Top

ನಾ ಕಂಡ ಅಟಲ್ ಬಿಹಾರಿ ವಾಜಪೇಯಿ

ನಾ ಕಂಡ ಅಟಲ್ ಬಿಹಾರಿ ವಾಜಪೇಯಿ
X

ವಿಶೇಷ ಲೇಖನ : ದಿನೇಶ್ ಅಕುಲ, ಗ್ರೂಪ್‌ ಎಡಿಟರ್‌, ಟಿವಿ5

ನನ್ನ ಪತ್ರಿಕೋದ್ಯಮದ ವೃತ್ತಿ ಬದುಕಿನಲ್ಲಿ ಸಾಕಷ್ಟು ರಾಜಕಾರಣಿಗಳನ್ನ ಕಂಡಿದ್ದೇನೆ. 1996 ರಿಂದ 2004ರವರೆಗೂ ದೇಶಾದ್ಯಂತ ಸಾಕಷ್ಟು ಸಂಚರಿಸಿದ್ದೇನೆ. ಆ ಸಂದರ್ಭದಲ್ಲಿ ಸಾಕಷ್ಟು ಸಲ ಅಟಲ್‌ ಬಿಹಾರಿ ವಾಜಪೇಯಿ ಅವರನ್ನ ಭೇಟಿ ಮಾಡಿದ್ದೇನೆ. ಅದು ಸಾರ್ವಜನಿಕ ಸಭೆಗಳಿರಬಹುದು. ಸುದ್ದಿಗೋಷ್ಠಿಗಳಿರಬಹುದು. ಆದ್ರೆ, 1999ರ ಘಟನೆಯೊಂದು ಮಾತ್ರ ನನ್ನ ಮನದಲ್ಲಿ ಇಂದಿಗೂ ಹಾಗೇ ಇದೆ.

ರಾಯ್‌ಪುರದ ವಿಮಾನ ನಿಲ್ದಾಣದಲ್ಲಿ ಅವರ ಜೊತೆ ಫೇಸ್‌ ಟು ಫೇಸ್ ಸಂದರ್ಶನ ನಡೆಸಿದ್ದೆ. ಆ ದಿನ ನನಗೆ ಚೆನ್ನಾಗೆ ನೆನಪಿದೆ. ಮುಂಜಾನೆ ನನಗೊಂದು ಸಂದೇಶ ಬಂದಿತ್ತು. ಸ್ಥಳೀಯ ಸಂಸದರೊಬ್ಬರ ಮಾಹಿತಿ ಪ್ರಕಾರ, ಕೆಲಸದ ನಿಮಿತ್ತ ರಾಯ್‌ಪುರಕ್ಕೆ ಬಂದಿರೋ ಪ್ರಧಾನ ಮಂತ್ರಿಗಳು. ವಿಮಾನ ನಿಲ್ದಾಣದಲ್ಲಿ ಸಣ್ಣದೊಂದು ಬ್ರೇಕ್‌ ಪಡೆಯಲಿದ್ದಾರೆ ಅನ್ನೋದು. ಸುದ್ದಿ ಸಿಕ್ಕಿದ್ದೇ ತಡ, ಸುಮಾರು 25 ಕಿಲೋ ಮೀಟರ್‌ ದೂರದಲ್ಲಿದ್ದ ನಾನು, ವಿಮಾನ ನಿಲ್ದಾಣದ ಕಡೆದೆ ದೌಡಾಯಿಸಿದೆ.

ಆದ್ರೆ, ಅಷ್ಟಕ್ಕೆ ಎಲ್ಲವೂ ಮುಗಿದಿರಲಿಲ್ಲ. ಪ್ರಧಾನಿಯಾಗಿದ್ದ ಅಟಲ್‌ ಬಿಹಾರಿ ವಾಜಪೇಯಿ ಅವರನ್ನ ಭೇಟಿಯಾಗೋದು ಅಷ್ಟು ಸುಲಭದ ಮಾತಾಗಿರಲಿಲ್ಲ. ವಿಮಾನ ನಿಲ್ದಾಣದಲ್ಲಿ ಪ್ರಧಾನಿಗಾಗಿ ಹೂಗುಚ್ಚಗಳನ್ನ ಹಿಡಿದುಕೊಂಡು ನಿಂತಿದ್ದ ಬಿಜೆಪಿ ನಾಯಕರನ್ನ ಕಂಡೆ. ಆದ್ರೆ, ನಾನು ವಿಮಾನ ನಿಲ್ದಾಣ ಪ್ರವೇಶಿಸೋದು ಕಷ್ಟದ ಸಂಗತಿಯಾಗಿತ್ತು.

ನನಗೆ ಪರಿಚಯವಿದ್ದ ಸ್ಥಳೀಯ ಬಿಜೆಪಿ ಮುಖಂಡರೊಬ್ಬರಿಂದ ಭದ್ರತಾ ಸಿಬ್ಬಂದಿಗಳಿಗೆ ಹೇಳಿಸಿದೆ. ಹಾಗೋ ಹೀಗೋ, ಬ್ಯಾರಿಕೇಡ್‌ ಬಳಿ ನಿಲ್ಲಲು ಅನುಮತಿ ನೀಡಿದರು. ವಿಐಪಿ ಲಾಂಚ್‌ನಲ್ಲೋ ಅಥವಾ ಪ್ರಧಾನಿ ಕಾಲ ಕಳೆಯುತ್ತಿದ್ದ ಸ್ಥಳಕ್ಕೋ ಹೋಗೋದು ಅಸಾಧ್ಯದ ವಿಷ್ಯವಾಗಿತ್ತು. ಆದ್ರೆ, ನನಗೆ ವಾಜಪೇಯಿ ಅವರನ್ನ ಹತ್ತಿರದಿಂದ ನೋಡಿ, ಮಾತನಾಡಿಸಲೇಬೇಕು ಅನ್ನೋ ಕಾತರವಿತ್ತು. ಅದೊಂದು ಪೂರ್ವನಿಯೋಜಿತವಲ್ಲದ ಕಾರ್ಯಕ್ರಮವಾಗಿತ್ತು. ಭುವನೇಶ್ವರಕ್ಕೆ ತೆರಳಬೇಕಿದ್ದ ವಾಜಪೇಯಿಯವರು, ರಾಯ್‌ಪುರದ ವಿಮಾನ ನಿಲ್ದಾಣದಲ್ಲಿ ಕೆಲಕಾಲ ಕಳೆಯೋಕೆ ಸನ್ನಿವೇಷ ಸೃಷ್ಟಿಯಾಗಿತ್ತು ಅಷ್ಟೆ.

ವಿಮಾನವೂ ಬಂತು. ನಾನು ಮಾತ್ರ ನಿಂತಲ್ಲೇ ನಿಂತಿದ್ದೇ. ನನ್ನ ಹೋರಾಟವನ್ನ SPG ತಂಡ ವ್ಯರ್ಥಪಡಿಸುತ್ತಲೇ ಇತ್ತು. ವಾಜಪೇಯಿ ಸ್ಥಳೀಯ ಬಿಜೆಪಿ ನಾಯಕರ ಜೊತೆ ಮಾತನಾಡುತ್ತಲೇ ವಿಮಾನದ ಕಡೆ ಹೆಜ್ಜೆ ಹಾಕಿದರು. ನನ್ನ ಕಾತರದ ಕಟ್ಟೆ ಹೊಡೆದಿತ್ತು. ನನ್ನಿಂದ ಸಹಿಸೋಕೆ ಆಗಲಿಲ್ಲ. ಜೋರಾಗಿ ವಾಜಪೇಯಿಜಿ ಅಂತ ಕೂಗೆ ಬಿಟ್ಟೆ. ಭದ್ರತಾ ಸಿಬ್ಬಂದಿಗಳು ನನ್ನ ಕೈ ಇಳಿಸೋಕೆ ಪ್ರಯತ್ನಿಸಿದರು.

ಆದರೂ ನನ್ನಲ್ಲಿದ್ದ ಪರ್ತಕರ್ತ ಸುಮ್ಮನಾಗಲಿಲ್ಲ. ವಾಜಪೇಯಿ ಜೀ, ವಾಜಪೇಯಿ ಜೀ ಸಿರ್ಫ್ ಏಕ್‌ ಸವಾಲ್ ಅಂದೆ. ನನ್ನ ಯುವಕನ ಪ್ರಶ್ನೆಯನ್ನ ದೇಶದ ಪ್ರಧಾನಿ ಅಂದು ಆಲಿಸಿದ್ರು. ನನ್ನ ಬಳಿ ಹೆಜ್ಜೆ ಹಾಕತೊಡಗಿದ್ರು. ಅದನ್ನ ಗಮನಿಸಿದ ನಾನು, ಅವರ ಬಳಿಯೇ ಹೊರಟೆ. ಆಗ SPG ಅನ್ನೋ ಚಕ್ರವ್ಯೂಹವನ್ನ ಭೇದಿಸಿದ ಖುಷಿ ನನ್ನಲ್ಲಿತ್ತು.

ಬಿಜೆಪಿಯೊಂದಿಗೆ ನವ ಭಾರತದ ನಿರ್ಮಾಣದ ನಿಮ್ಮ ಕನಸು ನನಸಾಗುತ್ತಾ.? ಎಲ್ಲಾ ಕಡೆಯೂ ಬಿಜೆಪಿ ಅಧಿಕಾರಕ್ಕೆ ಬರುತ್ತಾ ಅಂದೆ. ನಗುಮೊಗದಲ್ಲೇ ಉತ್ತರಿಸಿದ ವಾಜಪೇಯಿ ವೈಟ್‌ ಅಂಡ್‌ ವಾಚ್‌ ಅಂದು ಹೊರಟೇಬಿಟ್ರು. ಅವರಿಗೊಂದು ಥ್ಯಾಂಕ್ಸ್ ಹೇಳೋಕು ನನಗೆ ಸಾಧ್ಯವಾಗಲಿಲ್ಲ.

ಆದ್ರೆ, 1999ರಲ್ಲಿ ಪತ್ರಕರ್ತನೊಬ್ಬನ ಕೂಗಿಗೆ ಕಿವಿಕೊಟ್ಟ ಅವರ ಸರಳತೆಗೆ ಹ್ಯಾಟ್ಸ್‌ ಆಫ್‌ ಹೇಳಲೇಬೇಕು. ಮಾರನೇ ದಿನ ನನ್ನದೇ ಬೈ ಲೈನ್‌ನೊಂದಿಗೆ ನವಭಾರತ್‌ ಮತ್ತು ಎಂಪಿ ಕ್ರಾನಿಕಲ್‌ ಪತ್ರಿಕೆಯಲ್ಲಿ ವರದಿಯಾಯ್ತು. ನನ್ನ ಪತ್ರಿಕೋದ್ಯಮದ ಉತ್ಸಾಹ ಆವತ್ತು ಹಿಮಾಲಯದೆತ್ತರಕ್ಕೆ ಹಾರಿತ್ತು. ನನ್ನ ಖುಷಿಗೆ ಪಾರವೇ ಇರಲಿಲ್ಲ. ದೇಶದ ಪ್ರಧಾನಿಯನ್ನ ಪ್ರಶ್ನಿಸಿ, ಉತ್ತರ ಪಡೆದೆ ಅನ್ನೋ ಖುಷಿ ಇವತ್ತಿಗೂ ಇದೆ.

ವಾಜಪೇಯಿ ಅವರ ಜೊತೆಗಿನ ಮೊದಲ ಭೇಟಿ ಬಳಿಕ, ಮತ್ತೆ ಅವರ ಜೊತೆಗಿನ ಒಡನಾಟಕ್ಕೆ ಒಂಭತ್ತು ವರ್ಷ ಕಾಯಬೇಕಾಯ್ತು. ಅದು 2008ರ ಹೋಳಿ ಹಬ್ಬದ ಸಂದರ್ಭ. ಅವರ ಮನೆಯಲ್ಲೇ ಮತ್ತೆ ಅವರನ್ನ ಭೇಟಿ ಮಾಡಿದೆ.

ಈಗಿನ ಎಬಿಪಿ ನ್ಯೂಸ್‌ ಆಗ ಸ್ಟಾರ್‌ ನ್ಯೂಸ್ ಆಗಿತ್ತು. ಅದರ ಹಿರಿಯ ಪೊಲಿಟಿಕಲ್‌ ರಿಪೋರ್ಟರ್‌ ಆಗಿ ದೆಹಲಿಯಲ್ಲೇ ಕೆಲಸ ನಿರ್ವಹಿಸುತ್ತಿದೆ. ಅಂದು ಬಣ್ಣಗಳೊಂದಿಗೆ ಅವರನ್ನ ಭೇಟಿ ಮಾಡಿದೆ. ಮತ್ತು ಹೋಳಿ ಹಬ್ಬದ ಶುಭಕೋರಿದೆ. ಅವರ ಬಲಗೈಗೆ ಬಣ್ಣವನ್ನೂ ಹಚ್ಚಿದೆ.

ಈಗ ನೀವು ನೆನಪು ಮಾತ್ರ. ಹೆಮ್ಮೆಯಿಂದ ಹೇಳುತ್ತೇನೆ. ನೀವು ನಮ್ಮ ದೇಶದ ಹಿರಿಮೆ. ಗುಡ್‌ ಬೈ ಅಟಲ್‌ ಜಿ, ವಿ ಮಿಸ್‌ ಯುವ್.

Next Story

RELATED STORIES