Top

video viral: ಪಿಯಾನೊದಲ್ಲಿ ನುಡಿಸಿದ ಜನಗಣಮನ, 7.8 ಕೋಟಿ ವೀಕ್ಷಣೆ!

video viral: ಪಿಯಾನೊದಲ್ಲಿ ನುಡಿಸಿದ ಜನಗಣಮನ, 7.8 ಕೋಟಿ ವೀಕ್ಷಣೆ!
X

ಪಿಯಾನೋದಲ್ಲಿ ನುಡಿಸಿದ ಜನಗಣಮನವನ್ನು ಯೂಟ್ಯೂಬ್ ನಲ್ಲಿ 7.8 ಕೋಟಿ ಜನರು ವೀಕ್ಷಿಸಿರುವುದು ಹೊಸ ದಾಖಲೆಯಾಗಿದೆ. ಯಾವುದೇ ದೇಶದ ರಾಷ್ಟ್ರಗೀತೆಯನ್ನು ಯೂಟ್ಯೂಬ್​ನಲ್ಲಿ ಅತಿ ಹೆಚ್ಚು ಮಂದಿ ವೀಕ್ಷಿಸಿದ ದಾಖಲೆಗೆ ಜನಗಣಮನ ಪಾತ್ರವಾಗಿದೆ.

ಮುಂಬೈ ಮೂಲದ ಪಿಯಾನೊವಾದಕ ಶ್ಯಾಮ್ ಇಟಾಲಿಯಾ ಈ ಸಂಗೀತವನ್ನು ನುಡಿಸಿ, ಫರ್ಹಾ ವಿಜಯ್ ಅರೋರಾ ನಿರ್ದೇಶಿಸಿರುವ ಈ ವೀಡಿಯೋಗೆ ನಿರೀಕ್ಷೆಗೂ ಮೀರಿದ ಸ್ಪಂದನೆ ದೊರೆತಿದೆ. ಜುಲೈ 29 ರಂದು ಯೂಟ್ಯೂಬ್ ನಲ್ಲಿ ವೀಡಿಯೋ ಅಪ್ ಲೋಡ್ ಮಾಡಲಾಗಿದ್ದು, ಜನರಿಂದ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಲಭಿಸಿದೆ.

https://www.youtube.com/watch?time_continue=1&v=YNpqyL3Z_6A

ಫ್ರಾನ್ಸ್ ರಾಷ್ಟ್ರಗೀತೆಯನ್ನು 36 ದಶಲಕ್ಷ ಜನರು ವೀಕ್ಷಿಸಿದ ದಾಖಲೆಯನ್ನು ಭಾರತದ ರಾಷ್ಟ್ರಗೀತೆ ಅಳಿಸಿ ಹಾಕಿದೆ. ಅದು ಕೂಡ ಹಿಂದಿನ ದಾಖಲೆಗಿಂತ ಎರಡು ಪಟ್ಟು ಜನರು ವೀಕ್ಷಿಸಿರುವುದು ವಿಶೇಷ.

ಯೂಟ್ಯೂಟ್ ನಲ್ಲಿ ವೀಡಿಯೋ ಅಪ್ ಲೋಡ್ ಮಾಡಿದ ಒಂದೇ ದಿನದಲ್ಲಿ 5 ದಶಲಕ್ಷ ಜನರು ವೀಕ್ಷಿಸಿದ್ದರು. ಇದು ನಮ್ಮ ಜೀವಮಾನದ ಸಾಧನೆ ಆಗಲಿದೆ ಎಂದು ಶ್ಯಾಮ್ ಇಟಾಲಿಯಾ ಸಂತಸ ವ್ಯಕ್ತಪಡಿಸಿದ್ದಾರೆ.

Next Story

RELATED STORIES