Top

2019 ಚುನಾವಣೆಯಲ್ಲಿ ಬಿಜೆಪಿಗೆ 227, ಕಾಂಗ್ರೆಸ್​ಗೆ 78 ಸ್ಥಾನ: ಟೈಮ್ಸ್​ ನೌ ಸಮೀಕ್ಷೆ

2019 ಚುನಾವಣೆಯಲ್ಲಿ ಬಿಜೆಪಿಗೆ 227, ಕಾಂಗ್ರೆಸ್​ಗೆ 78 ಸ್ಥಾನ: ಟೈಮ್ಸ್​ ನೌ ಸಮೀಕ್ಷೆ
X

2019ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ 227, ಕಾಂಗ್ರೆಸ್ 78 ಹಾಗೂ ಇತರೆ ಪಕ್ಷಗಳಿಗೆ 238 ಸ್ಥಾನ ಪಡೆಯಲಿದೆ ಎಂದು ಟೈಮ್ಸ್ ನೌ ಸಮೀಕ್ಷೆ ಹೇಳಿದೆ.

ಲೋಕಸಭಾ ಚುನಾವಣೆಗೆ ಕೇವಲ 1 ವರ್ಷ ಬಾಕಿ ಇರುವ ಹಿನ್ನೆಲೆಯಲ್ಲಿ ಟೈಮ್ಸ್ ನೌ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಬಿಜೆಪಿಗೆ 227 ಸ್ಥಾನ ದೊರೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಬಿಜೆಪಿ 227, ಕಾಂಗ್ರೆಸ್‌ಗೆ 78, ಇತರ ಪಕ್ಷಗಳಿಗೆ 238 ಸೀಟುಗಳು ಬರಲಿವೆ ಎಂದು ಸಮೀಕ್ಷೆ ತಿಳಿಸಿದೆ. ಯಾವುದೇ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವಲ್ಲಿ ಪ್ರಮುಖ ಪಾತ್ರವಹಿಸುವ ಅತಿದೊಡ್ಡ ರಾಜ್ಯ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ 49 ಸ್ಥಾನಗಳು ಬರಲಿವೆ. ಇನ್ನು ಟಿಡಿಪಿ ಸಖ್ಯ ಕಳೆದುಕೊಂಡಿರುವ ಆಂಧ್ರದಲ್ಲಿ 7, ಬಿಹಾರದಲ್ಲಿ 14, ಜಾರ್ಖಂಡ್‌ನಲ್ಲಿ 12, ಛತ್ತೀಸ್‌ಗಢದಲ್ಲಿ 10 ಬರಲಿವೆ ಎಂದು ಸಮೀಕ್ಷೆ ತಿಳಿಸಿದೆ.

ಕರ್ನಾಟಕದಲ್ಲೂ ಬಿಜೆಪಿ ಮೇಲುಗೈ

ಕರ್ನಾಟಕದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟ ಸರ್ಕಾರವಿದ್ದರೂ ಬಿಜೆಪಿಗೆ 2 ಸ್ಥಾನ ಲಾಭವಾಗಲಿದೆ. ಕಳೆದ ಬಾರಿಗೆ ಬಿಜೆಪಿಗೆ 17 ಸ್ಥಾನ ಸಿಕ್ಕಿತ್ತು. ಕಾಂಗ್ರೆಸ್‌ 6 ಸ್ಥಾನ, ಇತರರಿಗೆ (ಜೆಡಿಎಸ್‌) 3 ಸ್ಥಾನ. ಜೆಡಿಎಸ್‌ ಜತೆಗಿನ ಮೈತ್ರಿಯಿಂದ ಕಾಂಗ್ರೆಸ್‌ಗೆ 3 ಸ್ಥಾನ ನಷ್ಟವಾಗಲಿದೆ.

ಡಿಎಸ್‌ ಹಿಂದಿನ ಚುನಾವಣೆಯಲ್ಲಿ 2 ಸ್ಥಾನ ಗೆದ್ದಿದ್ದರೆ ಹೆಚ್ಚುವರಿಯಾಗಿ 1 ಸ್ಥಾನ ಪಡೆದುಕೊಳ್ಳಲಿದೆ. ಕೇರಳದಲ್ಲಿ ಬಿಜೆಪಿ ಮೊದಲ ಬಾರಿಗೆ 1 ಸ್ಥಾನ ಗೆಲ್ಲಲಿದ್ದರೆ, ಕಾಂಗ್ರೆಸ್‌ಗೆ 2 ಸ್ಥಾನ ನಷ್ಟವಾಗಲಿದೆ. ಇತರರಿಗೆ 13 ಸ್ಥಾನ ಲಭ್ಯವಾಗಲಿದೆ ಎಂದು ಸಮೀಕ್ಷೆ ವಿವರಿಸಿದೆ.

Next Story

RELATED STORIES