Top

ಮಲೆನಾಡಲ್ಲಿ ಮಳೆರಾಯನ ಆರ್ಭಟ : ಶೌಚಾಲಯದಲ್ಲೇ 2 ದಿನ ಕಾಲ ಕಳೆದ ವ್ಯಕ್ತಿ!

ಮಲೆನಾಡಲ್ಲಿ ಮಳೆರಾಯನ ಆರ್ಭಟ : ಶೌಚಾಲಯದಲ್ಲೇ 2 ದಿನ ಕಾಲ ಕಳೆದ ವ್ಯಕ್ತಿ!
X

ಚಿಕ್ಕಮಗಳೂರು : ಮಲೆನಾಡಿದ ಭಾಗದಲ್ಲಿ ಮಳೆರಾಯನ ಅಬ್ಬರ ಜೋರುಗೊಂಡಿದೆ. ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ಮಳೆರಾಯನ ಆರ್ಭಟಕ್ಕೆ ನಲುಗು ಹೋಗಿದೆ.

ತುಂಗಾ ನದಿಯ ಹರಿವಿನಲ್ಲಿ ಹೆಚ್ಚಳ ಉಂಟಾಗಿ ಗಾಂಧಿ ಮೈದಾನದಲ್ಲಿ ನೀರು ತುಂಬಿತ್ತು. ಈ ಮೈದಾನದ ಆವರಣದಲ್ಲಿ ಶೌಚಾಲಯದಲ್ಲಿ ಕಾರ್ಮಿಕರೊಬ್ಬರು ಸಿಲುಕಿ ಎರಡು ದಿನಗಳ ಕಾಲ ಅಲ್ಲೇ ಕಾಲ ಕಳೆದಿದ್ದರು.

ಬಿಹಾರ ಮೂಲದ ಕಾರ್ಮಿಕ ವಿನೋದ್ ಮಂಡ್ಲೆ ಎಂಬಾತ ಹೀಗೆ ಸಿಲುಕೊಂಡಿದ್ದ ವ್ಯಕ್ತಿಯಾಗಿದ್ದನು. ಈತನನ್ನು ಇದೀಗ ಎಎನ್ ಎಫ್ ತಂಡ ಹಾಗೂ ಅಗ್ನಿಶಾಮಕ ತಂಡ ರಕ್ಷಣೆ ಮಾಡಿ ಹೊರ ಕರೆ ತಂದಿದೆ. ಈ ಪ್ರಕರಣ ಇದೀಗ ಬೆಳಕಿಗೆ ಬಂದಿದೆ.

ತುಂಗಾನದಿ ಪ್ರವಾಹ ಮಟ್ಟ ಮೀರಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸಿಗರು ನೀರಿನ ಬಳಿ ಹೋಗದಂತೆ ನಿರ್ಬಂಧಿಸಲಾಗಿದೆ. ಜೊತೆಗೆ ವಾಹನ ಸಂಚಾರಕ್ಕೂ ಅಡಚಣೆಯುಂಟಾಗಿದೆ. ಭಾರಿ ಮಳೆಯಿಂದಾಗಿ ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಅಕ್ಕಪಕ್ಕದ ಜಮೀನಿಗೂ ನೀರು ನುಗ್ಗುತ್ತಿದೆ.

Next Story

RELATED STORIES