Top

ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಹೀನಾಯ ಸೋಲು

ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಹೀನಾಯ ಸೋಲು
X

ಭಾರತ ತಂಡ ಲಾರ್ಡ್ಸ್ ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಹಾಗೂ 159 ರನ್ ಗಳ ಭಾರೀ ಅಂತರದಿಂದ ಸೋಲನುಭವಿಸಿದೆ. ಇದರೊಂದಿಗೆ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ 2-0ಯಿಂದ ಮುನ್ನಡೆ ಸಾಧಿಸಿದೆ.

ಪಂದ್ಯದ ನಾಲ್ಕನೇ ದಿನವಾದ ಭಾನುವಾರ 6 ವಿಕೆಟ್ ಗೆ 357 ರನ್ ಗಳಿಂದ ಎರಡನೇ ಇನ್ನಿಂಗ್ಸ್ ಮುಂದುವರಿಸಿದ ಇಂಗ್ಲೆಂಡ್ 7 ವಿಕೆಟ್ ಗೆ 396 ರನ್ ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿತು. ಇದರೊಂದಿಗೆ ಮೊದಲ ಇನ್ನಿಂಗ್ಸ್‌ನಲ್ಲಿ 289 ರನ್ ಗಳ ಬೃಹತ್ ಹಿನ್ನಡೆಗೆ ಒಳಗಾಯಿತು.

ತಲಾ 4 ವಿಕೆಟ್ ಪಡೆದ ಮಧ್ಯಮ ವೇಗಿಗಳಾದ ಜೇಮ್ಸ್ ಆ್ಯಂಡರ್ಸನ್ ಮತ್ತು ಸ್ಟುವರ್ಟ್ ಬ್ರಾಡ್ ಮಾರಕ ದಾಳಿಗೆ ತತ್ತರಿಸಿದ ಭಾರತದ ಬ್ಯಾಟ್ಸ್ ಮನ್ ಗಳು 130 ರನ್ ಗೆ ಗಂಟುಮೂಟೆ ಕಟ್ಟಿದರು.

ಭಾರತದ ಪರ ಯಾವೊಬ್ಬ ಬ್ಯಾಟ್ಸ್ ಮನ್ ನೆಲಕಚ್ಚಿ ಆಡಲಿಲ್ಲ. ಚೇತೇಶ್ವರ್ ಪೂಜಾರ 100 ಎಸೆತ ಎದುರಿಸಿದರೂ ಗಳಿಸಿದ್ದು 16 ರನ್ ಮಾತ್ರ. ಒಂದು ಹಂತದಲ್ಲಿ ಭಾರತ 61 ರನ್ ಗೆ 6 ವಿಕೆಟ್ ಕಳೆದುಕೊಂಡು ನೂರರ ಗಡಿ ದಾಟುವುದೂ ಕಷ್ಟವಾಗಿತ್ತು.

7ನೇ ವಿಕೆಟ್ ಗೆ ಅಶ್ವಿನ್ ಮತ್ತು ಹಾರ್ದಿಕ್ ಪಾಂಡ್ಯ 55 ರನ್ ಜೊತೆಯಾಟ ನಿಭಾಯಿಸಿ ತಂಡವನ್ನು ನೂರರ ಗಡಿ ದಾಟಿಸಿದರು. ಆರ್. ಅಶ್ವಿನ್ 90 ಎಸೆತಗಳಲ್ಲಿ 5 ಬೌಂಡರಿ ಸೇರಿದ 33 ರನ್ ಬಾರಿಸಿ ತಂಡದ ಪರ ವೈಯಕ್ತಿಕ ಗರಿಷ್ಠ ರನ್ ಬಾರಿಸಿದರು. ಹಾರ್ದಿಕ್ ಪಾಂಡ್ಯ 86 ಎಸೆತಗಳಲ್ಲಿ 5 ಬೌಂಡರಿ ಒಳಗೊಂಡ 26 ರನ್ ಗಳಿಸಿದರು.

ಸಂಕ್ಷಿಪ್ತ ಸ್ಕೋರ್

ಭಾರತ ಮೊದಲ ಇನಿಂಗ್ಸ್ 107 ಮತ್ತು 2ನೇ ಇನಿಂಗ್ಸ್ 47 ಓವರ್ 130 (ಅಶ್ವಿನ್ 33, ಹಾರ್ದಿಕ್ 26, ಕೊಹ್ಲಿ 17, ಪೂಜಾರ 17, ಆ್ಯಂಡರ್ಸನ್ 23/4, ಬ್ರಾಡ್ 44/4).

ಇಂಗ್ಲೆಂಡ್ ಮೊದಲ ಇನಿಂಗ್ಸ್ 7 ವಿಕೆಟ್ ಗೆ 396 ಡಿಕ್ಲೇರ್ (ವೋಕ್ಸ್ ಅಜೇಯ 137, ಕುರಾನ್ 40).

ಪಂದ್ಯಶ್ರೇಷ್ಠ: ಕ್ರಿಸ್ ವೋಕ್ಸ್

Next Story

RELATED STORIES