Top

ರಫೆಲ್ ಡೀಲ್ ಬಗ್ಗೆ ಚರ್ಚೆಗೆ ಬನ್ನಿ: ಮೋದಿಗೆ ರಾಹುಲ್ ಸವಾಲು

ರಫೆಲ್ ಡೀಲ್ ಬಗ್ಗೆ ಚರ್ಚೆಗೆ ಬನ್ನಿ: ಮೋದಿಗೆ ರಾಹುಲ್ ಸವಾಲು
X

ರಫೆಲ್ ಯುದ್ಧ ವಿಮಾನ ಖರೀದಿ ಕುರಿತು ಯಾವುದೇ ಸಭೆಯಲ್ಲಿ ಚರ್ಚೆಗೆ ಸಿದ್ಧ. ಕಳ್ಳತನ ಮಾಡಿದವರಿಗೆ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಸಾಧ್ಯವಿಲ್ಲ. ಅದೇ ರೀತಿ ಪ್ರಧಾನಿ ಮೋದಿ ಅವರಿಗೆ ನನ್ನ ಕಣ್ಣಿನಲ್ಲಿ ಕಣ್ಣು ಇಟ್ಟು ನೋಡುವ ಧೈರ್ಯ ಇಲ್ಲ. ನೀವೇ ನನ್ನ ಮುಂದೆ ತಂದು ನಿಲ್ಲಿಸಿ ಎಂದು ಬಿಜೆಪಿ ಮುಖಂಡರಿಗೆ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಸವಾಲು ಹಾಕಿದ್ದಾರೆ.

ಬೀದರ್​ ನಲ್ಲಿ ಹಮ್ಮಿಕೊಂಡಿದ್ದ ಜನಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಯುದ್ಧ ವಿಮಾನದ ನಿಜವಾದ ಬೆಲೆಯನ್ನು ಮೋದಿ ಬಹಿರಂಗಪಡಿಸಲಿ. ಫ್ರಾನ್ಸ್ ರಾಷ್ಟ್ರಪತಿ ಅವರಲ್ಲೇ ನಾನು ಈ ಬಗ್ಗೆ ಮಾಹಿತಿ ಕೇಳಿದ್ದೇನೆ. ಶೀಘ್ರದಲ್ಲೇ ಎಲ್ಲವನ್ನೂ ಜನರ ಮುಂದಿಡುತ್ತೇನೆ ಎಂದು ಹೇಳಿದರು.

ರಫೆಲ್ ಒಪ್ಪಂದದ ಬಗ್ಗೆ ನಾವು ಮಾಡಿದ ಆರೋಪಗಳ ಬಗ್ಗೆ ಮೋದಿ ಸಂಸತ್​ನಲ್ಲಿ ಉತ್ತರಿಸಲಿಲ್ಲ. ದೇಶದ ಚೌಕಿದಾರ ಎಂದು ಹೇಳಿಕೊಳ್ಳುವ ಮೋದಿ ಭ್ರಷ್ಟಾಚಾರದಲ್ಲಿ ಭಾಗಿದಾರ ಆಗಿದ್ದಾರೆ.

Next Story

RELATED STORIES