Top

ವಾಜಪೇಯಿ ಕುರಿತ 21 ಕುತೂಹಲಕಾರಿ ವಿಷಯಗಳು

ವಾಜಪೇಯಿ ಕುರಿತ 21 ಕುತೂಹಲಕಾರಿ ವಿಷಯಗಳು
X

ಭಾರತ ರಾಜಕಾರಣದಲ್ಲೇ ಅಜಾತಶತ್ರು, ಕವಿ, ವಾಗ್ಮಿ .. ಹೀಗೆ ನಾನಾ ರೀತಿಯಲ್ಲಿ ಖ್ಯಾತಿ ಪಡೆದಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಬಗ್ಗೆ ಗೊತ್ತಿಲ್ಲದ 21 ಕುತೂಹಲದ ಅಂಶಗಳು ಇಲ್ಲಿವೆ.

ಆಗ್ರಾದ ನಂಟು

ವಾಜಪೇಯಿ ಅವರ ಮೂಲ ದೆಹಲಿಯ ಪ್ರವಾಸಿ ತಾಣವಾದ ಆಗ್ರಾದ ಬಟೇಶ್ವರ್ ಗ್ರಾಮ. ತಾತಾ ಶ್ಯಾಮ್ ಲಾಲ್ ವಾಜಪೇಯಿ ಬಟೇಶ್ವರ್ ನಿಂದ ಮಧ್ಯಪ್ರದೇಶದ ಮೊರೆನಾ ಗ್ರಾಮಕ್ಕೆ ವಲಸೆ ಹೋಗಿದ್ದರು.

ಪ್ರಥಮ ದರ್ಜೆ ವಿದ್ಯಾರ್ಥಿ

ವಿದ್ಯಾರ್ಥಿ ಜೀವನದಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆಯುತ್ತಿದ್ದ ವಾಜಪೇಯಿ, ಪೊಲಿಟಿಕಲ್ ಸೈನ್ಸ್ ವಿಭಾಗದಲ್ಲಿ ಪದವಿ ಪೂರ್ವ ವಿಭಾಗದಲ್ಲಿ ಪ್ರಥಮ ದರ್ಜೆ ವಿದ್ಯಾರ್ಥಿಯಾಗಿದ್ದರು.

ಮೊದಲ ಭಾಷಣ

ಗ್ವಾಲಿಯರ್​ನಲ್ಲಿ ಆರ್ಯಾ ಕುಮಾರ್ ಸಭಾದಲ್ಲಿ ಮೊದಲ ಬಾರಿ ಭಾಷಣ ಮಾಡಿದರು.

ಕಮ್ಯುನಿಸ್ಟ್​

ಆರ್​ಎಸ್​ಎಸ್ ಸೇರುವ ಮುನ್ನ ವಾಜಪೇಯಿ ಕಮ್ಯುನಿಸ್ಟ್ ಜೊತೆ ಗುರುತಿಸಿಕೊಂಡಿದ್ದರು. ಬಾಬಾ ಸಾಹೇಬ್ ಆಪ್ಟೆ ಅವರಿಂದ ಪ್ರಭಾವಿತರಾಗಿ 1939ರಲ್ಲಿ ಆರ್​ಎಸ್​ಎಸ್ ಸೇರ್ಪಡೆಗೊಂಡರು. 1947ರಲ್ಲಿ ಪ್ರಚಾರಕ್ (ಪೂರ್ಣಾವಧಿ ಕಾರ್ಯಕರ್ತ) ಆಗಿ ನೇಮಕಗೊಂಡರು.

ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗಿ

ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಆಂದೋಲನದಲ್ಲಿ ಭಾಗಿಯಾಗಿದ್ದಕ್ಕಾಗಿ ಅಟಲ್ ಮತ್ತು ಸೋದರ ಪ್ರೇಮ್ 1942ರಲ್ಲಿ ಜೈಲು ಸೇರಿದರು. 23 ದಿನಗಳ ಕಾಲ ಸೆರೆವಾಸ ಅನುಭವಿಸಿದರು.

ತಂದೆಯೇ ಕ್ಲಾಸ್​ಮೇಟ್​!

ತಂದೆ ಮತ್ತು ಮಗ ಇಬ್ಬರೂ ಒಂದೇ ಕಾಲೇಜಿನ ಒಂದೇ ತರಗತಿಯ ವಿದ್ಯಾರ್ಥಿಯಾಗಿದ್ದರು. ಕಣ್ಣೂರಿನ ದೇವ್ ಕಾಲೇಜಿನಲ್ಲಿ ಓದುತ್ತಿದ್ದರು. ವಿಶೇಷ ಅಂದರೆ ಇಬ್ಬರೂ ಒಂದೇ ಹಾಸ್ಟೆಲ್​ನಲ್ಲಿ ತಂಗಿದ್ದರು.

ಪತ್ರಿಕೋದ್ಯಮದ ನಂಟು

ಪತ್ರಿಕೋದ್ಯಮದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ವಾಜಪೇಯಿ ಉತ್ತರ ಪ್ರದೇಶದ ದೀನ್ ದಯಾಳ್ ಉಪಾಧ್ಯಾಯ ಅವರ ರಾಷ್ಟ್ರಧರ್ಮ (ಮಾಸಿಕ), ಪಾಂಚಜನ್ಯ (ವಾರಪತ್ರಿಕೆ), ವೀರ್ ಅರ್ಜುನ್ ಮತ್ತು ಸ್ವದೇಶ್ (ದಿನಪತ್ರಿಕೆ)ಗಳಲ್ಲಿ ಕೆಲಸ ಮಾಡಿದರು. ಈ ಮೂಲಕ ಪತ್ರಕರ್ತನಾಗುವ ತಮ್ಮ ಆಸೆ ಈಡೇರಿಸಿಕೊಂಡರು.

ನಿಷ್ಠಾವಂತ ಅನುಯಾಯಿ

ವಾಜಪೇಯಿ, ಭಾರತೀಯ ಜನಸಂಘ ಸಂಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಕಟ್ಟಾ ಬೆಂಬಲಿಗರಾಗಿದ್ದರು. 1953ರಲ್ಲಿ ಅವರೊಂದಿಗೆ ಅಮರಾಣಂತ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು. ಈ ಪ್ರತಿಭಟನೆಯ ವೇಳೆ ಮುಖರ್ಜಿ ಮೃತಪಟ್ಟಾಗ ವಾಜಪೇಯಿ ಆಘಾತಕ್ಕೆ ಒಳಗಾಗಿದ್ದರು.

ಲೋಕಸಭೆಗೆ ಮೊದಲ ಪ್ರವೇಶ

1957ರಲ್ಲಿ ನಡೆದ ಎರಡನೇ ಲೋಕಸಭಾ ಚುನಾವಣೆಯಲ್ಲಿ ವಾಜಪೇಯಿ ಮೊದಲ ಬಾರಿ ಸ್ಪರ್ಧಿಸಿದರು. ಉತ್ತರ ಪ್ರದೇಶದ ಮಥುರಾ ಮತ್ತು ಬಾಲ್​ರಾಮ್​ಪುರ್ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿದ್ದರು. ರಾಜಮಹೇಂದ್ರ ಪ್ರತಾಪ್ ವಿರುದ್ಧ ಮಥುರಾದಲ್ಲಿ ಸೋಲುಂಡರೆ, ಬಾಲ್​ರಾಮ್​ಪುರ್​ನಲ್ಲಿ ಜಯ ಸಾಧಿಸಿದರು.

ಜವಾಹರ್ ಲಾಲೂ ನೆಹರು ಅಭಿಮಾನ

ವಾಜಪೇಯಿ ಉತ್ತಮ ವಾಗ್ಮಿ ಎಂಬುದು ಜಗತ್ತಿನಾದ್ಯಂತ ಖ್ಯಾತಿ ಪಡೆದಿತ್ತು. ಅದರಲ್ಲೂ ಸಂಸದರಾಗಿ ಮೊದಲ ಬಾರಿ ಭಾಷಣ ಮಾಡಿದಾಗ ಜವಹಲಾಲ್ ನೆಹರು ಅವರನ್ನು ತೀವ್ರವಾಗಿ ಖಂಡಿಸಿದರೂ ನಂತರ ನೆಹರು ಅವರಿಂದ ಮೆಚ್ಚುಗೆ ಪಡೆದರು. ಸ್ವತಃ ನೆಹರು ಅವರೇ ಮುಂದೊಂದು ದಿನ ಪ್ರಧಾನಿ ಆಗುತ್ತಿಯಾ ಎಂದು ಭವಿಷ್ಯ ನುಡಿದಿದ್ದರು.

ಆ ದಿನ ಮತ್ತೆ ಬೇಕು

1977ರಲ್ಲಿ ಮೊರಾರ್ಜಿ ದೇಸಾಯಿ ಅವರ ಅವಧಿಯಲ್ಲಿ ಅಟಲ್ ವಿದೇಶಾಂಗ ಸಚಿವರಾಗಿದ್ದಾಗ ಸಂಸತ್​ ಒಳಗೆ ಪ್ರವೇಶಿಸುತ್ತಿದ್ಧಂತೆ ನೆಹರು ಅವರ ಅನುಪಸ್ಥಿತಿ ಅವರನ್ನು ಕಾಡಿತು. ನೆಹರು ಅವರಿದ್ದಾಗಿನ ಆ ಸಮಯ ಮತ್ತೆ ಮರಳಿ ಪಡೆಯಬಯಸುತ್ತೇನೆ ಎಂದಿದ್ದರು.

ವಿಶ್ವಸಂಸ್ಥೆಯಲ್ಲಿ ಹಿಂದಿ ಭಾಷಣ

ವಿಶ್ವಸಂಸ್ಥೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಅಟಲ್ ಬಿಹಾರಿ ವಾಜಪೇಯಿ ಹಿಂದಿಯಲ್ಲಿ ಭಾಷಣ ಮಾಡಿದರು. ವಿಶ್ವಸಂಸ್ಥೆಯಲ್ಲಿ ಹಿಂದಿಯಲ್ಲಿ ಭಾಷಣ ಮಾಡಿದ ಮೊದಲಿಗ ಎನಿಸಿಕೊಂಡರು.

ಮೂರು ಬಾರಿಯ ಪ್ರಧಾನಿ

ಮೂರು ಬಾರಿ ಪ್ರಧಾನಿಯಾಗಿದ್ದ ವಾಜಪೇಯಿ. 1996 ಮೇ 16ರಿಂದ 13 ದಿನಗಳ ಕಾಲ.. 1998 ಮಾರ್ಚ್ 13ರಿಂದ 13 ತಿಂಗಳ ಕಾಲ ಹಾಗೂ 1999 ಅಕ್ಟೋಬರ್ 13ರಿಂದ ಪೂರ್ಣ 5 ವರ್ಷಗಳ ಕಾಲ ಪ್ರಧಾನಿಯಾಗಿದ್ದರು.

ಅಣು ರಾಷ್ಟ್ರವಾಗಿ ಉದಯ

1998 ಮೇ 13ರಂದು ರಾಜಸ್ಥಾನ್​ನ ಪೋಖ್ರಾಣ್​ನಲ್ಲಿ ಆಪರೇಷನ್ ಶಕ್ತಿ ಹೆಸರಿನಲ್ಲಿ ಅಣು ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಯಿತು.

ಲಾಹೋರ್​ಗೆ ಬಸ್​

1999 ಫೆಬ್ರವರಿ 19ರಂದು ಸದಾ-ಇ- ಸರಹದ್​ ಹೆಸರಿನಲ್ಲಿ ಪಾಕಿಸ್ತಾನದ ಲಾಹೋರ್​ಗೆ ಬಸ್ ಸಂಚಾರ ಆರಂಭಿಸಿದರು. ಈ ಮೂಲಕ ಭಾರತ-ಪಾಕ್ ನಡುವೆ ಸ್ನೇಹ ಹಸ್ತ ಚಾಚಿದರು.

ಪಾರ್ಶ್ವವಾಯು ಆಘಾತ

2000ರ ಅಂತ್ಯದ ವೇಳೆಗೆ ವಾಜಪೇಯಿ ಆರೋಗ್ಯ ಕೈಕೊಡಲು ಆರಂಭಿಸಿತು. 2001ರಲ್ಲಿ ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾದರು. 2009ರಲ್ಲಿ ಪಾರ್ಶ್ವವಾಯುಗೆ ಒಳಗಾದರು. ನಂತರ ಅವರಿಗೆ ಎಂದೂ ಮಾತನಾಡಲು ಆಗಲಿಲ್ಲ.

ಭಿನ್ನ ರಾಜ್ಯಗಳ ಸಂಸದ

ವಾಜಪೇಯಿ 5 ರಾಜ್ಯಗಳಿಂದ ಸಂಸತ್ ಪ್ರವೇಶಿಸಿದ ಏಕೈಕ ರಾಜಕಾರಣಿ. ಉತ್ತರ ಪ್ರದೇಶ, ಗುಜರಾತ್, ದೆಹಲಿ, ಮಧ್ಯಪ್ರದೇಶ ಮತ್ತು ಗುಜರಾತ್​ನಿಂದ ಆಯ್ಕೆಯಾಗಿದ್ದರು.

ಕವಿ ಹೃದಯಿ

ಭಾರತ ಕಂಡ ಕವಿಹೃದಯಿ ಪ್ರಧಾನಿ. ಹಲವಾರು ಕವಿತೆಗಳನ್ನು ಕೂಡ ಬರೆದಿದ್ದಾರೆ. ಸಂದರ್ಶನವೊಂದರಲ್ಲಿ ನಾನು ರಾಜಕಾರಣಿ ಆಗುವುದಕ್ಕಿಂತ ಕವಿಯಾಗಿರಲು ಬಯಸುತ್ತೇನೆ ಎಂದಿದ್ದರು.

ಮಾಂಸಹಾರ ಇಷ್ಟಪಡುತ್ತಿದ್ದ ಬ್ರಾಹ್ಮಣ

ವಾಜಪೇಯಿ ಮೂಲತಃ ಬ್ರಾಹ್ಮಣ ಕುಟುಂಬದವರೇ ಆಗಿದ್ದರೂ ಮಾಂಸಹಾರ ಹೆಚ್ಚು ಇಷ್ಟಪಡುತ್ತಿದ್ದರು. ಹಳೆಯ ದೆಹಲಿಯ ಕರೀಂ ಅವರ ನೆಚ್ಚಿನ ಹೋಟೆಲ್ ಆಗಿದ್ದರೆ, ಸಿಗಡಿ ಅವರ ನೆಚ್ಚಿನ ಖಾದ್ಯವಾಗಿತ್ತು.

ದೀರ್ಘಕಾಲದ ಸಂಸದ

47 ವರ್ಷಗಳ ಕಾಲ (11 ಬಾರಿ ಲೋಕಸಭಾ ಸದಸ್ಯ, 2 ಬಾರಿ ರಾಜ್ಯಸಭಾ ಸದಸ್ಯ) ಸಂಸದರಾಗಿ ಸೇವೆ ಸಲ್ಲಿಸಿದ್ದರು.

ಭಾರತ ರತ್ನ

2014 ಡಿಸೆಂಬರ್ 25ರಂದು ದೇಶದ ಅತ್ಯುನ್ನತ ನಾಗರಿಕ ಸೇವಾ ಪ್ರಶಸ್ತಿಯಾದ ಭಾರತ ರತ್ನ ಘೋಷಣೆ ಮಾಡಲಾಯಿತು. ರಾಷ್ಟ್ರಪತಿ ಪ್ರಣಭ್ ಮುಖರ್ಜಿ 2105 ಮಾರ್ಚ್​ 27ರಂದು ಅವರ ನಿವಾಸದಲ್ಲಿಯೇ ಗೌರವ ಅರ್ಪಿಸಿದರು.

Next Story

RELATED STORIES