Top

ಕರ್ನಾಟಕ ಪ್ರೀಮಿಯರ್ ಲೀಗ್‌ ಟೂರ್ನಿ : ಇಂದಿನಿಂದ ಆರಂಭ

ಬೆಂಗಳೂರು : ಸ್ವಾತಂತ್ರ್ಯ ದಿನವಾದ ಇಂದು, ಮೋಡ ಮುಸುಕಿನ ನಡುವೆ, ಕರ್ನಾಟಕ ಪ್ರೀಮಿಯರ್ ಲೀಗ್‌ ಟ್ವೆಂಟಿ-20 ಕ್ರಿಕೆಟ್‌ ಟೂರ್ನಿಯ ಸಂಭ್ರಮ ಸಂಜೆ 5.30ಕ್ಕೆ ಗರಿಗೆದರಲಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನೆ ನಂತರ, ಹಾಲಿ ಚಾಂಪಿಯನ್ ಬೆಳಗಾವಿ ಪ್ಯಾಂಥರ್ಸ್‌ ಮತ್ತು ಬೆಂಗಳೂರು ಬ್ಲಾಸ್ಟರ್ಸ್‌ ತಂಡಗಳು ಮುಖಾಮುಖಿಯಾಗಲಿವೆ.

ಆಲ್‌ರೌಂಡ್‌ ಸ್ಟುವರ್ಟ್‌ ಬಿನ್ನಿ ಮತ್ತು ಸ್ಪೋಟಕ ಬ್ಯಾಟ್ಸ್‌ಮನ್‌ ರಾಬಿನ್‌ ಉತ್ತಪ್ಪ ಅವರು ತಂಡಗಳನ್ನು ಮುನ್ನಡೆಸಲಿದ್ದಾರೆ.

ಮೇಲ್ನೋಟಕ್ಕೆ ಎರಡೂ ತಂಡಗಳು ಬಲಿಷ್ಠವಾಗಿವೆ. ಅನುಭವಿ ಮತ್ತು ಯುವ ಆಟಗಾರರ ಪಡೆ ಇದೆ. ಬೆಂಗಳೂರು ತಂಡದಲ್ಲಿ ಕೆ.ಸಿ.ಅವಿನಾಶ್, ಮನೋಜ್‌ ಭಾಂಡಗೆ, ಆನಂದ ದೊಡ್ಡಮನಿ ಅವರು ತಮ್ಮ ಹೆಜ್ಜೆಗುರುತು ಮೂಡಿಸಲು ಕಾದಿರುವ ಉದಯೋನ್ಮಖ ಆಟಗಾರರು.

ಬ್ಯಾಟ್ಸಮನ್‌ ಪವನ್‌ ದೇಶಪಾಂಡೆ, ಕೆ.ಬಿ.ಪವನ್, ಮಿತ್ರಕಾಂತ್ ಯಾದವ್ ಅವರು, ತಮ್ಮ ಅನುಭವವನ್ನು ತಂಡಕ್ಕೆ ಧಾರೆಯೆರೆಯಲು ಸಿದ್ದರಾಗಿದ್ದಾರೆ.

ಬೆಳಗಾವಿ ತಂಡದಲ್ಲಿ ಸ್ಥಾನ ಪಡೆದಿರುವ ಯುವ ಬೌಲರ್ ಶುಭಾಂಗ್‌ ಹೆಗ್ಡೆ ಅವರು, ತಮ್ಮ ಸಾಮರ್ಥ್ಯ ಸಾಬೀತು ಪಡಿಸಲು ಕಾತುರರಾಗಿದ್ದಾರೆ. ಸ್ಪೋಟಕ ಬ್ಯಾಟ್ಸಮನ್‌ಗಳನ್ನು ಕಟ್ಟಿಹಾಕುವ ಸವಾಲು ಶುಭಾಂಗ್‌ ಮುಂದಿದೆ.

ಈ ಬಾರಿ ಕರ್ನಾಟಕ ಪ್ರೀಮಿಯರ್ ಲೀಗ್‌ನ ಮೊದಲ ಮೂರು ಪಂದ್ಯಗಳು ಬೆಂಗಳೂರಿನಲ್ಲೇ ನಡೆಯಲಿವೆ. ಆಗಸ್ಟ್ 19ರಿಂದ 31ರ ವರೆಗೆ ಹುಬ್ಬಳ್ಳಿಯಲ್ಲಿ ಪಂದಗಳು ನಡೆಯಲಿವೆ.

ಇನ್ನೂ ಕರ್ನಾಟಕ ಪ್ರೀಮಿಯರ್ ಲೀಗ್‌ನ ಪಂದ್ಯಗಳು ಸೆ.1ರಿಂದ 6ರ ವರೆಗೆ ಮೈಸೂರಿನಲ್ಲಿ ನಾಕೌಟ್‌ ಹಂತದ ಪಂದ್ಯಗಳು ನಡೆಯಲಿವೆ. ಈ ಎಲ್ಲಾ ಪಂದ್ಯಗಳ ನೇರಪ್ರಸಾರವನ್ನು ನೀವು ಸ್ಟಾರ್ ಸ್ಪೋರ್ಟ್ಸ್‌ ನಲ್ಲಿ ನೋಡಬಹುದಾಗಿದೆ.

Next Story

RELATED STORIES