Top

ಕರುಣಾನಿಧಿ ಸಹಾಯವನ್ನ ಮರೆಯಲಿಲ್ಲ ದೊಡ್ಮನೆ.!

ಕರುಣಾನಿಧಿ ಸಹಾಯವನ್ನ ಮರೆಯಲಿಲ್ಲ ದೊಡ್ಮನೆ.!
X

ತಮಿಳುನಾಡಿನ ತಲೈವರ್ ಎಂ.ಕರುಣಾನಿಧಿ ನಿಧನಕ್ಕೆ ಇಡೀ ದಕ್ಷಿಣ ಭಾರತೀಯ ಚಿತ್ರರಂಗ ಸಂತಾಪ ಸೂಚಿಸಿದ್ದು ನಿಮ್ಗೆಲ್ಲ ಗೊತ್ತೆ ಇದೆ. ನಮ್ಮ ಕನ್ನಡನಾಡಿನ ದೊಡ್ಮನೆಗೂ ಕರುಣಾನಿಧಿ ಕುಟುಂಬಕ್ಕೂ ಹಿಂದಿನಿಂದಲೂ ಅವಿನಾಭಾವ ಸಂಬಂಧವಿದೆ. ಕರುಣಾನಿಧಿ ಮತ್ತು ಡಾ.ರಾಜ್ ಕುಟುಂಬಗಳ ಸ್ನೇಹ ಭಾಂದವ್ಯ ಆಗ ಹೇಗಿತ್ತು, ಈಗ ಹೇಗಿದೆ..? ಈ ಬಗ್ಗೆ ಒಂದು ಹಾರ್ಟ್ ಟಚ್ಚಿಂಗ್ ಸ್ಟೋರಿ ಮುಂದೆ ಓದಿ..

ತಮಿಳು ತಲೈವರ್​ರನ್ನು ನೆನೆದ ಕರುನಾಡ ರಾಜರತ್ನ..!

18 ವರ್ಷ ಹಿಂದಿನ ಕಥೆಯಿದು.. ಅಂದಿನ ನಾಲ್ಕುವರೆ ಕೋಟಿ ಕನ್ನಡಿಗರ ಮನ ವರನಟನಿಗಾಗಿ ಮರುಗುತ್ತಿತ್ತು. ಮಂದಿರ, ಮಸೀದಿ, ಚರ್ಚ್​​ಗಳಲ್ಲಿ ಅಣ್ಣವ್ರ ಬಗ್ಗೆನೇ ಪ್ರಾರ್ಥನೆ, ಅರ್ಚನೆ, ಅಭಿಷೇಕ ನಡೆದಿತ್ತು. ದಂತಚೋರ, ಕಾಡುಗಳ್ಳ ವೀರಪ್ಪನ್ನು ಕನ್ನಡಿಗರ ಕಣ್ಮಣಿಯನ್ನು ಅಪಹರಿಸಿದ್ದ ಘಟನೆಗೆ ಅರ್ಧ ದಕ್ಷಿಣ ಭಾರತ ನಡುಗಿತ್ತು. ಅಣ್ಣಾವ್ರ ಚಿಂತೆಯಲ್ಲೇ ಇಡೀ ಕರುನಾಡು ಮುಳುಗಿತ್ತು. ಆಗಿನ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಎಸ್.​ಎಂ.ಕೃಷ್ಣ ಹಾಗೂ ತಮಿಳು ನಾಡಿನ ಮುಖ್ಯಮಂತ್ರಿ ಎಂ.ಕರುಣಾನಿಧಿಯವರಿಗೆ ಸಿಎಂ ಸಿಂಹಾಸನ ಮುಳ್ಳಿನ ಕುರ್ಚಿಯಾಗಿತ್ತು..

ಅಣ್ಣಾವ್ರರಿಗಾಗಿ ಕರುಣಾನಿಧಿ ಮಾಡಿದ್ರು ಪ್ರಾರ್ಥನೆ..!

ಎಂ.ಕರುಣಾನಿಧಿ ಇಡೀ ದೊಡ್ಮನೆ ಕುಟುಂಬಕ್ಕೆ ಮತ್ತು ಕನ್ನಡ ಕುಲಾಕೋಟಿಗೆ ಭರವಸೆ ಕೊಟ್ಟಿದ್ರು.. ಹೇಗಾದ್ರು ಮಾಡಿ ಡಾ.ರಾಜ್​ರವರನ್ನು ಕರೆದುಕೊಂಡು ಬಂದೆ ಬರುತ್ತೇವೆ. ತಮಿಳುನಾಡು ಸರ್ಕಾರ ಹಗಲು ರಾತ್ರಿ ಶ್ರಮಿಸಲಿದೆ ಎಂದು ಭರವಸೆ ಕೊಟ್ಟಿದ್ರು. ಭರವಸೆಯಂತೆ ನಡೆದುಕೊಂಡ್ರು.. ಆಗಿನಿಂದ ದೊಡ್ಮನೆಗೂ, ತಮಿಳು ತಲೈವರ್ ಕರುಣಾನಿಧಿ ಕುಟುಂಬಕ್ಕೂ ಅವಿನಾಭಾವ ಸಂಬಂಧ. ಕರುಣಾನಿಧಿಯವರ ಅಗಲಿಕೆಗೆ ದೊಡ್ಮನೆ ಸಂತಾಪ ಸೂಚಿಸಿದೆ..

ಅದ್ರಲೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಒಂದು ಹೆಜ್ಜೆ ಮುಂದೆ ಹೋಗಿ, ಶೂಟಿಂಗ್-ಮೀಟಿಂಗ್​ಗೆ ರಜೆ ಹಾಕಿ, ಚೆನ್ನೈನ ಕರುಣಾನಿಧಿ ನಿವಾಸಕ್ಕೆ ಹೋಗಿ ಸಂತಾಪ ಸೂಚಿಸಿದ್ದಾರೆ. ನಿಮ್ಮ ನೋವಿನಲ್ಲಿ ನಾವು ಭಾಗಿ ಎಂದು ಸಮಧಾನ ಪಡಿಸಿ ಬಂದಿದ್ದಾರೆ.

ತಲೆತಲಾಂತರಗಳ ಸಂಬಂಧ ಹಾಗೇ ಉಳಿಸಿಕೊಂಡು ಬಂದ ದೊಡ್ಮನೆ

ದಿವಂಗತ ಕರುಣಾನಿಧಿಯವರು ಹೋರಾಟ, ರಾಜಕೀಯದಲ್ಲಿ ಎಷ್ಟು ಮುಂಚುಣಿಯಲ್ಲಿದ್ರೋ, ಅಷ್ಟೇ ಖ್ಯಾತರಾಗಿದ್ರು ಸಿನಿಮಾ ಕ್ಷೇತ್ರದಲ್ಲಿ. ಎಂಜಿಆರ್​ ಒಳಗಿನ ಹೀರೋಗೆ ಇವ್ರೇ ನುಡಿಮುತ್ತುಗಳನ್ನು ಬರೆದವರು. ಅದ್ಭುತ ಕಥೆಗಳನ್ನು ಹೆಣೆದವರು.

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗ ಸಿನಿಮಾ ಚಟುವಟಿಕೆಗಳಿಗಾಗಿ ಮದ್ರಾಸ್​ನಲ್ಲಿಯೇ ಬಿಡುಬಿಟ್ಟಿತ್ತು. ಆಗಿನಿಂದಲ್ಲೂ ಡಾ.ರಾಜ್ ಕುಟುಂಬಕ್ಕೆ ಕರುಣಾನಿಧಿ ಕುಟುಂಬದವರ ಸ್ನೇಹ ಸಂಬಂಧವಿದೆ. ಈಗ ಕರುಣಾನಿಧಿ ಅಗಲಿಕೆ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ದೊಡ್ಮನೆಯ ಪ್ರತಿನಿಧಿಯಾಗಿ ಸಂತಾಪ ಸೂಚಿಸಿದ್ದಾರೆ. ಕರುಣಾನಿಧಿ ಮಕ್ಕಳಿಗೆ ಧೈರ್ಯ ತುಂಬಿದ್ದಾರೆ. ತಲತಲಾಂತರಗಳಿಂದ ನಡೆದುಕೊಂಡು ಬಂದಿರುವ ಸ್ನೇಹ ಸಂಬಂಧವನ್ನು ಈಗ ಅವರ ಮಕ್ಕಳು ಮುಂದುವರೆಸುತ್ತಿರುವುದು ಸಂತೋಷದ ವಿಷಯ.

ಶ್ರೀಧರ್ ಶಿವಮೊಗ್ಗ, ಎಂಟರ್​​ಟೈನ್ಮೆಂಟ್ ಬ್ಯೂರೋ TV5

Next Story

RELATED STORIES