Top

ಮೈಸೂರಿನಲ್ಲಿ 'ಒಡೆಯ'ನಿಗೆ ಮುಹೂರ್ತ

ಮೈಸೂರಿನಲ್ಲಿ ಒಡೆಯನಿಗೆ ಮುಹೂರ್ತ
X

ಮೈಸೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ಚಿತ್ರದ ಮುಹೂರ್ತ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನೆರವೇರಿತು. ಪೂಜೆ ಮಾಡುವ ಮೂಲಕ ಒಡೆಯ ಚಿತ್ರದ ಮುಹೂರ್ತ ನೆರವೇರಿತು.

ನಿರ್ಮಾಪಕ ಸಂದೇಶ್ ನಾಗರಾಜ್ ಹುಟ್ಟುಹಬ್ಬ ಇರುವ ಹಿನ್ನೆಲೆ, ಸಂದೇಶ್ ನಾಗರಾಜ್ ಮನೆ ಆವರಣದಲ್ಲಿ ಮುಹೂರ್ತ ಕಾರ್ಯ ನಡೆಸಲಾಯಿತು. ಮೈಸೂರಿನ ಇಟ್ಟಿಗೆಗೂಡು ಬಡಾವಣೆಯಲ್ಲಿರುವ‌‌ ಮನೆಯಲ್ಲಿ ನಡೆದ ಮುಹೂರ್ತ ಸಮಾರಂಭಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ರೆಬೆಲ್ ಸ್ಟಾರ್ ಅಂಬರೀಶ್ ಸೇರಿ ಹಲವು ರಾಜಕೀಯ ಮುಖಂಡರು ಭಾಗವಹಿಸಿದ್ದರು.

ಕೆಲ ದಿನಗಳ ಹಿಂದೆ ಟೈಟಲ್ ವಿವಾದದಿಂದ ಒಡೆಯ ಸಿನಿಮಾ ಸದ್ದು ಮಾಡಿತ್ತು. ಒಡೆಯರ್ ಎಂದು ಶೀರ್ಷಿಕೆ ಇಟ್ಟಿದ್ದು, ಟೈಟಲ್ ಬದಲಿಸದಿದ್ದರೆ ಉಗ್ರಹೋರಾಟ ಮಾಡುವುದಾಗಿ ಚಿತ್ರತಂಡ ಸೂಚನೆ ನೀಡಿತ್ತು. ಹಲವೆಡೆಯಿಂದ ಟೈಟಲ್‌ಗೆ ವಿರೋಧ ವ್ಯಕ್ತವಾದ ಹಿನ್ನೆಲೆ ಒಡೆಯ ಎಂದು ಟೈಟಲ್ ಬದಲಾಯಿಸಲಾಯಿತು.

ಈ ಬಗ್ಗೆ ಮಾತನಾಡಿದ ನಿರ್ಮಾಪಕ ಸಂದೇಶ್ ನಾಗರಾಜ್, ಈ ಟೈಟಲ್ 6 ವರ್ಷದ ಹಿಂದೆಯೇ ರಿಜಿಸ್ಟರ್ ಮಾಡಿಸಿದ್ದು. ನಾವೆಲ್ಲೂ ಕೂಡ ಒಡೆಯರ್ ಎಂದು ಹೇಳಿಲ್ಲ. ಕೆಲವರು ಅದನ್ನ ತಪ್ಪಾಗಿ ಗ್ರಹಿಸಿ‌ ಪ್ರತಿಭಟನೆ ಮಾಡಿದ್ದಾರೆ. ಪ್ರಮೋದಾ ದೇವಿ ಒಡೆಯರ್ ಅವರೇ ಶೀರ್ಷಿಕೆ ಬಗ್ಗೆ ಏನೂ ಹೇಳಲಿಲ್ಲ. ಆದರೆ ಕೆಲವರು ಇದನ್ನ ಸುಮ್ಮನೆ ದೊಡ್ಡದು ಮಾಡಿದ್ದಾರೆ ಅಷ್ಟೇ ಎಂದು ಹೇಳಿದ್ರು.

ನಾವು ನಮ್ಮ ಚಿತ್ರಕ್ಕೆ ಒಡೆಯರ್ ಎಂದು ಹೆಸರೇ ಇಟ್ಟಿಲ್ಲ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾರ್ಯಕ್ರಮದಲ್ಲ ಹೇಳಿದ್ದಾರೆ. ನಾವು ಕೇವಲ ಒಡೆಯ ಅಂತಾನೆ ನೊಂದಣಿ ಮಾಡಿಸಿದ್ದು. ಸ್ವತಃ ಮಹಾರಾಣಿ ಅವರೇ ಒಡೆಯರ್ ಹೆಸರು ಇಟ್ಟುಕೊಳ್ಳಲಿ ಎಂದರು. ಸಂದೇಶ್ ಬ್ಯಾನರ್ ನಲ್ಲಿ ಇದು ನನ್ನ ಮೂರನೇ ಚಿತ್ರ. ಚಿತ್ರದಲ್ಲಿ ಕೆಲ ಕಲಾವಿದರ ಆಯ್ಕೆ ಮಾತ್ರ ಆಗಿದೆ. ಆದ್ರೆ ಮತ್ತಷ್ಟು ಕಲಾವಿದರ ಆಯ್ಕೆ ನಡೆಯಲಿದೆ. ಮೈಸೂರಿನಲ್ಲಿ ಬಹುತೇಕ ಶೂಟಿಂಗ್ ನಡೆಯಲಿದೆ ಎಂದು ನಟ ದರ್ಶನ್ ಹೇಳಿದ್ದಾರೆ.

Next Story

RELATED STORIES