Top

'ಸಿಎಂ ಸಾಹೇಬ್ರೆ ನನ್ನ ಸಾಲಮನ್ನಾ ಮಾಡ್ಬೇಡಿ'

ಸಿಎಂ ಸಾಹೇಬ್ರೆ ನನ್ನ ಸಾಲಮನ್ನಾ ಮಾಡ್ಬೇಡಿ
X

ಚಿಕ್ಕಮಗಳೂರು: ರಾಜ್ಯದೆಲ್ಲೆಡೆ ಮುಖ್ಯಮಂತ್ರಿ ಕುಮಾರಸ್ವಾಮಿಗೆ ರೈತರು ಸಾಲಮನ್ನಾ ಮಾಡಿ ಎಂದು ಮನವಿ ಮಾಡಿದ್ರೆ, ಚಿಕ್ಕಮಂಗಳೂರಿನ ರೈತನೋರ್ವ ನನ್ನ ಸಾಲಮನ್ನಾ ಮಾಡಬೇಡಿ ಎಂದು ಹೇಳಿದ್ದಾರೆ.

ಸಾಲಮನ್ನಾ ಮಾಡಿದ್ರೆ ಸ್ವಾಭಿಮಾನಕ್ಕೆ ಧಕ್ಕೆಯಾಗತ್ತೆ ಎಂಬ ಕಾರಣಕ್ಕೆ, ನನ್ನ ಸಾಲಮನ್ನಾ ಮಾಡ್ಬೇಡಿ ಸಿಎಂ ಎಂದು ಸರ್ಕಾರಕ್ಕೆ ಸ್ವಾಭಿಮಾನಿ ರೈತರೊಬ್ಬರು ಮನವಿ ಮಾಡಿದ್ದಾರೆ. ಮೂಡಿಗೆರೆ ತಾಲೂಕಿನ ಕರಡಗೋಡು ಗ್ರಾಮದ ರೈತ ಅಮರನಾಥ, ಮುಖ್ಯಮಂತ್ರಿ,ಕೃಷಿ ಸಚಿವ, ಜಿಲ್ಲಾಡಳಿತಕ್ಕೆ ಪತ್ರದ ಮೂಲಕ ಒತ್ತಾಯ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿದ ರೈತ ಅಮರನಾಥ್, ರಾಜ್ಯ ಸರ್ಕಾರ ರೈತರ ಒಂದು ಲಕ್ಷ ಸಾಲಮನ್ನ ಮಾಡಲು ನಿರ್ಧರಿಸಿದ್ದು, ಸರ್ಕಾರ ಸಾಲಮನ್ನಾ ಲೀಸ್ಟ್‌ನಿಂದ ತನ್ನ ಹೆಸರು ಕೈಬಿಡುವಂತೆ ವಿನಂತಿಸಿದ್ದು, ರಾಜ್ಯದ ಬಡ ರೈತರ ಸಾಲಮನ್ನಾ ಮಾಡಲಿ, ನನ್ನ ಆತ್ಮಸಾಕ್ಷಿಗೆ ನಿಮ್ಮ ಸಾಲ ಮನ್ನಾ ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕರಗೋಡು ಗ್ರಾಮದವರಾದ ಅಮರ್‌ನಾಥ್ ಕರಗೋಡು ಗ್ರಾಮದಲ್ಲಿ ಸ.ನಂ,8ರಲ್ಲಿ 11 ಎಕರೆ ಜಮೀನು ಹೊಂದಿದ್ದು, 2016 ರಲ್ಲಿ ಕರ್ನಾಟಕ ಬ್ಯಾಂಕ್ ನಲ್ಲಿ ನಾಲ್ಕು ಲಕ್ಷ ಸಾಲ ಮಾಡಿದ್ದಾರೆ. ಇನ್ನು ರಾಜ್ಯದಲ್ಲೇ ಸಾಲಮನ್ನಾ ಬೇಡವೆಂದ ಮೊದಲ ರೈತ ಅಮರನಾಥ್ ಆಗಿದ್ದಾರೆ.

https://youtu.be/iDjuijyekzM

Next Story

RELATED STORIES