Top

ಡಿಸೆಂಬರ್​ ಕೊನೆಗೆ ತೆರೆಮೇಲೆ ಅವನೇ ಶ್ರೀಮನ್ನಾರಾಯಣ.?

ಡಿಸೆಂಬರ್​ ಕೊನೆಗೆ ತೆರೆಮೇಲೆ ಅವನೇ ಶ್ರೀಮನ್ನಾರಾಯಣ.?
X

ಸ್ಯಾಂಡಲ್​ವುಡ್​ ಸಿಂಪಲ್​ ಸ್ಟಾರ್​ ರಕ್ಷಿತ್​ ಶೆಟ್ಟಿಯನ್ನ ತೆರೆಮೇಲೆ ನೋಡಿ ಒಂದುವರೆ ವರ್ಷಗಳೇ ಆಯ್ತು.. ಕಿರಿಕ್​ ಪಾರ್ಟಿ ಸಿನಿಮಾ ನಂತ್ರ ರಕ್ಷಿತ್​ ಮತ್ಯಾವ ಚಿತ್ರದಲ್ಲೂ ಕಾಣಿಸಿಕೊಳ್ಳಲೇ ಇಲ್ಲ.. ಆದ್ರೆ ಇದೀಗ ಅವನೇ ಶ್ರೀಮನ್ನಾರಾಯಣ ಸಿನಿಮಾ ಕೂಡ ಈ ವರ್ಷ ತೆರೆಗೆ ಬರೋದು ಡೌಟು ಅಂತಿದೆ ಗಾಂಧಿನಗರ.. ಹಾಗಾದ್ರೇ ಏನ್‌ ಸುದ್ದಿ ಅಂತ ಮುಂದೆ ಓದಿ..

ಕಿರಿಕ್​ ಪಾರ್ಟಿ ನಂತ್ರ ಪ್ರೇಕ್ಷಕರಿಗಿಲ್ಲ ಸಿಂಪಲ್ ಸ್ಟಾರ್ ದರ್ಶನ..!

ಕಿರಿಕ್​ ಪಾರ್ಟಿ ಸಕ್ಸಸ್​ ನಂತ್ರ ರಕ್ಷಿತ್​ ಶೆಟ್ಟಿ ಸಿನಿಮಾ ನಿರ್ಮಾಣದಲ್ಲೇ ಹೆಚ್ಚು ಬ್ಯುಸಿಯಾದ್ರು.. ಅದರ ಜೊತೆಜೊತೆಗೆ ಅವನೇ ಶ್ರೀಮನ್ನಾರಾಯಣ ಮತ್ತು ಚಾರ್ಲಿ 777 ಸಿನಿಮಾಗಳನ್ನ ಶುರಮಾಡಿದ್ದೇ ಆದ್ರೂ ಎರಡು ಸಿನಿಮಾಗಳ ಶೂಟಿಂಗ್​ 50 ಪರ್ಸೆಂಟ್ ಕೂಡ ಕಂಪ್ಲೀಟ್ ಆಗಿಲ್ಲ. ಹೀಗಾಗಿ ಈ ವರ್ಷ ಕೂಡ ರಕ್ಷಿತ್​ರ ಯಾವ ಸಿನಿಮಾನೂ ರಿಲೀಸ್​ ಆಗೋಲ್ಲ ಅನ್ನೋ ಮಾತುಗಳು ಕೇಳಿಬರ್ತಿವೆ.

ಅವನೇ ಶ್ರೀಮನ್ನಾರಾಯಣ ಮತ್ತು ಚಾರ್ಲೀ ಸಿನಿಮಾಗಳು ಏಕಕಾಲಕ್ಕೆ ಶೂಟಿಂಗ್ ನಡೀತಿದ್ದು. ಶ್ರೀಮನ್ನಾರಯಣ 40 ಪರ್ಸೆಂಟ್ ಮತ್ತು ಚಾರ್ಲಿ 20 ಪರ್ಸೆಂಟ್ ಶೂಟಿಂಗ್ ಕಂಪ್ಲೀಟ್ ಆಗಿದೆ. ಆದ್ರಲ್ಲೂ ಅವನೇ ಶ್ರೀಮನ್ನಾರಯಣ ಚಿತ್ರದಲ್ಲಿ ಸೆಟ್​ ವರ್ಕ್​, ಗ್ರಾಫೀಕ್ಸ್​ ವರ್ಕ್ ಹೆಚ್ಚಾಗಿದ್ದು, ಇದಕ್ಕೆಲ್ಲಾ ಬಹಳ ಸಮಯ ಹಿಡಿಯೋದ್ರಿಂದ, ಸಿನಿಮಾ ಏನಿದ್ರೂ ಮುಂದಿನ ವರ್ಷವೇ ರಿಲೀಸ್‌ ಆಗೋದು ಎಂಬ ಅನುಮಾನ ಕಾಡುತ್ತಿದೆ. ಅಷ್ಟೇ ಅಲ್ಲಾ ಈ ಹಿಂದೆ ಸ್ವತ: ರಕ್ಷಿತ್​ ಶೆಟ್ಟಿ ಕೂಡ ಈ ವರ್ಷ ಸಿನಿಮಾ ರಿಲೀಸ್​ ಆಗೋದು ಅನುಮಾನವಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಿಲೀಸ್​ಗಾಗಿ ಚಿತ್ರತಂಡದ ಪ್ಲಾನ್ ಏನು ಗೊತ್ತಾ.?

ಚಿತ್ರತಂಡದಿಂದ ಬಂದಿರೋ ಮಾಹಿತಿ ಪ್ರಕಾರ, ಈ ವರ್ಷದ ಕೊನೆಗೆ ಅಂದ್ರೆ ಡಿಸೆಂಬರ್​ ಕೊನೆಯ ವಾರದಲ್ಲಿ ಅವನೇ ಶ್ರೀಮನ್ನಾರಯಣನ ದರ್ಶನ ಸಿಗೋದು 100 ಪರ್ಸೆಂಟ್ ಕನ್ಫರ್ಮ್​ ಅಂತೆ. ಸದ್ಯ ಅವನೇ ಶ್ರೀಮನ್ನಾರಯಣ ಚಿತ್ರ 40 ಪರ್ಸೆಂಟ್ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಡೇ ಅಂಡ್ ನೈಟ್ ಶೂಟಿಂಗ್​ ಮಾಡ್ತಿದ್ದಾರೆ. ಚಿತ್ರದ ಸಂಪೂರ್ಣ ಚಿತ್ರೀಕರಣ ಮುಗಿಯೋವರೆಗೂ ಕೊಂಚವೂ ಬ್ರೇಕ್ ತೊಗೊಳ್ದೆ ಇರೋಕ್ಕೆ ಪ್ಲಾನ್​ ಮಾಡಿದ್ದಾರೆ. ಶೂಟಿಂಗ್ ಸ್ಪಾಟ್​ನಲ್ಲೇ ಆನ್​ಲೈನ್ ಎಡಿಟಿಂಗ್​ ಕೂಡ ನಡೀತಿದೆ.

ಅಷ್ಟೇ ಅಲ್ಲಾ ಡಿಸೆಂಬರ್​ಗೆ ಅವನೇ ಶ್ರೀಮನ್ನಾರಯಣ ತೆರೆಗೆ ಬರ್ಲೇಬೇಕು ಅನ್ನೋದಕ್ಕಾಗಿ ಈಗಾಗ್ಲೇ ಬೆಂಗಳೂರಿನಲ್ಲಿ ಕಂಠೀರವ ಸ್ಟುಡಿಯೋ, ಸ್ಯಾಂಡಲ್​ವುಡ್​ ಸ್ಟುಡಿಯೋ,. ಯಲಹಂಕದ ಬಳಿ ಮತ್ತೊಂದು ಹೊಸ ಸ್ಟುಡಿಯೋ ಹೈಯರ್ ಮಾಡಿದ್ದು, ಆದಷ್ಟು ಬೇಗ ಸೆಟ್​ ವರ್ಕ್ ಕಂಪ್ಲೀಟ್ ಮಾಡ್ತಿದ್ದಾರೆ. ಒಂದ್ಕಡೆ ಶೂಟಿಂಗ್​ ಮುಗಿತಿದ್ದ ಹಾಗೇ ಮತ್ತೊಂದು ಕಡೆ ಸೆಟ್ ರೆಡಿಯಿದ್ದು, ಫಟಾಫಟ್ ಅಂತ ಶೂಟಿಂಗ್ ಆಗ್ತಿದೆ.

ಇದೆಲ್ಲದಕ್ಕಿಂತ ಹೆಚ್ಚಾಗಿ ಚಿತ್ರದ ನಿರ್ದೇಶಕ ಸಚಿನ್ ಸ್ವತ: ಚಿತ್ರದ ಎಡಿಟರ್ ಆಗಿರೋದ್ರಿಂದ ಶೂಟಿಂಗ್​ ಆಗ್ತಿದ್ದ ಹಾಗೇ ಎಡಿಟಿಂಗ್​ ವರ್ಕ್ ಶುರುಮಾಡ್ತಿದ್ದಾರೆ. ಇನ್ನೊಂದ್ಕಡೆ ಚಿತ್ರತಂಡ ಗ್ರಾಫಿಕ್ಸ್​, ಡಿಐ ವರ್ಕ್​ಗೆ ಬೇರೆ ಯಾರನ್ನೋ ಕಾಯೋ ಅಗತ್ಯವೂ ಇಲ್ಲ. ಯಾಕಂದ್ರೆ ರಕ್ಷಿತ್ ಶೆಟ್ಟಿಯ ಪರಮ್ವ ಸ್ಟುಡಿಯೋದಲ್ಲೇ ಎಲ್ಲಾ ಕೆಲಸಗಳು ಸರಾಗವಾಗಿ ನಡೀತಾಯಿದೆ.

ಸದ್ಯ ಅವನೇ ಶ್ರೀಮನ್ನಾರಯಣ ಸಿನಿಮಾ ಶೂಟಿಂಗ್​ ಪ್ಲಾನ್​ ಪ್ರಕಾರ ನಡೀತಿದ್ದು, ಎಲ್ಲಾ ಕೆಲಸಗಳು ಫಾಸ್ಟಾಗಿ ನಡೀತಿದೆ. ಕೊನೆಯ ಶೆಡ್ಯೂಲ್​ ಬಿಜಾಪುರ ಬಾದಾಮಿಯಲ್ಲಿ ಪ್ಲಾನ್​ ಮಾಡಿಕೊಂಡಿದ್ದು, ಡಿಸೆಂಬರ್​ ಕೊನೆಯ ವಾರದಲ್ಲಿ ಯಾವ ಸಿನಿಮಾ ಬರ್ಲಿ, ಬರದೇ ಇರ್ಲಿ, ಅವನೇ ಶ್ರೀಮನ್ನಾರಯಣನ ದರ್ಶನವಾಗೋದಂತೂ 100 ಪರ್ಸೆಂಟ್ ಗ್ಯಾರೆಂಟಿ ಅಂತೆ. ಆ ದಿನಕ್ಕಾಗಿ ಕಾದು, ಸಿನಿಮಾ ನೋಡೋಣ.

ಅರ್ಚನಾಶರ್ಮಾ, ಎಂಟರ್​ಟೈನ್ಮೆಂಟ್​ ಬ್ಯುರೋ, ಟಿವಿ5

Next Story

RELATED STORIES