Top

ಮೂರು ಮದುವೆಗಳ ಗುಟ್ಟು, ಬಿಚ್ಚಿಟ್ಟ ಆಂದ್ರ ಪವರ್‌ ಸ್ಟಾರ್‌

ಮೂರು ಮದುವೆಗಳ ಗುಟ್ಟು, ಬಿಚ್ಚಿಟ್ಟ ಆಂದ್ರ ಪವರ್‌ ಸ್ಟಾರ್‌
X

ಆಂಧ್ರ ಪ್ರದೇಶದಲ್ಲಿ ಪವರ್ ಸ್ಟಾರ್ ಪವನ್ ಕಲ್ಯಾಣ್​ ಮ್ಯಾರೇಜ್ ಸ್ಟೋರಿ​​ ಸದಾ ಹಾಟ್ ಟಾಪಿಕ್.. ಪವನ್ ಕಲ್ಯಾಣ್ ಒಂದಲ್ಲ ಎರಡಲ್ಲ ಮೂರು ಮೂರು ಮದುವೆ ಮಾಡ್ಕೊಂಡಿದ್ದಾರೆ.. ಪವನ್, ಸದ್ಯ ಜನಸೇನಾ ಪಕ್ಷ ಕಟ್ಟಿ ಸಕ್ರಿಯ ರಾಜಕಾರಣಕ್ಕೆ ಧುಮುಕಿದ್ದಾರೆ.. ಅವ್ರ ರಾಜಕೀಯ ಎದುರಾಳಿಗಳು ಪದೇ ಪದೇ ನೀನು ಮೂರು ಮದುವೆ ಮಾಡ್ಕೊಂಡಿದ್ದೀಯಾ, ನೀನೇನ್ ಸಮಾಜಕ್ಕೆ ಒಳ್ಳೆದು ಮಾಡ್ತೀಯಾ ಅನ್ನೋ ಅರ್ಥದಲ್ಲಿ ವಿಮರ್ಶೆ ಮಾಡ್ತಾನೇ ಇದ್ದಾರೆ... ಕೊನೆಗೂ ಈ ವಿಚಾರದ ಬಗ್ಗೆ ಪವರ್ ಸ್ಟಾರ್ ಮೌನ ಮುರಿದಿದ್ದಾರೆ..

ಅದಾಗಲೇ ನಂದಿನಿ ಅನ್ನೋ ಹುಡುಗಿಯನ್ನ ಮದುವೆಯಾಗಿ ಡಿವೋರ್ಸ್ ಪಡೆದಿದ್ದ ಪವನ್​ಗೆ ರೇಣು ದೇಸಾಯಿ ಎರಡನೇ ಪತ್ನಿ.. ಇನ್ನೇನು ಎಲ್ಲಾ ಸರಿ ಹೋಯ್ತು ಅಂತ ಅಂದು ಕೊಂಡಾಗಲೇ ಪವನ್​​​, ರೇಣು ದಂಪತಿ ಡಿವೋರ್ಸ್​​ ಟಾಲಿವುಡ್​ನಲ್ಲಿ ಸಂಚಲನ ಸೃಷ್ಟಿಸಿತ್ತು.. ಮದುವೆಯಾದ ನಾಲ್ಕೇ ವರ್ಷಕ್ಕೆ ಪರಸ್ಪರ ಒಪ್ಪಿ ವಿವಾಹ ವಿಚ್ಚೇದನ ಪಡೆದಿದ್ರು..

ರೇಣು ದೇಸಾಯಿ ನಂತ್ರ 2013ರಲ್ಲಿ ಅನ್ನಾ ಲೆನೆಜೋವಾ ಅನ್ನೋ ವಿದೇಶಿ ಹುಡುಗಿಯನ್ನ ಪವನ್ ಕಲ್ಯಾಣ್ ಮೂರನೇ ಮದುವೆ ಆಗಿದ್ದಾರೆ.. ಹೀಗಾಗಿ ಅವ್ರ ಮೂರು ಮದುವೆಗಳ ವಿಚಾರ ಪದೇ ಪದೇ ಆಂದ್ರಪ್ರದೇಶದಲ್ಲಿ ಚರ್ಚೆಗೆ ಬರ್ತಿರುತ್ತೆ.. ಪವನ್ ಕಲ್ಯಾಣ್ ರಾಜಕೀಯವಾಗಿ ಏನೇ ಮಾತನಾಡಿದ್ರೂ, ಎದುರಾಳಿಗಳು ಅವ್ರ ವೈಯಕ್ತಿಕ ಜೀವನದ ಬಗ್ಗೆ, ಅದ್ರಲ್ಲೂ ಮೂರು ಮದುವೆಗಳ ಬಗ್ಗೆ ಪ್ರಸ್ತಾಪಿಸಿ, ಮಾತನಾಡ್ತಾ ಬರ್ತಿದ್ದಾರೆ.. ಇದೇ ವಿಚಾರವಾಗಿ ಇದೀಗ ಪವನ್ ಮಾತನಾಡಿದ್ದಾರೆ..

ಪೊಗರಿನಿಂದ ನಾನು ಮೂರು ಮದುವೆ ಆಗ್ಲಿಲ್ಲ..!

ಒಂದು ಮದುವೆ ಆಗಿ ನಿಮ್ ತರ ಊರೂರು ಸುತ್ತಲ್ಲ..!

ಸದ್ಯ ರಾಜ್ಯ ಪ್ರವಾಸ ಮಾಡಿ ಜನಸೇನಾ ಪಕ್ಷವನ್ನ ಸಂಘಟನೆ ಮಾಡ್ತಿರೋ ಪವರ್ ಸ್ಟಾರ್, ಇತ್ತೀಚೆಗೆ ಪಶ್ಚಿಮ ಗೋದಾವರಿಯಲ್ಲಿ ಅಭಿಮಾನಿಗಳನ್ನ ಉದ್ದೇಶಿಸಿ ಮಾತನಾಡಿದ್ರು.. ವೈಸಿಪಿ ನಾಯಕರಿಗೆ, ಅದ್ರಲ್ಲೂ ಜಗನ್ ಮೋಹನ್ ರೆಡ್ಡಿ ಹೆಸರನ್ನ ಪ್ರಸ್ತಾಪಿಸಿ, ನಿಮಗೆಲ್ಲಾ ಹೋಲಿಸಿದ್ರೆ, ನನ್ನ ಜೀವನ ವಾಸಿ.. ನಾನು ಹೊರಗೆ ಹೇಗಿರುತ್ತಿನೋ, ಒಳಗೂ ಹಾಗೇ ಇರ್ತಿನಿ. ನಿಮ್ಮ ರೀತಿ ಒಂದು ಮದುವೆಯಾಗಿ ಮಾಡಬಾರದ್ದೇನು ಮಾಡ್ತಿಲ್ಲ. ನನ್ನ ಕರ್ಮ 3 ಮೂರು ಮದುವೆ ಆದೆ ಅಂತ ಹೇಳಿದ್ದಾರೆ..

ನನ್ನ ಜೊತೆ ಬದುಕೋದಂದ್ರೆ, ಎಂಥವರಿಗೂ ಕಷ್ಟ.. ಬೇರೆಯವರಿಗೋಸ್ಕರ ಸದಾ ಕಷ್ಟಪಡ್ತಿರ್ತೀನಿ, ಪಾರ್ಟಿ, ಪಬ್​ಗಳಿಗೆ ಹೋಗಲ್ಲ.. ಮನೆಯ ಮೂಲೆಯಲ್ಲಿ ಕೂತು ಪುಸ್ತಕ ಓದ್ತಿರ್ತೀನಿ.. ಇಂತವನ ಜೊತೆ ಯಾರು ಇರ್ತಾರೆ ಹೇಳಿ ಅಂತ ಪವನ್ ಪ್ರಶ್ನಿಸಿದ್ದಾರೆ..

ಪವರ್ ಸ್ಟಾರ್ ಪವನ್ ಕಲ್ಯಾಣ್ ಹೇಳಿಕೆಗೆ ವ್ಯಂಗ್ಯ..!

ಹಾಗಾದ್ರೆ 2ನೇ ಪತ್ನಿ ರೇಣು ದೇಸಾಯಿ ಹೇಳ್ತಿರೋದೇನು..?

ಕೆಲವರು ಪವನ್ ಕಲ್ಯಾಣ್​ ಹೇಳಿಕೆಗೆ ವ್ಯಂಗ್ಯವಾಡಿದ್ದಾರೆ.. ಅಲ್ಲಾ ಮೊದಲ ಮದುವೆ ನಂತ್ರ ಎರಡನೇ ಮದುವೆಗೆ ಯೋಚಿಸಬೇಕಿತಲ್ವಾ..? ಈ ರೀತಿ ಬದುಕುವವನು, ಜೊತೆಯಲ್ಲಿ ಯಾರು ಇರಲ್ಲ ಅಂತ ಗೊತ್ತಿದ್ದವರು ಯಾಕೆ ಮೂರು ಮದುವೆ ಮಾಡ್ಕೊಂಡ್ರು ಅಂತ ಮಾತಾಡ್ತಿದ್ದಾರೆ..

ಈ ಹಿಂದೆ ಎರಡನೇ ಮದುವೆಗಾಗಿ ಎಂಗೇಜ್ಮೆಂಟ್ ಮಾಡ್ಕೊಂಡಿದ್ದ ಪವಣ್ ಕಲ್ಯಾಣ್ ಎರಡನೇ ಪತ್ನಿ ರೇಣುದೇಸಾಯಿ, ವಿಚ್ಛೇಧನದ ಬಗ್ಗೆ ಮಾತನಾಡಿದ್ರು.. ನಿನಗ್ಯಾಕೆ ಎರಡನೇ ಮದುವೆ ಅಂತ ಸೋಷಿಯಲ್ ಮೀಡಿಯಾದಲ್ಲಿ ನನ್ನನ್ನ ಪ್ರಶ್ನಿಸುತ್ತಿದ್ದಾರೆ. ಒಂದು ವೇಳೆ ನೀವೇ ಪವನ್ ಕಲ್ಯಾಣ್ ಪತ್ನಿ ಆಗಿದ್ದಿದ್ರೆ, ಅವರು 11 ವರ್ಷ ಜೊತೆಗಿದ್ದು, ನಿಮಗೆ ಗೊತ್ತಿಲ್ಲದೇ ಮತ್ತೊಬ್ಬ ಮಹಿಳೆಯಿಂದ ಮಕ್ಕಳನ್ನ ಹೆತ್ತರೆ, ನೀವು ಹೀಗೆ ಹೇಳ್ತಿದ್ರಾ..? ಅಂತ ಖಾರವಾಗಿ ಪ್ರಶ್ನಿಸಿದ್ರು..

ಸದ್ಯ ಪವನ್ ಕಲ್ಯಾಣ್ ಸಿನಿಮಾಗಳಿಂದ ದೂರವಾಗಿ ಜನಸೇನಾ ಪಕ್ಷ ಸ್ಥಾಪಿಸಿ, ರಾಜಕೀಯ ಅಖಾಡಕ್ಕೆ ಧುಮುಕಿದ್ದು, ಲೋಕಸಭಾ ಚುನಾವಣೆಗೆ ಸ್ಫರ್ಧಿಸೋ ಲೆಕ್ಕಾಚಾರದಲ್ಲಿದ್ದಾರೆ.. ಇಂತಹ ಸಮಯದಲ್ಲಿ ಅವ್ರಿಗೆ ಮೂರು ಮದುವೆಗಳ ವಿಚಾರ ಮುಳುವಾಗೋ ಸಾಧ್ಯತೆಯಿದೆ.. ಅದೇ ಕಾರಣಕ್ಕೆ ಪವನ್ ಆ ವಿಚಾರವನ್ನ ಕೆದಕಿ, ಅದನ್ನ ಸಮರ್ಥಿಸಿಕೊಳ್ಳೊ ಪ್ರಯತ್ನ ಮಾಡ್ತಿದ್ದಾರೆ ಅನ್ನೋದು ಕೆಲವರ ವಾದ..

ನಾಣಿ, ಎಂಟ್ರಟ್ರೈನ್​ಮೆಂಟ್ ಬ್ಯೂರೊ, ಟಿವಿ5

Next Story

RELATED STORIES