Top

ಸಖರಾಯಪಟ್ಟಣದ ಬಳಿಯ ಐತಿಹಾಸಿಕ ಅಯ್ಯನ ಕೆರೆ ಭರ್ತಿ

ಸಖರಾಯಪಟ್ಟಣದ ಬಳಿಯ ಐತಿಹಾಸಿಕ ಅಯ್ಯನ ಕೆರೆ ಭರ್ತಿ
X

ಚಿಕ್ಕಮಗಳೂರು : ಕಳೆದ ಮೂರು ವರ್ಷಗಳಿಂದ ತೀರ್ವ ಬರಗಾಲಕ್ಕೆ ತುತ್ತಾಗಿದ್ದ ಕಡೂರು ತಾಲೂಕಿನ ಐತಿಹಾಸಿಕ ಅಯ್ಯನ ಕೆರೆ ಉತ್ತಮ ಮಳೆಯಿಂದಾಗಿ ಸಂಪೂರ್ಣ ಭರ್ತಿಯಾಗಿದೆ.

ಕಡೂರು ತಾಲೂಕಿನ ಸಖರಾಯ ಪಟ್ಟಣದ ಸಮೀಪವಿರುವ ಅಯ್ಯನಕೆರೆ ಸುಮಾರು 2500 ಎಕರೆ ವಿಸ್ತೀರ್ಣವುಳ್ಳ ಕೆರೆಯ ಸಂಪೂರ್ಣ ಭರ್ತಿಯಾಗಿರೋದ್ರಿಂದ ಬಯಲುಸೀಮೆ ಭಾಗದ ರೈತರ ಮೊಗದಲ್ಲಿ ಸಂತಸ ಮೂಡಿದೆ.

ಕಳೆದ ಮೂರು ವರ್ಷಗಳಿಂದ ಮಳೆಯಿಲ್ಲದೆ ಸೊರಗಿದ್ದ ಕೆರೆ ಸಂಪೂರ್ಣವಾಗಿ ಖಾಲಿಯಾಗುವ ಹಂತ ತಲುಪಿತ್ತು. ಈ ವೇಳೆ ಗ್ರಾಮ-ಗ್ರಾಮಗಳ ನಡುವೆ ನೀರಿಗಾಗಿ ಹೊಡೆದಾಟ ನಡೆದು, ಲಾಟಿ ಚಾರ್ಜ್​ ಕೂಡಾ ನಡೆದು ಹಲವರು ಗಾಯಗೊಂಡು ಪರಿಸ್ಥಿತಿ ಉದ್ವಿಘ್ನವಾಗಿತ್ತು.

ಆದ್ರೆ ಈ ಭಾರೀ ಗಿರಿಶೃಂಗದಲ್ಲಿ ಅಧಿಕ ಮಳೆಯಿಂದಾಗಿ ಕೆರೆ ತುಂಬಿದೆ. ಈ ಮೂಲಕ ರೈತರ ಮೊಗದಲ್ಲಿ ನಗೆಯನ್ನು ಬೀರಿಸಿದೆ. ಜೊತೆಗೆ ಈ ಭಾಗದ ರೈತರಲ್ಲಿ ಇನ್ನಿಲ್ಲದ ಸಂತಸ ಮನೆ ಮಾಡಿದೆ.

ಅಯ್ಯನ ಕೆರೆ ಇತಿಹಾಸ

ಸಖರಾಯಪಟ್ಟಣದಿಂದ ನಾಲ್ಕು ಕಿ.ಮೀ, ದೂರದಲ್ಲಿರುವ ಅಯ್ಯನಕೆರೆ ರಾಜ್ಯದಲ್ಲಿಯೇ ಎರಡನೇ ದೊಡ್ಡ ಕೆರೆ ಎಂಬ ಹೆಗ್ಗಳಿಕೆ ಹೊಂದಿದೆ.

12ನೇ ಶತಮಾನದಲ್ಲಿ ರಾಜಾ ರುಕ್ಮಾಂಗದ ರಾಯ ಎಂಬ ಅರಸ ರೈತರು ಮಳೆಯಿಲ್ಲದ ಸಮಯದಲ್ಲೂ ಬೆಳೆ ಬೆಳೆಯಲು ಅನುಕೂಲವಾಗುವಂತೆ ಈ ಕೆರೆ ನಿರ್ವಿುಸಿದ್ದ ಎಂಬುದಾಗಿ ಇತಿಹಾಸದಿಂದ ತಿಳಿದು ಬರುತ್ತದೆ.

ರುಕ್ಮಾಂಗದ ರಾಯನ ನಂತ್ರ ಈ ಪ್ರದೇಶವನ್ನು ಹೊಯ್ಸಳರು, ಮೈಸೂರು ಅರಸು ಆಳಿದರು. ಈ ವೇಳೆ ಕೆರೆ ಅಭಿವೃದ್ಧಿಪಡಿಸಿದರು. ಹೀಗಾಗಿ ಅಯ್ಯನ ಕೆರೆ, ಐತಿಹಾಸಿಕ ಪ್ರಸಿದ್ದಿಯನ್ನು ತನ್ನೊಟ್ಟಿಗೆ ಬೆಳಿಸಿಕೊಂಡಿದೆ.

Next Story

RELATED STORIES