Top

ಸದ್ಯದಲ್ಲೇ ದುಬಾರಿಯಾಗಲಿದೆ KSRTC ಬಸ್ ಟಿಕೆಟ್ ದರ..!?

ಬೆಂಗಳೂರು : ಸರ್ಕಾರಿ ಬಸ್ ನಲ್ಲಿ ಸಂಚಾರ ಮಾಡುತ್ತಿರುವ ಪ್ರಯಾಣಿಕರಿಗೆ ಶೀಘ್ರದಲ್ಲೇ ಶಾಕಿಂಗ್ ಕಾದಿದೆ. ಹೌದು ನಷ್ಟದ ನೆಪವೊಡ್ಡಿ ಕೆಎಸ್ ಆರ್ ಟಿಸಿ ಟಿಕೆಟ್ ದರ ಏರಿಕೆ ಮಾಡಲು ತುದಿಗಾಲಿನ ಮೇಲೆ ನಿಂತಿದೆ. ಈ ಸಂಬಂಧ ಸರ್ಕಾರ ಮೇಲೆ ಮೇಲೆ ಒತ್ತಡ ಏರಿದ್ದು, ದರ ಹೆಚ್ಚಳ ಮಾಡಿಲ್ಲ ಅಂದರೆ ನಿಗಮ ಉಳಿಯೋದಿಲ್ಲ ಅಂತ ಮನವರಿಕೆ ಕೊಟ್ಟಿದೆ. ಡಿಸೇಲ್ ಬೆಲೆ ಸೇರಿದಂತೆ ಇನ್ನಿತರ ಸಮಸ್ಯೆಗಳಿಂದ ಟಿಕೆಟ್ ದರ ಹೆಚ್ಚಳ ಮಾಡಲೇಬೇಕೆಂದು ನಿಗಮ ವ್ಯವಸ್ಥಾಪಕರು ಬಿಗಿ ಪಟ್ಟು ಹಿಡಿದಿದ್ದಾರೆ.

ಸದಾ ನಷ್ಟದಲ್ಲಿ ತೇಲುತ್ತಿರೊ ಕೆಎಸ್ ಆರ್ ಟಿಸಿ ನಿಗಮ ಇದೀಗ ಲಾಭಗಳಿಸಲು ಬದಲೀಮಾರ್ಗಕ್ಕೆ ಕೈ ಹಾಕಿದೆ. ಹೌದು ಕೆಎಸ್ ಆರ್ ಟಿಸಿ ಬಸ್ ಟಿಕೆಟ್ ದರದಲ್ಲಿ ಶೇಕಡ 15ರಷ್ಟು ಹೆಚ್ಚಿಸಲು ತೀರ್ಮಾನಿಸಲಾಗಿದೆ. ಈ ಸಂಬಂಧ ನಿಗಮದ ಆಡಳಿತ ಮಂಡಳಿಯಲ್ಲಿ ಚರ್ಚೆ ನಡೆದಿದೆ. ಆಡಳಿತ ಮಂಡಳಿ ಒಪ್ಪಿಗೆ ಸೂಚಿಸಿದ್ದು, ಸರ್ಕಾರಕ್ಕೆ ದರ ಹೆಚ್ಚಳ ಮಾಡುವಂತೆ ಪ್ರಸ್ತಾವನೆ ಕಳಿಸಲಾಗಿದೆ. ಆದರೆ ಸರ್ಕಾರ ಇಲ್ಲಿಯವರಿಗೆ ಪ್ರತಿಕ್ರಿಯೆ ನೀಡದೆ ಇರೋದು ನಿಗಮ ದಿನೇ ದಿನೇ ನಷ್ಟದತ್ತ ಸಾಗುತ್ತಿದೆ.

ಈ ಕುರಿತು ಟಿವಿ5ಗೆ ಪ್ರತಿಕ್ರಿಯಿಸಿರುವ ಕೆಎಸ್‌ಆರ್‌ಟಿಸಿ ಎಂಡಿ, ಉಮಾಶಂಕರ್, ಕೆಎಸ್ ಆರ್ ಟಿಸಿ ಬಸ್ ಟಿಕೆಟ್ ದರ ಹೈಕ್ ಮಾಡಬೇಕಾದ ಅವಶ್ಯಕತೆ ಬಹಳಾ ಇದೆ. ಕಳೆದ 5ವರ್ಷಗಳಿಂದ ನಿಗಮದ ಟಿಕೆಟ್ ದರದಲ್ಲಿ ಹೆಚ್ಚಳ ಮಾಡಿಲ್ಲ. ಇದರಿಂದ ನಿಗಮಕ್ಕೆ ಸಾಕಷ್ಟು ನಷ್ಟ ಅನುಭವಿಸುತ್ತಿದೆ, ಜೊತೆಗೆ ಪ್ರಯಾಣಿಕರ ಹಿತ ದೃಷ್ಟಿಕೋನ ಇಟ್ಟುಕೊಂಡು ದರ ಹೆಚ್ಚಿಸಲು ತೀರ್ಮಾನ ಮಾಡಲಾಗಿದೆ. ಈ ಬಗ್ಗೆ ಸರ್ಕಾರದಿಂದ ಯಾವುದೇ ತೀರ್ಮಾನ ಬಾರದ ಕಾರಣ ದರ ಏರಿಕೆ ಮಾಡಲಿಲ್ಲ ಎನ್ನುತ್ತಾರೆ.

ಇನ್ನು ರಾಜ್ಯದಲ್ಲಿ ಸಮಿಶ್ರ ಸರ್ಕಾರ ರಚನೆಯಾಗುತ್ತಿದ್ದಂತೆ ಬಸ್ ಟಿಕೆಟ್ ದರ ಹೆಚ್ಚಿಸಬಾರದು ಎಂದಿದ್ದ ಸಾರಿಗೆ ಸಚಿವರ ಇದೀಗ ಕೆಎಸ್ ಆರ್ ಟಿಸಿ ಪ್ರಸ್ಥಾವನೆ ಅಕ್ಸೆಪ್ಟ್ ಮಾಡಿದ್ದಾರೆ..ಲಾಸ್ ನಲ್ಲಿ ಈಜಾಟ ಮಾಡ್ತಿರೋ ನಿಗಮ, ಹಾಗು ಪ್ರಯಾಣಿಕರಿಗೂ ಒತ್ತಡ ಇರಬಾರದು ಎಂಬ ದೃಷ್ಟಿಕೋನದಲ್ಲಿ ಶೇಕಡ 15ರಷ್ಟು ಟಿಕೆಟ್ ದರ ಹೆಚ್ಚಳಕ್ಕೆ ಒಪ್ಪಿಗೆ ಸೂಚಿಸಿದ್ದು, ಮುಖ್ಯಮಂತ್ರಿ ಗ್ರೀನ್ ಸಿಗ್ನಲ್ ಗೆ ನಿಗಮ ಕಾದುಕುಳಿತಿದೆ.

ಟಿಕೆಟ್ ದರ ಹೆಚ್ಚಳಕ್ಕೆ ಕಾದುಕುಳಿತಿರೋ ನಿಗಮ ಸಧ್ಯದಲ್ಲೆ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಲಿದೆ. ಇದರಿಂದ ಪ್ರಯಾಣಿಕರಿಂದ ಯಾವ ರೀತಿ ರೆಸ್ಪಾನ್ಸ್ ಸಿಗುತ್ತೆ ಅನ್ನೋದೆ ದೊಡ್ಡ ಪ್ರಶ್ನೆಯಾಗಿದೆ.

ವರದಿ : ಕೃಷ್ಣಮೂರ್ತಿ, ಟಿವಿ5 ಬೆಂಗಳೂರು

Next Story

RELATED STORIES