Top

ಭಾರತ ಮಹಿಳಾ ತಂಡದ ಕೋಚ್​: ರೇಸ್​ನಲ್ಲಿ ಇಬ್ಬರು ಕನ್ನಡಿಗರು!

ಭಾರತ ಮಹಿಳಾ ತಂಡದ ಕೋಚ್​: ರೇಸ್​ನಲ್ಲಿ ಇಬ್ಬರು ಕನ್ನಡಿಗರು!
X

ಉತ್ತಮ ಪ್ರದರ್ಶನ ನೀಡಿದರೂ ಪ್ರಮುಖ ಘಟ್ಟಗಳಲ್ಲಿ ಎಡವುತ್ತಿರುವ ಭಾರತ ಮಹಿಳಾ ತಂಡದ ಕೋಚ್ ಸ್ಥಾನಕ್ಕಾಗಿ ಹುಡುಕಾಟ ಮುಂದುವರಿದಿದ್ದು ಇಬ್ಬರು ಕನ್ನಡಿಗರ ನಡುವೆ ಪೈಪೋಟಿ ನಡೆದಿದೆ. ಇಬ್ಬರಲ್ಲಿ ಯಾರಿಗೆ ಈ ಹುದ್ದೆ ಒಲಿದರೂ ಭಾರತ ಪುರುಷ ಹಾಗೂ ಮಹಿಳಾ ತಂಡದ ಎರಡೂ ಕೋಚ್ ಹುದ್ದೆಗಳು ಕನ್ನಡಿಗರ ಪಾಲಾಗಲಿದೆ.

ಪ್ರಸ್ತುತ ಕರ್ನಾಟಕ ರಣಜಿ ತಂಡದ ಕೋಚ್ ಆಗಿ ಅನುಭವ ಹೊಂದಿರುವ ಮಾಜಿ ಬ್ಯಾಟ್ಸ್​ಮನ್ ಸನತ್ ಕುಮಾರ್ ಹಾಗೂ ಸ್ಪಿನ್ ಆಲ್​ರೌಂಡರ್ ಸುನೀಲ್ ಜೋಶಿ ನಡುವೆ ಪೈಪೋಟಿ ಏರ್ಪಟ್ಟಿದೆ. ಇದರ ನಡುವೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ವೈಯಕ್ತಿಕ ಕೋಚ್ ಆಗಿದ್ದ ಗುರು ರಾಜ್ ಕುಮಾರ್ ಶರ್ಮ ಕೂಡ ಸ್ಪರ್ಧೆಯಲ್ಲಿದ್ದಾರೆ.

ತುಷಾರ್ ಅರೋತೆ ರಾಜೀನಾಮೆ ನಂತರ ಭಾರತ ಮಹಿಳಾ ತಂಡದ ಕೋಚ್ ಗಾಗಿ ಹುಡುಕಾಟ ನಡೆದಿದ್ದು, 20 ಮಂದಿ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ 6 ಅಭ್ಯರ್ಥಿಗಳ ಪಟ್ಟಿಯನ್ನು ಪರಿಷ್ಕರಿಸಲಾಗಿದ್ದು ಅದರಲ್ಲಿ ಇಬ್ಬರು ಕನ್ನಡಿಗರು ಸ್ಥಾನ ಪಡೆದಿದ್ದಾರೆ.

ಭಾರತ ಮಹಿಳಾ ಕ್ರಿಕೆಟ್ ತಂಡದ ಕೋಚ್ ತುಷಾರ್ ಅರೋತೆ ರಿಂದ ತೆರವಾದ ಸ್ಥಾನಕ್ಕೆ ಅಭ್ಯರ್ಥಿಗಳ ಹುಡುಕಾಟ ನಡೆದಿದೆ. 20 ಆಕಾಂಕ್ಷಿಗಳ ಪಟ್ಟಿಯಲ್ಲಿ ಆರು ಜನರ ಶಾರ್ಟ್ ಲಿಸ್ಟ್ ಮಾಡಲಾಗಿದೆ. ಶುಕ್ರವಾರ ಆಕಾಂಕ್ಷಿಗಳ ಸಂದರ್ಶನ ನಡೆದಿರುವುದಾಗಿ ತಿಳಿದು ಬಂದಿದೆ.

ರಾಜ್ ಕುಮಾರ್ ಶರ್ಮಾ ದೆಹಲಿ ಕಿರಿಯರ ತಂಡದ ಕೋಚ್ ಆಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ರಾಜಕುಮಾರ್ ಭಾರತ ವನಿತೆಯರ ಕೋಚ್ ಹಾಗೂ ದೆಹಲಿ ರಣಜಿ ತಂಡದ ಕೋಚ್ ಸ್ಥಾನದ ಆಕಾಂಕ್ಷಿ.

ಇದೇ ಸೆಪ್ಟೆಂಬರ್ ನಲ್ಲಿ ಭಾರತ ಮಹಿಳಾ ತಂಡ ಶ್ರೀಲಂಕಾ ಪ್ರವಾಸ ಬೆಳೆಸಲಿದ್ದು ನೂತನ ಕೋಚ್ ಗೆ ಮೊದಲ ಸವಾಲು ಎದುರಾಗಲಿದೆ.

Next Story

RELATED STORIES