Top

ಗೌರಿ-ಗಣೇಶ ಹಬ್ಬಕ್ಕೆ ಸಿನಿಪ್ರಿಯರಿಗೆ ಡಬಲ್ ಧಮಾಕಾ

ಗೌರಿ-ಗಣೇಶ ಹಬ್ಬಕ್ಕೆ ಸಿನಿಪ್ರಿಯರಿಗೆ ಡಬಲ್ ಧಮಾಕಾ
X

ಭಾರತೀಯ ಚಿತ್ರರಂಗದ ಎರಡು ಬಹುನಿರೀಕ್ಷಿತ ಸಿನಿಮಾಗಳ ರಿಲೀಸ್​ಗೆ ವೇದಿಕೆ ಸಿದ್ಧವಾಗಿದೆ. ಎರಡೂ ಕೂಡ ಕನ್ನಡದ ಸಿನಿಮಾಗಳು. ಆದ್ರೆ, ಗಡಿಮೀರಿ ಸೌತ್ ಸಿನಿದುನಿಯಾದಲ್ಲಿ ಸೆನ್ಸೇಷನ್​ ಕ್ರಿಯೇಟ್ ಮಾಡೋಕೆ ಹೊರಟಿರೋ ಸಿನಿಮಾಗಳು ಅನ್ನೋದು ವಿಶೇಷ.

ದಿ ವಿಲನ್-ಕೆಜಿಎಫ್​​ ಅಬ್ಬರಕ್ಕೆ ಬೆದರಿ, ಸ್ಯಾಂಡಲ್​ವುಡ್​ನಲ್ಲಿ ಸಣ್ಣ ಸಿನಿಮಾಗಳು ಪಕ್ಕಕ್ಕೆ ಸರ್ಕೊಂಡಿವೆ. ಸೆಪ್ಟೆಂಬರ್​ನಲ್ಲೇ ಬಹುನಿರೀಕ್ಷಿತ, ದಿ ವಿಲನ್ ಮತ್ತು ಕೆಜಿಎಫ್​ ರಿಲೀಸ್​ ಆಗೋದು ಪಕ್ಕಾ ಆಗಿದೆ.

ಜೋಗಿ ಪ್ರೇಮ್, ಶಿವಣ್ಣ, ಸುದೀಪ್ ಮೆಗಾ ಕಾಂಬಿನೇಷನ್​​ ದಿ ವಿಲನ್ ಬಜೆಟ್ 45ರಿಂದ 50 ಕೋಟಿ. ಯಶ್ ಅಭಿನಯದ ಕೆಜಿಎಫ್ ಕೂಡ 50 ಕೋಟಿ ಸಿನಿಮಾ. ಬರೋಬ್ಬರಿ 300 ಕೋಟಿ ಕಲೆಕ್ಷನ್ ಟಾರ್ಗೆಟ್ ಮಾಡಿ, ಈ ಎರಡೂ ಸಿನಿಮಾಗಳನ್ನ ತೆರೆಗೆ ತರಲಾಗ್ತಿದೆ.

ಕನ್ನಡ ಚಿತ್ರರಂಗದ ಹೈವೋಲ್ಟೇಜ್ ಮಲ್ಟಿಸ್ಟಾರರ್ ಸಿನಿಮಾ ದಿ ವಿಲನ್. ಜೋಗಿ ಪ್ರೇಮ್ ನಿರ್ದೇಶನದ ಈ ಚಿತ್ರದಲ್ಲಿ ಶಿವಣ್ಣ-ಕಿಚ್ಚ ಜೊತೆಯಾಗಿದ್ದು, ಈಗಾಗಲೇ ಸಿನಿಮಾ ಸ್ಯಾಂಪಲ್ಸ್​​ ಬೇಜಾನ್ ಸೌಂಡ್ ಮಾಡ್ತಿದೆ. ಇದೇ ಭಾನುವಾರ ದಿ ವಿಲನ್ ಆಡಿಯೋ ಲಾಂಚ್​ಗೆ ಪ್ಲಾನ್ ಮಾಡಿದ್ದು, ಗಣೇಶ ಹಬ್ಬದ ಸಂಭ್ರಮದಲ್ಲಿ ಸೆಪ್ಟೆಂಬರ್ 13ಕ್ಕೆ ವಿಲನ್ಸ್ ಅಬ್ಬರ ಶುರುವಾಗಲಿದೆ. ಬಜೆಟ್ ಮತ್ತು ವಿಲನ್ಸ್ ರೇಂಜ್​ಗೆ ತಕ್ಕಂತೆ ಸಿಕ್ಕಾಪಟ್ಟೆ ಗ್ರ್ಯಾಂಡಾಗಿ ಸಿನಿಮಾ ರಿಲೀಸ್​ಗೆ ಸಿದ್ಧತೆ ನಡೀತಿದೆ. ಬರೋಬ್ಬರಿ 500ಕ್ಕೂ ಅಧಿಕ ಸ್ಕ್ರೀನ್​ಗಳಲ್ಲಿ ವಿಲನ್ಸ್ ನಡುವೆ ಕಾಳಗ ಶುರುವಾಗಲಿದೆ.

ದಿ ವಿಲನ್ ಸಿನಿಮಾ ತೆರೆಕಂಡ 15 ದಿನಗಳ ಅಂತರದಲ್ಲಿ ಕೆಜಿಎಫ್ ರಾಕಿ ದರ್ಬಾರ್ ಶುರುವಾಗಲಿದೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್​​​​​ನಲ್ಲಿ ನಿರ್ಮಾಪಕ ವಿಜಯ್ ಕಿರಗಂದೂರ್ ನಿರ್ಮಾಣ ಮಾಡ್ತಿರೋ ಬಹುಕೋಟಿ ವೆಚ್ಚದ ಚಿತ್ರ ಇದು. ಉಗ್ರಂ ಫೇಮ್ ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರಕ್ಕಾಗಿ ರಾಕಿಂಗ್​ ಸ್ಟಾರ್ ಯಶ್ ಎರಡು ವರ್ಷಗಳಿಂದ ತಪಸ್ಸು ಮಾಡ್ತಿದ್ದಾರೆ. 500 ಪ್ಲಸ್ ಸ್ಕ್ರೀನ್​ಗಳಲ್ಲಿ ಕೆಜಿಎಫ್ ಮಣ್ಣಿನ ಕಥೆ ಅನಾವರಣವಾಗಲಿದೆ.

ವಿಶೇಷ ಅಂದ್ರೆ, ದಿ ವಿಲನ್ ಮತ್ತು ಕೆಜಿಎಫ್ ಎರಡೂ ಸಿನಿಮಾಗಳು ಏಕಕಾಲಕ್ಕೆ ಕನ್ನಡದ ಜೊತೆಗೆ ತಮಿಳು, ತೆಲುಗು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಆಗ್ತಿದೆ. ಅದ್ರಲ್ಲೂ ಕೆಜಿಎಫ್ ಇಂಟರ್​ನ್ಯಾಷನಲ್ ಸ್ಟ್ಯಾಂಡರ್ಡ್ ಸಿನಿಮಾ. ಹಾಗಾಗಿ ಕೆಜಿಎಫ್ ರಾಕಿ ಖದರ್ ಕೊಂಚ ಜೋರಾಗೇ ಇರುತ್ತೆ. ಇತ್ತೀಚೆಗಷ್ಟೆ ತಮನ್ನಾ ಹೆಜ್ಜೆ ಹಾಕಿರೋ ಸ್ಪೆಷಲ್ ಸಾಂಗ್ ಶೂಟಿಂಗ್ ಕಂಪ್ಲೀಟ್ ಮಾಡಿರೋ ಚಿತ್ರತಂಡ ಪೋಸ್ಟ್ ಪ್ರೋಡಕ್ಷನ್​ನಲ್ಲಿ ಬ್ಯುಸಿಯಾಗಿದ್ದು, ಸೆಪ್ಟೆಂಬರ್ ಕೊನೆಗೆ ಚಿತ್ರವನ್ನ ತೆರೆಗೆ ತರೋ ಸನ್ನಾಹದಲ್ಲಿದೆ.

ನಾಣಿ.. ಎಂಟ್ರಟ್ರೈನ್​ಮೆಂಟ್ ಬ್ಯೂರೊ, ಟಿವಿ5

Next Story

RELATED STORIES