Top

ಈ ಸ್ನೇಕ್‌ ಮ್ಯಾನ್‌ ಹಾವು ಕಡಿದ್ರೇ, ಪೋನ್‌ನಲ್ಲೇ ಜೀವ ಉಳಿಸ್ತಾನಂತೆ.!?

ಈ ಸ್ನೇಕ್‌ ಮ್ಯಾನ್‌ ಹಾವು ಕಡಿದ್ರೇ, ಪೋನ್‌ನಲ್ಲೇ ಜೀವ ಉಳಿಸ್ತಾನಂತೆ.!?
X

ಯಾದಗಿರಿ : ಹಾವು ವಿಷಕಾರಿ ಜೀವಿ... ಹಾವು ಕಡಿದರೆ ಜೀವ ಉಳಿಯುವುದೇ ಗ್ಯಾರೆಂಟಿ ಇರಲ್ಲ. ಆದ್ರೆ ಇಲ್ಲಿ ಒಬ್ಬ ವಕೀಲ ಇದ್ದಾರೆ. ಹಾವು ಕಡಿದರೇ, ಈ ವಕೀಲರಿಗೆ ಪೋನ್​ ಮಾಡಿದ್ರೆ ಸಾಕು. ತಕ್ಷಣದಲ್ಲಿಯೇ ಹಾವಿನ ವಿಷ ಇಳಿಸುತ್ತಾರೆ. ಅದು ಕೂಡ ಪೋನ್​ ಮುಖಾಂತರವೇ.! ಆಶ್ಚರ್ಯ ಆಗ್ತಾ ಇದೆಯಾ.? ಮುಂದೆ ಸುದ್ದಿ ಓದಿ...

ಹೌದು ವಿಷಕಾರಿ ಜತ್ತುಗಳು ಹೂಳುಗಳು ಕಚ್ಚಿದರೆ ಮನುಷ್ಯನ ಬದುಕುವುದೇ ಗ್ಯಾರಂಟ್ ಇಲ್ಲ. ಅಂತದರಲ್ಲಿ ಇಲ್ಲೊಬ್ಬ ನ್ಯಾಯವಾದಿ ಸಾವು ಕಡಿದವರನ್ನು ಬದುಕಿಸುತ್ತಾನೆ. ಇಂತಹ ಆಶ್ಚರ್ಯಕರ ಪವಾಡ ಮಾಡುತ್ತಿರುವ ವ್ಯಕ್ತಿಯೇ, ಯಾದಗಿರಿ ತಾಲ್ಲೂಕಿನ ಮುಂಡರಗಿ ಗ್ರಾಮದ ನಾಗಲಿಂಗೇಶ್ವರ ಮಠದ, ಚಂದ್ರಶೇಖರ್ ಮುತ್ಯಾ.

ಯಾದಗಿರಿಯಿಂದ ಕೇವಲ ಐದು ಕಿಮೀ ದೂರದಲ್ಲಿರುವ ಮುಂಡರಗಿ ಗ್ರಾಮದ ಹೊರ ವಲಯ ಭಾಗದಲ್ಲಿ ನಾಗಲಿಂಗೇಶ್ವರ ಮಠವಿದ್ದು ಈ ಮಠದಲ್ಲಿ ವಿದ್ಯಾವಂತ ನ್ಯಾಯವಾದಿ ಚಂದ್ರಶೇಖರ್​ ಮುತ್ಯಾ ಇದ್ದಾರೆ. ಈ ಚಂದ್ರಶೇಖರ್​ ವೃತ್ತಿಯಲ್ಲಿ ವಕೀಲರು. ಆದ್ರೆ ವೃತ್ತಿ ವಕೀಲರಾಗಿದ್ರು, ಇಂತಹ ಮೂಢ ನಂಬಿಕೆಗಳನ್ನು ಮಾಡಿ ಸಾರ್ವಜನಿಕರಿಗೆ ಮಂಗು ಬೂದಿ ಎರಚ್ಚುತ್ತಿದ್ದಾರೆ.

ಯಾವುದೇ ಸ್ಥಳದಲ್ಲಿ ಯಾವುದೇ ವ್ಯಕ್ತಿಗೆ ಹಾವು ಕಡಿದರೇ ಸಾಕು, ತಕ್ಷಣ ಇಲ್ಲಿನ ಸ್ಥಳೀಯರು ಚಂದ್ರಶೇಖರ್ ಮುತ್ಯಾನಿಗೆ ಪೋನ್‌ ಮಾಡುತ್ತಾರೆ. ಹಾವು ಕಡಿದ ವ್ಯಕ್ತಿಯ ಹೆಸರು, ಆತನ ಊರು ಹೇಳಿದರೇ ಸಾಕು, ಪೋನಿನಲ್ಲೆ ಮಂತ್ರ ಜಪಿಸಿ, ಹಾವು ಕಡಿದ ವ್ಯಕ್ತಿಯ ದೇಹದಿಂದ ವಿಷವನ್ನು ತೆಗೆಯುತ್ತಾರಂತೆ.

ಇದಷ್ಟೇ ಅಲ್ಲದೇ, ದೆವ್ವ, ಭೂತಗಳನ್ನು ಬಿಡಿಸೋದ್ರಲ್ಲೂ ಎತ್ತಿದ ಕೈ ಅಂತೆ. ಇದುವರೆಗೆ ಸುಮಾರು, ಐದು ಸಾವಿರದಕ್ಕೂ ಹೆಚ್ಚು ಹಾವು ಕಡಿದವರಿಗೆ ಪೋನ್‌ನಲ್ಲೇ ಚಿಕಿತ್ಸೆ ನೀಡಿ, ಗುಣಪಡಿಸಿದ್ದಾರಂತೆ ಅನ್ನೋದು ಈ ಭಾಗದ ಜನರ ನಂಬಿಕೆ.

ಕೆಲವರು ಇವರ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದರೇ, ಮತ್ತೆ ಕೆಲವರು ಈ ಕುರಿತು ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ. ಇಂತಹ ಆಧುನಿಕ ಕಾಲದಲ್ಲಿ ಇದು ಸಾಧ್ಯನಾ ಎಂಬ ಕುತೂಹಲವನ್ನು ಹೊರಹಾಕಿದ್ದಾರೆ. ಆದರೂ ಯಾದಗಿರಿ ತಾಲ್ಲೂಕಿನ ಮುಂಡರಗಿ ಗ್ರಾಮದು ಸುತ್ತಾ-ಮುತ್ತಾ ವಕೀಲ ಚಂದ್ರಶೇಖರಯ್ಯ ಮುತ್ಯಾ ಸಾಕ್ಷಾತ್‌ ದೇವರು. ಹಾವು ಕಡಿದವರ ಪಾಲಿಗೆ ದೈವಸ್ವರೂಪಿಯಂತೆ.

ಆದರೇ ಇದು ಎಷ್ಟು ನಿಜ ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿಯಿಂದ ಸತ್ಯ ಹೊರಬೀಳಬೇಕಿದೆ. ಅಲ್ಲದೇ ಜನಮರುಳೋ ಜಾತ್ರೆ ಮರುಳೋ ಎಂಬಂತೆ, ಇವರ ಮೂಢನಂಬಿಕೆ ಬಗ್ಗೆ ನಂಬಿಕೆ ಇಟ್ಟುಕೊಂಡಿರೋದು ಮಾತ್ರ ಸುಳ್ಳಲ್ಲ.

ಒಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಮಾತ್ರ ವಲ್ಲದೇ ಬೇರೆ ಬೇರೆ ದೇಶಗಳಿಂದ ಕೂಡಾ ಪೋನ್ ಕಾಲಗಳು ಒರುತ್ತವೆ. ಈ ಚಂದ್ರಶೇಖರ್​ ಮುತ್ಯಾ ಅಂತಲ್ಲೇ ಫೇಮಸ್​​ ಆಗಿದ್ದಾರೆ. ಯಾರಿಗೆ ಹಾವು ಕಡಿಯಲಿ ಒಂದು ಫೋನ್​ ಕಾಲ್​ ಮಾಡಿದ್ರೆ, ಜೀವ ಉಳಿಯುವ ಕಾಯಕ ಮಾಡುತ್ತಿದ್ದಾರೆ. ಇನ್ ಮುಂದೆ ಹಾವು ಕಡೆದವರನ್ನು ಬದುಕಿಸುತ್ತಾರಾ ಇಲ್ಲಾ ಪ್ರಾಣವನ್ನು ತೆಗೆಯುತ್ತಾರಾ ಅನ್ನೂದನಾ ಕಾದು ನೋಡಬೇಕಾಗಿದೆ.

ನೀವು ಒಮ್ಮೆ ಸತ್ಯವೋ ನಿಜವೋ ಅಂತ ತಿಳಿಯಲು ಚಂದ್ರಶೇಖರ್​ ಮುತ್ಯಾ - ಮೊಬೈಲ್​ ನಂಬರ್

09740655412 ಗೆ ಸಂಪರ್ಕ ಮಾಡಿ ನೋಡಿ...

ವರದಿ : ಬಾಳಗೌಡ ಪಾಟೀಲ್, ಟಿವಿ5 ಯಾದಗಿರಿ

Next Story

RELATED STORIES