Top

ಮೈಸೂರಿನಲ್ಲಿ ವಿಭಿನ್ನ ಸ್ವಾತಂತ್ರ್ಯ ದಿನಾಚರಣೆ

ಮೈಸೂರಿನಲ್ಲಿ ವಿಭಿನ್ನ ಸ್ವಾತಂತ್ರ್ಯ ದಿನಾಚರಣೆ
X

ಮೈಸೂರು: 72ನೇ ಸ್ವಾತಂತ್ರ್ಯ ದಿನಾಚರಣೆ ದೇಶದಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆದರೆ ಮೈಸೂರಿನಲ್ಲಿ ವಿಭಿನ್ನವಾಗಿ ಸ್ವಾತಂತ್ರ ಹೋರಾಟಗಾರಿಗೆ ನಮನ ಸಲ್ಲಿಸುವ ಮೂಲಕ ಆಚರಿಸಲಾಗುತ್ತಿದೆ. ರಾಷ್ಟ್ರ ನಾಯಕರು ಕೇಕ್‌ನಲ್ಲಿ ಅರಳಿದ್ದು, 480 ಕೆಜಿ ತೂಕದ ಫ್ರೀಡಂ ಕೇಕ್‌ ವಿಶೇಷವಾಗಿದೆ.

ಮಹಾತ್ಮಾ ಗಾಂಧೀಜಿ, ಅಂಬೇಡ್ಕರ್, ಭಗತ್ ಸಿಂಗ್, ಅಬ್ದುಲ್ ಕಲಾಂ ಹೀಗೆ ಸಾಲು ಸಾಲು ಸ್ವಾತಂತ್ರ್ಯ ಹೋರಾಟಗಾರರ ಚಿತ್ರಗಳು ಇವತ್ತು ಕೇಕ್ ನಲ್ಲಿ ಅರಳಿತ್ತು. ಮೈಸೂರಿನ ಕೃಷ್ಣಮೂರ್ತಿಪುರಂ ನಲ್ಲಿರುವ ಹೋಟೆಲ್ ಮಾಲೀಕರ ಸಂಘದ ಕಚೇರಿಯಲ್ಲಿ ಇಂದು ಭಾರತಕ್ಕೆ ಸ್ವಾತಂತ್ರ ತಂದುಕೊಟ್ಟ ರಾಷ್ಟ್ರ ನಾಯಕರ ಭಾವಚಿತ್ರ ಇರುವ ಕೇಕ್ ತಯಾರಿಸಿ ಗೌರವ ನಮನ ಸಲ್ಲಿಸಲಾಯಿತು. ರಾಷ್ಟ್ರ ನಾಯಕರ ಭಾವಚಿತ್ರಗಳುಳ್ಳ ಕೇಕ್‌ನಲ್ಲಿ ಭಗತ್ ಸಿಂಗ್, ಅಂಬೇಡ್ಕರ್, ಗಾಂಧಿಜೀ, ಮೊದಲ ಪ್ರಧಾನಿಯಿಂದ ಹಿಡಿದು ಇಂದಿನ ಪ್ರಧಾನಿ ಮೋದಿವರೆಗಿನ ಚಿತ್ರಗಳನ್ನ 480 ಕೆಜಿಯ ಭಾರಿ ಗಾತ್ರದ ಕೇಕ್ ನಲ್ಲಿ ಅದ್ಭುತವಾಗಿ ಚಿತ್ರಿಸಲಾಗಿತ್ತು. ಮೈಸೂರು ಹೋಟೆಲ್ ಮಾಲೀಕರ ಸಂಘ ಹಾಗೂ ಡಾಲ್ಫಿನ್ ಬೇಕರಿ ಗ್ರೂಪ್ ಜೊತೆಗೂಡಿ 150 ಅಡಿ ಉದ್ದದ ಕೇಕ್ ತಯಾರಿಸಿದ್ದು ವಿಶೇಷವಾಗಿತ್ತು.

ಇನ್ನೂ ಈ ಕೇಕ್ ತಯಾರಿಕೆಗೆ 6 ಜನ ಅನುಭವಿ ಕೇಕ್ ತಯಾರಕರಿದ್ದು, ಎರಡು ಲಕ್ಷ ವೆಚ್ಚವಾಗಿದೆ. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ತಯಾರಾಗಿರುವ ಈ ಕೇಕ್‌ನ್ನು ಸಾರ್ವಜನಿಕರ ಪ್ರದರ್ಶನಕ್ಕಿಡಲಾಗಿದ್ದು, ಹಿರಿಯ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಸಾರ್ವಜನಿಕರು ಪ್ರಸಂಶೆ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಇದನ್ನ ತಿನ್ನಲು ಬಳಕೆ ಮಾಡದೆ ಕೇವಲ ಪ್ರದರ್ಶನಕ್ಕೆ ಮಾತ್ರ ಆದ್ಯತೆ ನೀಡಲಾಗಿದೆ. ಒಟ್ಟಾರೆ, ಕೇವಲ ಪ್ರದರ್ಶನಕ್ಕಾಗಿ ಎರಡು ಲಕ್ಷ ವೆಚ್ಚ ಮಾಡಿ ದೇಶಕ್ಕಾಗಿ ದುಡಿದ ಮಹಾನಿಯರ ಭಾವಚಿತ್ರ ಹಾಕಿ ಮಾಹಿತಿ ನೀಡಲಾಗುತ್ತಿದೆ.

ಸುರೇಶ್, Tv5 ಕನ್ನಡ, ಮೈಸೂರು

Next Story

RELATED STORIES