Top

ಅತ್ಯುನ್ನತ ಸರಕಾರಿ ಗೌರವದೊಂದಿಗೆ ವಾಜಪೇಯಿಗೆ ವಿದಾಯ

ಅತ್ಯುನ್ನತ ಸರಕಾರಿ ಗೌರವದೊಂದಿಗೆ ವಾಜಪೇಯಿಗೆ ವಿದಾಯ
X

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ದೇಶದಲ್ಲೇ ಅತ್ಯುನ್ನತ ಸರಕಾರಿ ಗೌರವ, ಅಭಿಮಾನಿಗಳ ಅಶ್ರುತರ್ಪಣಾ ಹಾಗೂ ಬ್ರಾಹ್ಮಣ ಸಂಪ್ರದಾಯದಂತೆ ವಿಧಿ-ವಿಧಾನಗಳೊಂದಿಗೆ ಅಂತಿಮ ವಿದಾಯ ಹೇಳಲಾಯಿತು. ಅಗ್ನಿಯ ಸ್ಪರ್ಶವಾಗುತ್ತಿದ್ಧಂತೆ ವಾಜಪೇಯಿ ಪಂಚಭೂತಗಳಲ್ಲಿ ಲೀನರಾದರು.

ಬಿಜೆಪಿ ಪ್ರಧಾನ ಕಚೇರಿಯಿಂದ ಯಮುನಾ ತೀರದವರೆಗಿನ 4 ಕಿ.ಮೀ. ದೂರದವರೆಗೆ ವಾಜಪೇಯಿ ಅವರ ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ಕರೆದೊಯ್ಯಲಾಯಿತು.

ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಹಲವಾರು ಗಣ್ಯರು ಅಭಿಮಾನಿಗಳೊಂದಿಗೆ ಪಾದಯಾತ್ರೆಯಲ್ಲಿ ಪಾಲ್ಗೊಂಡರು.

Next Story

RELATED STORIES