ಕೊಹ್ಲಿ ಮೂರನೇ ಟೆಸ್ಟ್ ಪಂದ್ಯ ಆಡೋದು ಡೌಟ್..!

ಲಂಡನ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬೆನ್ನು ನೋವಿನ ಹಿನ್ನೆಲೆಯಲ್ಲಿ ನಿನ್ನೆ ನಾಲ್ಕನೆ ದಿನದಾಟದ ಪಂದ್ಯದಲ್ಲಿ ಮೈದಾನಕ್ಕೆ ಇಳಿದಿರಲಿಲ್ಲ. ಹೀಗಾಗಿ ಮೂರನೇ ಟೆಸ್ಟ್ ಪಂದ್ಯ ಆಡ್ತಾರಾ ಅನ್ನೋ ಅನುಮಾನ ಕಾಡಿದೆ.
ನಿನ್ನೆ ನಾಲ್ಕನೆ ದಿನದಾಟದ ಪಂದ್ಯದಲ್ಲಿ ಆತಿಥೆಯ ಇಂಗ್ಲೆಂಡ್ ಬ್ಯಾಟಿಂಗ್ ಮುಂದುವರೆಸಿತು. ತಂಡದ ಎಲ್ಲ ಆಟಗಾರು ಕಣಕ್ಕಿಳಿದ್ರೆ ನಾಯಕ ಕೊಹ್ಲಿ ಮಾತ್ರ ಫೀಲ್ಡಿಂಗ್ಗೆ ಇಳಿದಿರಲಿಲ್ಲ. ಬೆನ್ನು ನೋವು ಕೊಹ್ಲಿಯನ್ನ ನಾಲ್ಕನೆ ದಿನದಾಟದ ಪಂದ್ಯದಲ್ಲಿ ಆಡಲು ಬಿಡಲಿಲ್ಲ. ಇಂಜುರಿ ಒಳಗಾಗಿರುವ ಕೊಹ್ಲಿ ನಾಟಿಗ್ಯಾಮ್ನಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯದಲ್ಲಿ ಆಡ್ತಾರಾ ಅನ್ನೋ ಅನುಮಾನ ಕಾಡಿದೆ.
ಈ ಬಗ್ಗೆ ಸ್ವತಃ ಮಾತನಾಡಿರುವ ನಾಯಕ ಕೊಹ್ಲಿ ನಾಟಿಗ್ಯಾಮ್ ಟೆಸ್ಟ್ಗೆ ಇನ್ನು ಐದು ದಿನ ಬಾಕಿ ಇದೆ. ವರ್ಕ್ಲೋಡ್ನಿಂದಾಗ ಬೆನ್ನು ನೋವು ಮತ್ತೆ ಬರುತ್ತಿದೆ. ಇನ್ನು ಐದು ದಿನಗಳಲ್ಲಿ ಫಿಟ್ ಆಗುವ ಕಾನ್ಪಿಡೆನ್ಸ್ ಇದೆ ಎಂದು ಹೇಳಿದ್ದಾರೆ. 2ನೇ ಟೆಸ್ಟ್ ನಲ್ಲಿ ಕೊಹ್ಲಿ ಮೊದಲ ಇನ್ನಿಂಗ್ಸ್ ನಲ್ಲಿ 23 ಎರಡನೇ ಇನ್ನಿಂಗ್ಸ್ ನಲ್ಲಿ 17 ರನ್ ಗಳಿಸಿದ್ರು.