Top

ಭುಮ್ರಾ, ಭುವಿ ಫಿಟ್: ರಿಷಬ್ ಟೆಸ್ಟ್ ಗೆ ಪಾದರ್ಪಣೆ?

ಭುಮ್ರಾ, ಭುವಿ ಫಿಟ್: ರಿಷಬ್ ಟೆಸ್ಟ್ ಗೆ ಪಾದರ್ಪಣೆ?
X

ಲಂಡನ್: ಮಧ್ಯಮ ವೇಗಿಗಳಾದ ಜಸ್​ಪ್ರೀತ್ ಬುಮ್ರಾ ಮತ್ತು ಭುವನೇಶ್ವರ್ ಕುಮಾರ್ ದೈಹಿಕವಾಗಿ ಫಿಟ್ ಆಗಿದ್ದು ಇಬ್ಬರಲ್ಲಿ ಒಬ್ಬರು ಮೂರನೇ ಟೆಸ್ಟ್ ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇದೇ ವೇಳೆ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ವೈಫಲ್ಯದ ಹಿನ್ನೆಲೆಯಲ್ಲಿ ರಿಷಭ್ ಪಂತ್ ಟೆಸ್ಟ್ ಕ್ರಿಕೆಟ್​ಗೆ ಪಾದರ್ಪಣೆ ಮಾಡುವ ಅವಕಾಶ ಪಡೆಯಲಿದ್ದಾರೆ.

ಭಾರತ ತಂಡ ಈಗಾಗಲೇ ಕಳಪೆ ಬ್ಯಾಟಿಂಗ್ ನಿಂದಾಗಿ ಎರಡೂ ಟೆಸ್ಟ್ ಪಂದ್ಯಗಳನ್ನು ಸೋತಿದೆ.ನಾಟಿಂಗ್​ಹ್ಯಾಮ್​ನಲ್ಲಿ ನಡೆಯಲಿರುವ ಮೂರನೇ ಪಂದ್ಯ ಭಾರತದ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ಇಲ್ಲಿ ಎಡವಿದರೆ ಸರಣಿ ಗೆಲುವಿನ ಕನಸು ಸಂಪೂರ್ಣ ಭಗ್ನಗೊಳ್ಳಲಿದೆ.

ಎರಡೂ ಟೆಸ್ಟ್ ಸೋತಿರುವುದರಿಂದ ಬಿಸಿಸಿಐ ಕೆಂಗಣ್ಣಿಗೆ ನಾಯಕ ವಿರಾಟ್ ಕೊಹ್ಲಿ ಮತ್ತು ಕೋಚ್ ರವಿಶಾಸ್ತ್ರಿ ಗುರಿಯಾಗಿದ್ದಾರೆ. ಸತತ ಸೋಲಿಗೆ ಕಾರಣ ನೀಡುವಂತೆ ಈ ಇಬ್ಬರಿಗೆ ಬಿಸಿಸಿಐ ಸೂಚಿಸಿದೆ. ಇದರ ಬೆನ್ನಲ್ಲೇ ಕಳಪೆ ಪ್ರದರ್ಶನ ನೀಡುವ ಆಟಗಾರರಿಗೆ ಕೊಕ್ ನೀಡಿ ಇತರರಿಗೆ ಅವಕಾಶ ನೀಡುವ ಬಗ್ಗೆ ಗಂಭೀರ ಚಿಂತನೆ ನಡೆದಿದೆ.

ಕಳೆದ ತಿಂಗಳು ಐರ್ಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಕೈಬೆರೆಳಿಗೆ ಬೂಮ್ರಾ ಮಾಡಿಕೊಂಡಿದ್ದರು. ಇದರ ಪರಿಣಾಮವೆ ಬೂಮ್ರಾ ಆಂಗ್ಲರ ವಿರುದ್ಧ ಟಿ20 ಮತ್ತು ಏಕದಿನ ಸರಣಿ ಆಡಿರಲಿಲ್ಲ. ನಂತರ ಫಿಟ್ನೆಸ್‍ಸಮಸ್ಯೆಯಿಂದಾಗಿ ಎರಡು ಟೆಸ್ಟ್ ಪಂದ್ಯಗಳನ್ನ ಆಡಿರಲಲಿಲ್ಲ. ಇದೀಗ ಮೂರನೇ mಸ್ಟ್ಗೆ ಫಿಟ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.

ವೇಗಿ ಭುವನೇಶ್ವರ್ ಕುಮಾರ್ ಫಿಟ್ನೆಸ್ ಮತ್ತು ಇಂಜುರಿ ಸಮಸ್ಯೆಯಿಂದಾಗಿ ಬಳಲುತ್ತಿದ್ದಾರೆ. ಇದೀಗ ಮತ್ತೆ ಫಿಟ್ ಆಗಿದ್ದಾರೆ. ವಿಕೆಟ್ ಕೀಪರ್ ಕಮ್ ದಿನೇಶ್ ಕಾರ್ತಿಕ್ ಬ್ಯಾಟಿಂಗ್ ನಲ್ಲಿ ಸಂಪೂರ್ಣವಾಗಿ ವೈಫಲ್ಯ ಅನುಭವಿಸಿದ್ದಾರೆ. ವಿಕೆಟ್ ಕೀಪಿಂಗ್‍ನಲ್ಲೂ ಹೇಳಿಕೊಳ್ಳುವಂತ ಪರ್ಫಾಮನ್ಸ್ ನೀಡಲಿ. ಹೀಗಾಗಿ ಯುವ ಬ್ಯಾಟ್ಸ್ ಮನ್ ರಿಷಭ್ ಪಂತ್‍ಗೆ ಮಣೆ ಹಾಕುವ ಸಾಧ್ಯತೆ ತುಂಬ ಇದೆ.

Next Story

RELATED STORIES