ಬೆಂಗಳೂರಿನ 3 ಲೋಕಸಭಾ ಕ್ಷೇತ್ರಗಳ ಮೇಲೆ ಕಾಂಗ್ರೆಸ್ ಕಣ್ಣು

ಬೆಂಗಳೂರು : ಮುಂಬರುವ ಲೋಕಸಭಾ ಚುನಾವಣೆಗೆ ರಾಜಕೀಯ ಪಕ್ಷಗಳಲ್ಲಿ ಚುನಾವಣಾ ರಂಗು ಗರಿಗೆದರಿದೆ. ಕಾಂಗ್ರೆಸ್ ಬೆಂಗಳೂರಿನ 3 ಲೋಕಸಭಾ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದೆ. ಈ ಕ್ಷೇತ್ರಗಳಲ್ಲಿ ಗೆಲುವಿಗಾಗಿ ಮಾಸ್ಟರ್ ಫ್ಲಾನ್ ಸಿದ್ದಪಡಿಸಿದೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರಿನ ಮೂರು ಕ್ಷೇತ್ರಗಳಲ್ಲಿ ಶತಾಯಗತಾಯ ಗೆಲ್ಲಲೇ ಬೇಕು ಎಂಬ ಜಿದ್ದಿಗೆ ಬಿದ್ದಂತಿರುವ ಕಾಂಗ್ರೆಸ್ ಇದೀಗ ಆ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸುತ್ತಿದೆ.
ಬೆಂಗಳೂರಿನ 3 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವನ್ನು ಸಾಧಿಸುವ ಸಲುವಾಗಿ, ಹೆಸರುವಾಸಿ ವ್ಯಕ್ತಿಗಳನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದೆ. ಅಲ್ಲದೇ ಇದೇ ಹಿನ್ನಲೆಯಲ್ಲಿ ಅಂತಹ ವ್ಯಕ್ತಿಗಳ ಹುಡುಕಾಟದಲ್ಲೂ ತೊಡಗಿದೆ.
ಈ ನಿಟ್ಟಿನಲ್ಲಿ ಸಕ್ರೀಯವಾಗಿರುವ ಕಾಂಗ್ರೆಸ್ ಮುಖಂಡರು, ಚಿತ್ರನಟಿ ಮಾಜಿ ಸಂಸದೆ ರಮ್ಯ, ಮಾಜಿ ಶಾಸಕ ಪ್ರಿಯಾಕೃಷ್ಣ, ನಿವೃತ್ತ ಪೊಲೀಸ್ ಅಧಿಕಾರಿಗ ಸಾಂಗ್ಲಿಯಾನಾ ನಿಲ್ಲಿಸುವ ಚಿಂತನೆಯಲ್ಲಿದೆಯಂತೆ.
ಇದೀಗ ಈ ಮೂವರ ಹೆಸರು ಬೆಂಗಳೂರಿನ 3 ಲೋಕಸಭಾ ಕ್ಷೇತ್ರಗಳಲ್ಲಿ ನಿಲ್ಲುವ ಅಭ್ಯರ್ಥಿಗಳ ಮುಂಚೂಣಿ ಸಾಲಿನಲ್ಲಿವೆ. ಈ ಮೂಲಕ ಹೆಸರುವಾಸಿ ವ್ಯಕ್ತಿಗಳನ್ನೇ ರಾಜಧಾನಿ ಲೋಕಸಭಾ ಕ್ಷೇತ್ರಗಳಲ್ಲಿ ನಿಲ್ಲಿಸಲು ಮುಂದಾಗಿದೆಯಂತೆ.
ಬೆಂಗಳೂರಿನ 3 ಲೋಕಸಭಾ ಕ್ಷೇತ್ರಗಳ ಕಾಂಗ್ರೆಸ್ ಸಂಭವನೀಯ ಅಭ್ಯರ್ಥಿಗಳ ಪಟ್ಟಿ
- ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ನಟಿ ರಮ್ಯ
- ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಪ್ರಿಯಾಕೃಷ್ಣ
- ಕೇಂದ್ರ ಲೋಕಸಭಾ ಕ್ಷೇತ್ರಕ್ಕೆ ಎಚ್ ಟಿ ಸಾಂಗ್ಲಿಯಾನಾ
ಹೀಗೆ ಈ ಹೆಸರು ಮುಂಚೂಣಿಯಲ್ಲಿವೆ. ಈ ಮೂಲಕ ಹೆಸರುವಾಸಿ ವ್ಯಕ್ತಿಗಳನ್ನು ಕಣಕ್ಕಿಳಿಸಲು ಕಾಂಗ್ರೆಸ್ ಮುಂದಾಗಿದೆ.
ಈ ಅಭ್ಯರ್ಥಿಗಳಲ್ಲಿ ಜಾತಿ ಮತ್ತು ವರ್ಚಸ್ಸಿನ ಲೆಕ್ಕಾಚಾರದಲ್ಲಿ ನಟಿ ರಮ್ಯ ಮತ್ತು ಪ್ರಿಯಾಕೃಷ್ಣ ಹೆಸರುಗಳು ಮುಂಚೂಣಿಯಲ್ಲಿವೆ. ಇನ್ನೂ ಪಿ.ಸಿ.ಮೋಹನ್ಗೆ ಸೆಡ್ಡು ಹೊಡೆಯಲು ಹಳೇ ಹುಲಿ ಸಾಂಗ್ಲಿಯಾನಾ ಸಜ್ಜುಗೊಂಡಿದ್ದಾರೆ.
ಒಟ್ಟಾರೆಯಾಗಿ ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರಗಳ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿದೆ. ಈ ನಿಟ್ಟಿನಲ್ಲಿ ಇಂತಹ ಹೆಜ್ಜೆ ಇರಿಸಲು ಮುಂದಾಗಿದೆ. ಈ ಪ್ಲಾನ್ ವರ್ಕಟ್ ಆಗುತ್ತಾ ಅಂತ ಕಾದು ನೋಡಬೇಕಾಗಿದೆ.
ವರದಿ : ಗುರುಲಿಂಗಸ್ವಾಮಿ ಹೊಳಿಮಠ, ಪೊಲಿಟಿಕಲ್ ಎಡಿಟರ್, ಟಿವಿ5