Top

ಚುಡಾಯಿಸಿದ್ದಕ್ಕೆ ಮನನೊಂದು ಪ್ರತಿಭಾನ್ವಿತ ವಿದ್ಯಾರ್ಥಿನಿ ನೇಣಿಗೆ ಶರಣು

ಚುಡಾಯಿಸಿದ್ದಕ್ಕೆ ಮನನೊಂದು ಪ್ರತಿಭಾನ್ವಿತ ವಿದ್ಯಾರ್ಥಿನಿ ನೇಣಿಗೆ ಶರಣು
X

ಕೋಲಾರ : ಪಿಯುಸಿ ನಂತ್ರ ಎಂಬಿಬಿಎಸ್ ಮಾಡಿ ಡಾಕ್ಟರ್ ಆಗಬೇಕೆಂಬ ಮಹದಾಸೆ ಹೊಂದಿದ್ದ ಬಾಲಕಿ ನೇಣಿಗೆ ಕೊರಳೊಡ್ಡಿದ್ದಾಳೆ, ಮನೆ, ಕಾಲೇಜು ಎಲ್ಲೆಂದರಲ್ಲಿ ರ್ಯಾಗಿಂಗ್ ಮಾಡ್ತಿದ್ದ ಪುಂಡರ ಕಾಟ ತಾಳಲಾರದೆ ರ್ಯಾಗಿಂಗ್ ಭೂತಕ್ಕೆ ವಿದ್ಯಾರ್ಥಿನಿ ಬಲಿಯಾಗಿದ್ದಾಳೆ.

ಈ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್‌ ಪಟ್ಟಣದ ಇಟಿ ಬ್ಲಾಕ್‌ ಬಡಾವಣೆಯಲ್ಲಿ ನಡೆದಿದೆ. ಇಟಿ ಬ್ಲಾಕ್ ನಿವಾಸಿಯಾದ ಸುಮಿತ ಅವ್ರ 17 ವರ್ಷದ ಮಗಳು ಕಳೆದ ರಾತ್ರಿ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿಯಾಗಿದ್ದಾರೆ.

ಆತ್ಮಹತ್ಯೆಗೆ ಶರಣಾದ ಸುಮಿತ್ರಗೆ, ಇಟಿ ಬ್ಲಾಕ್ ಬಡಾವಣೆಯಲ್ಲಿಯೇ ಕೆಲ ಪುಂಡರು ನಿತ್ಯ Raging ಮಾಡ್ತಿದ್ದರಂತೆ. ಕಳೆದ ನಿನ್ನೆ ಬೆಳಗ್ಗೆ ಕೂಡ ಬಡಾವಣೆಯ ಜೋಸೆಪ್ ಹಾಗು ನಾಲ್ವರು ಮೃತಳನ್ನ ಚುಡಾಯಿಸಿದ್ದಾರೆ. ಇದಕ್ಕೆ ಮನನೊಂದ ವಿದ್ಯಾರ್ಥಿನಿ ಮನೆಗೆ ಬಂದು ನೇಣಿ ಶರಣಾಗಿದ್ದಾಳೆ.

ಮೃತ 17 ವರ್ಷದ ಪಿಯುಸಿ ವಿದ್ಯಾರ್ಥಿನಿ, ಬಂಗಾರಪೇಟೆ ಎಸ್‌ಡಿಸಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಳು. ಹಾಗೆ ಮುಂದೆ ಡಾಕ್ಟರ್ ಆಗೋ ಕನಸನ್ನೂ ಹೊತ್ತಿದ್ದಳು. ಎಸ್ಎಸ್ಎಲ್‌ಸಿಯಲ್ಲಿ ಶಾಲೆಗೆ ಟಾಪರ್ ಆಗಿದ್ದ ಬಾಲಕಿ, ಪಿಯುಸಿಯಲ್ಲೂ ಕಾಲೇಜಿನಲ್ಲಿ ಒಳ್ಳೆ ಹೆಸ್ರನ್ನ ಗಳಿಸಿದ್ದಳು.

ನಿನ್ನೆ ಭಾನುವಾರ ಸ್ಪೆಷಲ್ ಕ್ಲಾಸ್ ಮುಗಿಸಿ ಸಂಜೆ ಮನೆಗೆ ವಾಪಾಸಾಗ್ತಿದ್ದ ವೇಳೆ ಸ್ತಳೀಯ ನಿವಾಸಿಗಳು ರೇಗಿಸಿದ್ದಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಪೋಷಕರು ಆರೋಪಿಸಿದ್ದಾರೆ. ಸಾವು ವಿಚಾರ ತಿಳಿದು ಬಂಗಾರಪೇಟೆ ಎಸ್‌ಡಿಸಿ ಕಾಲೇಜಿನ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಆಗಮಿಸಿ ಅಂತಿಮ ದರ್ಶನ ಪಡೆದರು. ಕಾಲೇಜಿನಲ್ಲೇ ಟಾಪರ್ ಆಗಿದ್ದ ಸಹ ವಿದ್ಯಾರ್ಥಿನಿ ಹೀಗೆ ನೇಣಿಗೆ ಶರಣಾಗಿದ್ದಕ್ಕೆ ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದರು. ಅಲ್ಲದೇ ಈ ಸಂಬಂಧಿಕರು ರ್ಯಾಗಿಂಗ್ ನಡೆಸಿದ ದುಷ್ಕರ್ಮಿಗಳನ್ನು ಬಂದಿಸುವಂತೆ ಆಗ್ರಹಿಸಿದ್ದಾರೆ.

ಈ ಘಟನಾ ಸಂಬಂದ ಕೆಜಿಎಫ್‌ನ ಚಾಂಪಿಯನ್ ರೀಪ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ಜೋಸೆಪ್ ಹಾಗು ಕೆಲವ್ರನ್ನ ಪೊಲೀಸರು ಬಂದಿಸಿ ವಿಚಾರಣೆ ನಡೆಸುತ್ತಿದ್ದಾರೆ. ಆದ್ರೆ ಡಾಕ್ಟರ್ ಕನಸು ಹೊಂದಿದ್ದ 17 ವರ್ಷದ ಬಾಲಕಿ ಜೀವನ ಹೀಗೆ ಅರ್ಧಕ್ಕೆ ಅಂತ್ಯವಾಗಿದ್ದು ಮಾತ್ರ ದುರಂತವೇ ಸರಿ.

ವರದಿ : ಗಂಗಾಪುರ ಕುಮಾರ್, ಟಿವಿ5 ಕೋಲಾರ

Next Story

RELATED STORIES