Top

ರಾಜ್ಯದ 18 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ

ರಾಜ್ಯದ 18 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ
X

ಬೆಂಗಳೂರು : ಈ ಬಾರಿಯ ರಾಷ್ಟ್ರಪತಿ ಪದಕ ಗೌರವಕ್ಕೆ ಗಣನೀಯವಾಗಿ ಸೇವೆ ಸಲ್ಲಿಸಿದ ರಾಜ್ಯ 18 ಪೊಲೀಸ್ ಅಧಿಕಾರಿಗಳು ಪಾತ್ರರಾಗಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆ ಸಂದರ್ಭ ಸಮಯದಲ್ಲಿ ನೀಡುವ ಪದಕಗಳಲ್ಲಿ ಶೌರ್ಯ ಪ್ರಶಸ್ತಿ, ವಿಶಿಷ್ಟ ಸೇವಾಪದಕ, ಚಕ್ರ ಪ್ರಶಸ್ತಿ ಹಾಗೂ ಶ್ಲಾಘನೀಯ ಸೇವಾ ಪದಕ ಪ್ರಶಸ್ತಿ ಸೇರಿವೆ.

ಬೆಂಗಳೂರಿನ ಸಿಐಡಿ ವಿಭಾಗದ ಡಿವೈಎಸ್ಪಿ ಪುರುಷೋತ್ತಮ್‌, ಮೈಕೋಲೇಔಟ್‌ ಪೊಲೀಸ್ ಠಾಣೆಯ ಎಸಿಪಿ ಎಂ.ಎನ್‌.ಕರಿಬಸಗೌಡ, ಕೆಎಸ್‌ಆರ್‌ಪಿ ಕಮಾಂಡೆಂಟ್ ಟಿ ಸುಂದರರಾಜು ಸೇರಿದಂತೆ 18 ಪೊಲೀಸ್ ಅಧಿಕಾರಿಗಳಿಗೆ ಪದಕಕ್ಕೆ ಸಂದಿದೆ.

ರಾಷ್ಟ್ರಪತಿ ಪದಕ ಪುರಸ್ಕೃತ 18 ಪೊಲೀಸ್ ಅಧಿಕಾರಿಗಳ ಪಟ್ಟಿ

  1. ಟಿ ಸುಂದರ್ ರಾಜು, ಡೆಪ್ಯೂಟಿ ಕಮಾಂಡೆಂಟ್, ಕೆಎಸ್‌ಆರ್‌ಪಿ ತುಮಕೂರು
  2. ಎಂ ಎನ್‌ ಕರಿಬಸವನ ಗೌಡ, ಎಸಿಪಿ ಮೈಕೋಲೇಔಟ್ ಪೊಲೀಸ್ ಠಾಣೆ, ಬೆಂಗಳೂರು
  3. ಸಿ ಗೋಪಾಲ್‌, ಎಸಿಪಿ ಮೈಸೂರು ನಗರ
  4. ಕೆ ಪುರುಷೋತ್ತಮ್‌, ಡಿವೈಎಸ್ಪಿ ಸಿಐಡಿ ಬೆಂಗಳೂರು
  5. ಟಿ ರಣಗಪ್ಪ, ಡಿವೈಎಸ್ಪಿ ಎಸ್‌ಐಟಿ ಬೆಂಗಳೂರು
  6. ಟಿ ಕೋದಂಡರಾಮ್‌, ಡಿವೈಎಸ್ಪಿ ಎಸಿಬಿ ಬೆಂಗಳೂರು ಗ್ರಾಮಾಂತರ
  7. ಉಮೇಶ್ ಗಣಪತಿ ಶೆಟ್ಟಿ, ಡಿವೈಎಸ್ಪಿ ಎಸಿಬಿ ಮೈಸೂರು
  8. ರುದ್ರಪ್ಪ ಎಸ್ ಉಜ್ಜನಕೊಪ್ಪ, ಡಿವೈಎಸ್ಪಿ ಎಸಿಬಿ ಕೊಪ್ಪಳ
  9. ಮಂಜುನಾಥ್ ಕೆ ಗಂಗಲ್, ಡಿವೈಎಸ್ಪಿ ದಾವಣಗೆರೆ ಗ್ರಾಮಾಂತರ
  10. ಎಂ ಬಾಬು, ಡಿವೈಎಸ್ಪಿ ದಾವಣಗೆರೆ ನಗರ
  11. ಸದಾನಂದ ಎ ತಿಪ್ಪಣ್ಣನವರ್, ಡಿವೈಎಸ್ಪಿ ಅರಸೀಕೆರೆ ಉಪವಿಭಾಗ, ಹಾಸನ
  12. ಸುದೀಶ್ ಎಸ್ ಶೆಟ್ಟಿ, ಪಿಎಸ್‌ಐ ಸಿಐಡಿ ಬೆಂಗಳೂರು
  13. ಎನ್ ಸೋಮಶೇಖರ್, ಪಿಎಸ್ಐ ಕೋಲಾರ
  14. ಟಿ ಎನ್‌ ನಾಗಭೂಷಣ್, ಎಎಸ್‌ಐ ಸಿಐಡಿ ಬೆಂಗಳೂರು
  15. ಟಕೆ ಸಿ ಕೋಮಲಾಚಾರ್, ಎಸಿಪಿ ರಾಣಿಬೆನ್ನೂರು ಸಿಟಿ, ಹಾವೇರಿ
  16. ಹೆಚ್‌ ಎಂ ಪಾಪಣ್ಣ, ಸಹಾಯಕ ಪೊಲೀಸ್ ಇನ್ಪಕ್ಟರ್, ಕೆಎಸ್‌ಆರ್‌ಪಿ ಬೆಂಗಳೂರು
  17. ಸಿದ್ದಲಿಂಗೇಶ್ವರ ಎಸ್, ಹೆಡ್‌ ಕಾನ್‌ಸ್ಟೆಬಲ್, ವಿದ್ಯಾರಣ್ಯಪುರ ಪೊಲೀಸ್‌ ಠಾಣೆ, ಬೆಂಗಳೂರು
  18. ಶಿವಪ್ಪ ಮಲ್ಲಿಕಾರ್ಜನಪ್ಪ ಬಿಳಿಗಿ, ಹೆಡ್‌ ಕಾನ್‌ಸ್ಟೆಬಲ್‌, 5ನೇ ಬೆಟಾಲಿಯನ್‌ ಕೆಎಸ್‌ಆರ್‌ಪಿ ಬೆಂಗಳೂರು

ಪದಕ ಪ್ರಶಸ್ತಿ ಪುರಸ್ಕೃತರಿಗೆ ನಾಳೆ ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆಯಂತು ರಾಷ್ಟ್ರಪತಿಗಳು ಪ್ರಧಾನ ಮಾಡಲಿದ್ದಾರೆ. ಇಂತಹ ಸಾಧಕರಿಗೆ ಟಿವಿ5 ಕನ್ನಡ ವತಿಯಿಂದಲೂ ಅಭಿನಂದನೆಗಳು.

Next Story

RELATED STORIES