Top

'ಇಂದು ನಾನೇ ಎಂಪಿ, ಮುಂದೆಯೂ ನಾನೇ ಎಂಪಿ'

ಇಂದು ನಾನೇ ಎಂಪಿ, ಮುಂದೆಯೂ ನಾನೇ ಎಂಪಿ
X

ಮೈಸೂರು: ಇಂದು ನಾನೇ ಎಂಪಿ, ಮುಂದೆಯೂ ನಾನೇ ಎಂಪಿ ಎಂದು ಮುಂದಿನ ಚುನಾವಣೆ ಬಗ್ಗೆ ಮೈಸೂರಿನಲ್ಲಿ ಪ್ರತಾಪ್ ಸಿಂಹ ಸ್ವಯಂ ಘೋಷಣೆ ಮಾಡಿದ್ದಾರೆ.

ಮುಂದಿನ ಬಾರಿಯೂ ನಾನೇ ಬಿಜೆಪಿ ಅಭ್ಯರ್ಥಿ. ಮಹಾರಾಜರು ಚುನಾವಣೆಗೆ ಬರ್ತಾರೆ ಎಂದು ಕೆಲ ಪತ್ರಿಕೆಯಲ್ಲಿ ಬಂದಿದೆ. ನಾನೇ ಸ್ವತಃ ಯದುವೀರ್ ಬಳಿ ಮಾತಾಡಿದ್ದೇನೆ. ಅವರಿಗೆ ಚುನಾವಣೆಯಲ್ಲಿ ಸ್ಪರ್ಧೆ ಇಷ್ಟ ಇಲ್ಲ ಎಂದಿದ್ದಾರೆ. ಆದರೂ ಯಾಕೆ ಪದೇಪದೇ ಹೀಗೆ ಮಾಡುತ್ತಿದ್ದಾರೆ ಗೊತ್ತಿಲ್ಲ ಎಂದಿದ್ದಾರೆ.

ಅಲ್ಲದೇ ಈ ಬಾರಿ ಲೋಕಸಭೆಗೆ ಟಿಕೆಟ್ ನೀಡುವುದಿಲ್ಲ ಎಂಬ ವಿಚಾರಕ್ಕೆ ಪ್ರತಾಪ್ ಸಿಂಹ ಸ್ಪಷ್ಟನೆ ನೀಡಿದ್ದು, ಮೈಸೂರು ಅಭಿವೃದ್ಧಿಗೆ ನಾನೂ ಸಾಕಷ್ಟು ಕೆಲಸ ಮಾಡಿದ್ದೇನೆ. ಮೈಸೂರು ಕೊಡಗಿನ ಜನ ನನ್ನ ಜೊತೆ ಇರುವ ವರೆಗೆ ನನ್ನ ಟಿಕೆಟ್ ತಪ್ಪಿಸಲು ಯಾರಿಂದಲು ಸಾಧ್ಯವಿಲ್ಲ. ಪ್ರಧಾನಿ ಮೋದಿ, ಅಮಿತ್ ಶಾ, ಯಡಿಯೂರಪ್ಪನವರು ನನ್ನ ಜೊತೆ ಇದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.

Next Story

RELATED STORIES