ಟ್ರೆಂಟ್ ಬ್ರಿಡ್ಜ್ನಲ್ಲಿ 3ನೇ ಟೆಸ್ಟ್ : ರಿಷಭ್ ಪಂತ್ ಪಾದರ್ಪಣೆ?

ಮೊದಲೆರಡು ಪಂದ್ಯ ಸೋತಿರುವ ಭಾರತ ತಂಡ ಸರಣಿ ಉಳಿಸಿಕೊಳ್ಳುತವ ಒತ್ತಡದಲ್ಲಿದ್ದರೆ, ಎರಡೂ ಪಂದ್ಯ ಗೆದ್ದು ಸರಣಿ ಗೆಲುವಿನ ವಿಶ್ವಾಸದಲ್ಲಿರುವ ಇಂಗ್ಲೆಂಡ್ ತಂಡಗಳು ಶನಿವಾರದಿಂದ ಟೆಂಟ್ಬ್ರಿಡ್ಜ್ನಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ.
ರಿಷಭ್, ಜಸ್ಪ್ರೀತ್ಗೆ ಚಾನ್ಸ್?
ನಾಟಿಂಗ್ಹ್ಯಾಮ್ನ ಟೆಂಟ್ಬ್ರಿಡ್ಜ್ನಲ್ಲಿ ನಡೆಯಲಿರುವ ಪಂದ್ಯ ಉಭಯ ತಂಡಗಳ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ಭಾರತ ಸರಣಿ ಜೀವಂತವಾಗಿರಿಸಿಕೊಳ್ಳಬೇಕಾದರೆ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ವೈಫಲ್ಯದ ಹಿನ್ನೆಲೆಯಲ್ಲಿ ಡೆಲ್ಲಿಯ ಯುವ ಬ್ಯಾಟ್ಸ್ ಮನ್ ರಿಷಭ್ ಪಂತ್ ಸ್ಥಾನ ಪಡೆಯುವ ಸಾಧ್ಯತೆ ಇದೆ. ಐಪಿಎಲ್ನಲ್ಲಿ ಮಿಂಚಿದ ಪಂತ್ ಈ ಪಂದ್ಯದ ಮೂಲಕ ಟೆಸ್ಟ್ ಗೆ ಪದಾರ್ಪಣೆ ಮಾಡುವ ಸಾಧ್ಯತೆ ಇದೆ.
ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್ ಮತ್ತೆ ಗಾಯದ ಸಮಸ್ಯೆಗೆ ಒಳಗಾಗಿದ್ದು ಇಡೀ ಟೂರ್ನಿಯಿಂದ ಹೊರಗುಳಿಯುವ ಸಾಧ್ಯತೆ ಇದೆ. ಆದರೆ ಜಸ್ಪ್ರೀತ್ ಬುಮ್ರಾ ಫಿಟ್ ಆಗಿರುವುದರಿಂದ ಹಾರ್ದಿಕ್ ಪಾಂಡ್ಯ ಅಥವಾ ಕುಲದೀಪ್ ಯಾದವ್ ಬದಲಿಗೆ ತಂಡವನ್ನು ಸೇರಿಕೊಳ್ಳುವ ಸಾಧ್ಯತೆ ಇದೆ.
ಸ್ಟೋಕ್ಸ್ ಆಗಮನ
ಇನ್ನುಇಂಗ್ಲೆಂಡ್ ತಂಡದಲ್ಲಿ ಕೂಡ ಕೆಲವು ಬದಲಾವಣೆ ಆಗಲಿವೆ. ದಾಂಧಲೆ ಪ್ರಕರಣದ ಆರೋಪದಿಂದ ಮುಕ್ತನಾಗಿರುವ ಬೆನ್ ಸ್ಟೋಕ್ಸ್ ಮೂರನೇ ಟೆಸ್ಟ್ಗೆ ಮರಳಲಿದ್ದಾರೆ. ಮೊದಲ ಟೆಸ್ಟ್ ಆಡಿದ್ದ ಸ್ಟೋಕ್ಸ್ ನಂತರ ಲಾರ್ಡ್ಸ್ನಿಂದ ಹೊರಗುಳಿದಿದ್ದರು. ಉಳಿದಂತೆ ತಂಡದಲ್ಲಿ ಬದಲಾವಣೆ ಇರುವುದು ಅನುಮಾನವಾಗಿದೆ.
- ಪಂದ್ಯ ಆರಂಭ: ಮಧ್ಯಾಹ್ನ 3.30
- ಸ್ಥಳ: ಟೆಂಟ್ ಬ್ರಿಡ್ಜ್