಂಡದ ಅಭಿಪ್ರಯವೇ ಬೇರೆ.. ಇದು ಫುಲ್ ಫ್ಲೆಡ್ಜ್ ಮಕ್ಕಳ ಸಿನಿಮಾ ಅಲ್ಲ.. ಬೇರೆಯದ್ದೆ ಜಾನರ್ ಸಿನಿಮಾ ಅನ್ನಲಾಗ್ತಿದೆ.. ಈ ಚಿತ್ರದಲ್ಲಿ ಬಾಲ ನಟನಾಗಿ ಕಾಣಸಿಕೊಂಡಿರುವ ಮಾಸ್ಟರ್ ಲೋಹಿತ್ ಬಗ್ಗೆ ಒಂದು ರೋಚಕ ಕತೆಯೇ ಇದೆ..

ಸಮೀರ ಅನ್ನೋ ಪಾತ್ರಕ್ಕಾಗಿ ಹುಡುಕಾಟ ಶುರುಮಾಡಿದ ಒಂದಲ್ಲಾ ಎರಡಲ್ಲಾ ಚಿತ್ರತಂಡ ಬರೋಬ್ಬರಿ 1500 ಜೂನಿಯರ್ ಆರ್ಟಿಸ್ಟ್​ಗಳ ಆಡಿಷನ್ ಮಾಡಿದ್ದ್ದಾರೆ.. 1500ಜನರಲ್ಲಿ ಕೊನೆಗೆ ಆಯ್ಕೆಯಾಗಿದ್ದು ಮಾಸ್ಟರ್ ಲೋಹಿತ್.. ಈಗಾಗಲೇ ಟ್ರೈಲರ್​ನಲ್ಲಿ ಲೋಹಿತ್ ಭರವಸೆ ಮೂಡಿಸಿದ್ದಾನೆ..

ಡಿಫರೆಂಟ್ ಲಿರಿಕಲ್ ವಿಡಿಯೋಸ್ , ಮೇಕಿಂಗ್ , ಟ್ರೈಲರ್​ನಿಂದ ಸದ್ದು ಮಾಡುತ್ತಿರುವ ಎರಡಲ್ಲ ಒಂದಲ್ಲ ಚಿತ್ರದಲ್ಲಿ ಅದೇನು ಅಡಗಿದಿಯೋ ಅನ್ನೋ ಕುತೂಹಲ ಮೂಡೋದು ಗ್ಯಾರಂಟಿ.. ಶೂಟಿಂಗೂ, ಎಡಿಟಿಂಗೂ ಎಲ್ಲಾ ಮುಗಿಸಿಕೊಂಡಿರುವ ಒಂದಲ್ಲಾ ಎರಡಲ್ಲಾ ಚಿತ್ರ ಮುಂದಿನ ವಾರ ರಾಜ್ಯಾದ್ಯಂತ ತೆರೆಗೆ ಬರ್ತಿದ್ದು, ತಪ್ಪದೆ ನೋಡಿ..

ವರದಿ : ಶ್ರೀಧರ್ ಶಿವಮೊಗ್ಗ, ಎಂಟರ್​​ಟೈನ್ಮೆಂಟ್ ಬ್ಯೂರೋ_TV5

Next Story

RELATED STORIES