Top

ವರುಣನ ರುದ್ರನರ್ತನ: ಅಪಾಯದಲ್ಲಿ ಮಡಿಕೇರಿ ಜನ

ವರುಣನ ರುದ್ರನರ್ತನ: ಅಪಾಯದಲ್ಲಿ ಮಡಿಕೇರಿ ಜನ
X

ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಮಡಿಕೇರಿ ಸೇರಿದಂತೆ ಕಾವೇರಿ ಜಲನಯನ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಡಿಕೇರಿಯಲ್ಲಿ ಹಲವೆಡೆ ಭೂಕಸಿತ ಸಂಭವಿಸಿದ್ದು, ಜನರು ತತ್ತರಿಸುವಂತಾಗಿದೆ.

ಕೊಡಗಿನಲ್ಲಿ ಹಲವೆಡೆ ಭೂಕುಸಿತ ಉಂಟಾಗಿದ್ದು, ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತ ಉಂಟಾಗಿದೆ. ಜನರು ಮನೆಯಿಂದ ಹೊರಗೆ ಬರಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಗುಡ್ಡವೇರಿ ಸಾವಿರಾರು ಮಂದಿ ಆಶ್ರಯ ಪಡೆದಿದ್ದಾರೆ.

ಹಾಲೇರಿ ಬಳಿ 2 ಸಾವಿರ ಮಂದಿ ಸಿಲುಕಿಕೊಂಡಿರುವ ಮಾಹಿತಿ ಇದ್ದು, ಮುಕ್ಕೋಡ್ಲು ಬಳಿ ನೂರಾರೂ ಜನ ಜಲಧಿಗ್ಬಂಧನಕ್ಕೆ ಒಳಗಾಗಿದ್ದಾರೆ.

ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ, ನಾಳೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕಾವೇರಿ ನದಿ ಉಕ್ಕಿ ಹರಿಯುತ್ತಿರುವ ಅಪಾಯ ಮಟ್ಟ ಮೀರಿ ರಾಮ, ಲಕ್ಷ್ಮಣ ತೀರ್ಥ ನದಿಗಳು ಹರಿಯುತ್ತಿವೆ.

ಬ್ರಹ್ಮಗಿರಿ, ಪುಷ್ಪಗಿರಿ ತಪ್ಪಲಿನಲ್ಲಿ ಭಾರೀ ಮಳೆಯಾಗುತ್ತಿದೆ. ಎಂದೆಂದೂ ಕಾಣದ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಕಾವೇರಿ ನದಿ ಪಾತ್ರದ ಗ್ರಾಮಗಳು ಜಲಾವೃತಗೊಂಡಿವೆ.

ಜಿಲ್ಲೆಯ 10 ಕಡೆ ಗಂಜಿ ಕೇಂದ್ರ ನಿರ್ಮಿಸಲಾಗಿದ್ದು, ವಿಪತ್ತು ನಿರ್ವಹಣಾ ತಂಡದಿಂದ ರಕ್ಷಣಾ ಕಾರ್ಯ ಮುಂದುವರಿದಿದೆ. ಮುಕ್ಕೋಡ್ಲುವಿನಲ್ಲಿ‌ ಸಹಾಯಕ್ಕೆ 30 ಮಂದಿ ಅಂಗಲಾಚುತ್ತಿದ್ದಾರೆ. ದೇವಸ್ತೂರುವಿನಲ್ಲಿ ಪ್ರವಾಹದಲ್ಲಿ ಹಲವಾರು ಮಂದಿ ಸಿಲುಕಿರುವ ಶಂಕೆ ಇದೆ. ಗ್ರಾಮ ಜಲಾವೃತಗೊಂಡಿರುವುದರಿಂದ ಗುಡ್ಡವೇರಿ ಜನರು ಆಶ್ರಯ ಪಡೆದಿದ್ದಾರೆ.

ನಂಜನಗೂಡು-ಮೈಸೂರು ಮುಖ್ಯ ರಸ್ತೆ ಬಂದ್ ಆಗಿದ್ದು, ರಾಷ್ಟ್ರೀಯ ಹೆದ್ದಾರಿ ಮೇಲೆ ಅಪಾಯದ ಮಟ್ಟ ಮೀರಿ ಕಪಿಲಾ ನದಿ ಹರಿಯುತ್ತಿದೆ. ಇದರಿಂದ ಸಂಪರ್ಕ ಕಡಿತಗೊಂಡಿದೆ.

ನದಿ ಪಾತ್ರದ ಜನರಿಗೆ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಸೂಚಿಸಲಾಗಿದೆ. ಜಿಲ್ಲಾಡಳಿತದಿಂದ ಕ್ಷಣಕ್ಷಣಕ್ಕೂ ನೀರಿನ ಹೆಚ್ಚಳದ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. ಕೇರಳದ ವೈನಾಡಿನಲ್ಲಿ ಮಳೆ ಹೆಚ್ಚಾಗಿರುವುದರಿಂದ ಕರ್ನಾಟಕದ ಗಡಿ ಭಾಗದ ನೂರಾರು ಏಕರೆ ಬೆಳೆ ನಾಶವಾಗಿದೆ.

Next Story

RELATED STORIES