ಮೊದಲ ದಿನವೇ 16 ಕೋಟಿ ಬಾಚಿದ ಗೀತಾ ಗೋವಿಂದಂ

X
TV5 Kannada16 Aug 2018 12:55 PM GMT
ಭಾರೀ ಕುತೂಹಲ ಮೂಡಿಸಿದ್ದ ಗೀತಾ ಗೋವಿಂದಂ ಚಿತ್ರ ಮೊದಲ ದಿನವೇ 16 ಕೋಟಿ ರೂ. ಬಾಚಿಕೊಂಡಿದೆ.
ಕನ್ನಡದ ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ನಟಿಸಿರುವ ಚಿತ್ರ ಬಿಡುಗಡೆಗೂ ಮುನ್ನವೇ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಅದರಲ್ಲೂ ಚಿತ್ರದ ಅರ್ಧಭಾಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಇದರ ಹೊರತಾಗಿಯೂ ಚಿತ್ರಕ್ಕೆ ಎಲ್ಲೆಡೆ ಭರ್ಜರಿ ಆರಂಭ ದೊರೆತಿದೆ.
ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯಂದು ಜಗತ್ತಿನಾದ್ಯಂತ ಏಕಕಾಲದಲ್ಲಿ ಬಿಡುಗಡೆಯಾತ್ತು. ವಿಜಯ್ ದೇವರಕೊಂಡ ಅವರ ಚಿತ್ರ ಜೀವನದಲ್ಲಿ ಅತೀ ದೊಡ್ಡ ಓಪನಿಂಗ್ ಇದಾಗಿದ್ದು ಸ್ಟಾರ್ ಆಗಿ ಜನ ಗುರುತಿಸತೊಡಗಿದ್ದಾರೆ.
ಚಿತ್ರದ ಬಗ್ಗೆ ಒಳ್ಳೆಯ ಅಭಿಪ್ರಾಯ ಇರುವುದರಿಂದ ವೀಕೆಂಡ್ನಲ್ಲಿ ಈ ಚಿತ್ರದ ಕಲೆಕ್ಷನ್ ಹೆಚ್ಚಾಗಲಿದ್ದು, ಒಂದು ವಾರದಲ್ಲಿ 100 ಕೋಟಿ ದಾಟುವ ಸಾಧ್ಯತೆ ಇದೆ.
Next Story