Top

ಉದ್ಘಾಟನೆ ಕಾಣದೇ ಪಾಳು ಬಿದ್ದ ವೀರಸೌಧ.!

ಉದ್ಘಾಟನೆ ಕಾಣದೇ ಪಾಳು ಬಿದ್ದ ವೀರಸೌಧ.!
X

ಚಿತ್ರದುರ್ಗ : ಸ್ವಾತಂತ್ರಕ್ಕೆ ಹೋರಾಡಿದ ಮಹನೀಯರ ನೆನಪಿಗಾಗಿ ನಿರ್ಮಾಣವಾದ ವೀರಸೌಧ ಉದ್ಘಾಟನೆ ಭಾಗ್ಯ ಕಾಣದೆ ಪಾಳು ಬಂಗಲೆಯಾಗಿ ರೂಪತಳೆದಿದೆ. 15 ಲಕ್ಷ ರೂ. ವೆಚ್ಚದಲ್ಲಿ ರಂಗಾಪುರ ಗ್ರಾಮದಲ್ಲಿ ನಿರ್ಮಿಸಿದ ವೀರಸೌಧ ಇದೀಗ ಅನೈತಿಕ ಚಟುವಟಿಕೆ ತಾಣವಾಗಿ ನಿರ್ಮಾಣವಾಗಿದೆ.

ಈ ವೀರಸೌಧದ ಸ್ಥಿತಿ ನೋಡಿದರೆ ಸರ್ಕಾರದ ಹಣ ಎಲ್ಲಿ ಪೋಲಾಗುತ್ತಿದೆ ಎಂಬುದು ಸ್ಪಷ್ಟವಾಗುತ್ತಿಲ್ಲ. ಸ್ವತಂತ್ರ ಹೋರಾಟದಲ್ಲಿ ಇದೇ ಗ್ರಾಮದ 10 ಜನ ಭಾಗವಹಿಸಿದ್ದರು. ಇದರ ನೆನಪು ಕಳೆದ 20 ವರ್ಷಗಳಿಂದ ಈ ವೀರಸೌಧದ ಉದ್ಘಾಟನೆಯ ಮೂಲಕ ಕಾಣಲು ಅಂಬಲಿಸುತ್ತಿದ್ದಾರೆ.

ಹೌದು ಹೀಗೆ ಪಾಳುಬಿದ್ದ ವೀರಸೌಧ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ರಂಗಾಪುರದ ಗ್ರಾಮದಲ್ಲಿದೆ. ಈ ವೀರಸೌಧ ಕಳೆದ 20 ವರ್ಷಗಳ ಹಿಂದೆ ಹೋರಾಟಗಾರರ ಹೆಸರಲ್ಲಿ ನಿರ್ಮಾಣವಾಗಿತ್ತು. ಅಂದಿನಿಂದ ಇಂದಿಗೂ ಉದ್ಘಾಟಿಸುವ ಭಾಗ್ಯ ದೊರೆತ್ತಿಲ್ಲ. ಗಿಡ ಗೆಂಟೆಗಳು ಬೆಳೆದ ಕಾರಣ ಜೂಜು ಕೋರರು, ಈ ಪಾಳು ಬಿದ್ದ ವೀರಸೌಧದ ಯಾವುದೇ ಚಿಂತೆಯಿಲ್ಲದೇ ತಮ್ಮ ಆಟ ಮುಂದುವರೆಸುತ್ತಿದ್ದಾರೆ. ಅಕ್ರಮ ದಂಧೆಗೆ ವೀರಸೌಧ ಬಳಕೆಯಾಗುತ್ತಿರುವುದು ನೋಡಿದರೆ ನೋವಾಗುತ್ತದೆ ಎನ್ನತ್ತಾರೆ ಗ್ರಾಮಸ್ಥರು.

ಆಂದಹಾಗೇ ಆರ್.ನುಲೇನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಕಟ್ಟಡದ ನಿರ್ವಹಣೆ ವಹಿಸಿದ್ದರು. ಕಳೆದ ವರ್ಷ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ 6 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಂಪೌಂಡ್ ನಿರ್ಮಿಸಲು ಯೋಜನೆ ತಯಾರಿಸಲಾಗಿತ್ತು. ಆದರೇ ಅದು ಸಕಾರಗೊಳ್ಳದೇ ಇಂದಿಗೂ ನೆನೆಗುಂದಿಗೆ ಬಿದ್ದಿದೆ. ಈ ಮೂಲಕ ವೀರ ಸೌಧ ಹಾಳಾಗುವ ಹಂತಕ್ಕೆ ತಲುಪಿದೆ.

ಇನ್ನೂ ಈ ವೀರಸೌಧಕ್ಕೆ ಉದ್ಟಾಟನಾ ಭಾಗ್ಯ ದೊರೆತೆರೆ, ಈ ಭಾಗದ ಬಡ ಕುಟುಂಬದವರಿಗೆ ಮದುವೆ ಶುಭ ಕಾರ್ಯಕ್ರಗಳನ್ನು ಮಾಡಲು ಅನುಕೂಲವಾಗುತ್ತದೆ. ಈ ಮೂಲಕ ಬಡ ಕುಟುಂಬಗಳು ಕನಿಷ್ಠ ವೆಚ್ಚದಲ್ಲಿ ಈ ವೀರಸೌಧವನ್ನು ಶುಭ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲು ಅನುಕೂಲವಾಗುತ್ತದೆ. ಆದರೇ ಈ ನಿಟ್ಟಿನಲ್ಲಿ ಇದುವರೆಗೂ ಜನಪ್ರತಿನಿಧಿಗಳು, ಸಂಬಂಧ ಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿರುವುದೇ ವಿಪರ್ಯಾಸ.

ಹೀಗೆ ಸ್ವತಂತ್ರ ಹೋರಾಟಗಾರರ ಹೆಸರಲ್ಲಿ ಕೋಟ್ಯಾಂತರ ರೂಪಾಯಿ ಹಣ ಬಿಡುಗಡೆ ಮಾಡಿ, ಜಿಲ್ಲೆಯ ಅನೇಕ ಕಡೆಯಲ್ಲಿ ವೀರಸೌಧಗಳನ್ನು ನಿರ್ಮಾಣ ಮಾಡಲಾಗಿದೆ. ಆದರೇ, ಇದುವರೆಗೂ ಉದ್ಘಾಟನೆ ಭಾಗ್ಯ ಕಾಣದೇ, ಸಾರ್ವಜನಿಕರ ಉಪಯೋಗದಿಂದ ದೂರ ಉಳಿದು, ಹಾಳಾಗುವ ಹಂತಕ್ಕೆ ತಲುಪಿರುವುದ ಮಾತ್ರ ಶೋಚನೀಯವೇ ಸರಿ.

ಇನ್ನೂ ಈ ಬಗ್ಗೆ ಗಮನವಹಿಸಬೇಕಿದ್ದ ಜಿಲ್ಲೆಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತಾಲೂಕು ಆಡಳಿತ ಈ ಕಟ್ಟಡ ನಿರ್ಮಾಣವಾದಾಗಿನಿಂದ ಈ ವರೆವಿಗೂ ಇತ್ತ ತಿರುಗಿ ನೋಡಿಲ್ಲ. ಸ್ವಾತಂತ್ರ ದಿನದ ಸುಸಂದರ್ಭಕ್ಕಾದರೂ, ಈ ಕಟ್ಟಡಕ್ಕೆ ಉದ್ಘಾಟನೆಯ ಭಾಗ್ಯ ದೊರೆತು, ಸಾರ್ವಜನಿಕರ ಉಪಯೋಗಕ್ಕೆ ಸಿಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.

ವರದಿ : ವೀರೇಶ್ ವಿ ಚಳ್ಳಕೆರೆ, ಟಿವಿ5 ಚಿತ್ರದುರ್ಗ

Next Story

RELATED STORIES