Top

2ನೇ ಟೆಸ್ಟ್​ ವೈಫಲ್ಯ: ನಂ.1 ಸ್ಥಾನ ಕಳೆದುಕೊಂಡ ಕೊಹ್ಲಿ

2ನೇ ಟೆಸ್ಟ್​ ವೈಫಲ್ಯ: ನಂ.1 ಸ್ಥಾನ ಕಳೆದುಕೊಂಡ ಕೊಹ್ಲಿ
X

ಲಾರ್ಡ್ಸ್ ನಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ವಿಫಲರಾದ ಭಾರತ ತಂಡದ ನಾಯಕ ಟೆಸ್ಟ್ ರ್ಯಾಂಕಿಂಗ್​ನಲ್ಲಿ ಅಗ್ರಸ್ಥಾನ ಕಳೆದುಕೊಂಡಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್ ಆಡದೆಯೂ ನಂ.1 ಸ್ಥಾನಕ್ಕೆ ಮರಳಿದ್ದಾರೆ.

ಭಾರತ ತಂಡ ಲಾರ್ಡ್ಸ್ ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 159 ರನ್ ಗಳ ಭಾರೀ ಅಂತರದಿಂದ ಸೋಲುಂಡಿತ್ತು. ನಾಯಕ ವಿರಾಟ್ ಕೊಹ್ಲಿ ಎರಡೂ ಇನಿಂಗ್ಸ್ ಗಳಲ್ಲಿ 23 ಹಾಗೂ 17 ರನ್ ಗಳಿಸಲಷ್ಟೇ ಶಕ್ತರಾಗಿದ್ದರು.

ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ನಂ.1 ಸ್ಥಾನ ಅಲಂಕರಿಸಿದ್ದ ವಿರಾಟ್ ಕೊಹ್ಲಿ ಕೇವಲ ಒಂದು ವಾರದ ಅಂತರದಲ್ಲಿ ನಂ.1 ಸ್ಥಾನ ಕಳೆದುಕೊಂಡಿದ್ದಾರೆ. ಈ ಮೂಲಕ ಅತ್ಯಂತ ಕಿರು ಅವಧಿಯ ಕಾಲ ನಂ.1 ಸ್ಥಾನ ಅಲಂಕರಿಸಿದಂತಾಯಿತು.

Next Story

RELATED STORIES