Top

ಕೊಡಗು ಪ್ರವಾಹ ಸಂತ್ರಸ್ತರ ನೆರವಿಗೆ ಕಿಚ್ಚ, ಡಿ ಬಾಸ್ ಮನವಿ

ಕೊಡಗು ಪ್ರವಾಹ ಸಂತ್ರಸ್ತರ ನೆರವಿಗೆ ಕಿಚ್ಚ, ಡಿ ಬಾಸ್ ಮನವಿ
X

ಬೆಂಗಳೂರು : ಕೊಡಗು ಮಳೆಯ ಅಬ್ಬರಕ್ಕೆ ದ್ವೀಪವಾಗಿ ಮಾರ್ಪಟ್ಟಿದೆ. ಕೊಡಗು, ಮಡಿಕೇರಿಯಲ್ಲಿ ಪ್ರವಾಹದ ಭೀತಿ ಎದುರಾಗಿದೆ.

ಈ ಬಗ್ಗೆ ಕಿಚ್ಚ ಸುದೀಪ್, ಡಿ ಬಾಸ್ ದರ್ಶನ್‌ ತಮ್ಮ ಅಭಿಮಾನಿಗಳಿಗೆ, ರಾಜ್ಯದ ಜನತೆಗೆ ಸಂತ್ರಸ್ಥರ ನೆರವಿಗೆ ಧಾವಿಸುವಂತೆ ಮನವಿ ಮಾಡಿದ್ದಾರೆ.

https://twitter.com/KicchaSudeep/status/1030420905799950336

ಈ ಕುರಿತು ಟ್ವಿಟ್ಟರ್ ಮಾಡಿರುವ ನಟ ಕಿಚ್ಚ ಸುದೀಪ್, ಅಭಿಮಾನಿಗಳೇ.. ಕರ್ನಾಟಕ ಅನೇಕ ಕಡೆ ಮಳೆಯಿಂದಾಗಿ ಪ್ರವಾಹದ ಭೀತಿ ಎದುರಿಸುವಂತಾಗಿದೆ. ಇದೀಗ ಇಂತಹ ಪ್ರದೇಶಗಳ ಜನರಿಗೆ ನೆರವಾಗಬೇಕಿದೆ.

ಕರ್ನಾಟಕದ ಜನರು, ರಾಜ್ಯ ಸರ್ಕಾರ ಸಂತ್ರಸ್ಥರ ನೆರವಿಗೆ ಧಾವಿಸಿ, ಅಪಾಯದಲ್ಲಿ ಸಿಲುಕಿದವರಿಗೆ, ನೆರವಿಗಾಗಿ ಕಾಯುತ್ತಿರುವವರಿಗೆ ಸೂಕ್ತ ನೆರವು ನೀಡುವಂತೆ ಮನವಿ ಮಾಡಿದ್ದಾರೆ.

https://twitter.com/dasadarshan/status/1030396459403726848

ಮತ್ತೊಂದೆಡೆ, ಡಿ ಬಾಸ್ ದರ್ಶನ್‌ ಕೂಡ ಟ್ವಿಟ್‌ ಮಾಡಿದ್ದು, ನಾನು ಕೊಡಗು ಜನರ ಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇನೆ. ಅವರಿಗೆ ನೆರವಿಗಾಗಿ ಎಲ್ಲರಲ್ಲೂ ಮನವಿ ಮಾಡಿ, ನನ್ನ ಕೈಲಾದ ಸಹಾಯ ನಾನು ಮಾಡುವುದಾಗಿ ತಿಳಿಸಿದ್ದಾರೆ.

ಅಲ್ಲದೇ #supportcoorg #KodaguFloods ಹ್ಯಾಷ್‌ ಟ್ಯಾಗ್‌ ಮೂಲಕ ಕೊಡಗಿನ ಸಂತ್ರಸ್ತ ಜನರ ನೆರವಿಗಾಗಿ ಅಭಿಯಾನವನ್ನೇ ಸೋಷಿಯಲ್ ಮೀಡಿಯಾದಲ್ಲಿ ಆರಂಭಿಸಿದ್ದಾರೆ.

Next Story

RELATED STORIES