Top

ಚಿರಂಜೀವಿ 152 ಚಿತ್ರಕ್ಕೆ ರಾಧಿಕಾ ಹಿರೋಯಿನ್​?

ಚಿರಂಜೀವಿ 152 ಚಿತ್ರಕ್ಕೆ ರಾಧಿಕಾ ಹಿರೋಯಿನ್​?
X

ಸ್ಯಾಂಡಲ್​ವುಡ್​ನ ಗ್ಲಾಮರ್ ಡಾಲ್, ಸ್ವೀಟಿ ರಾಧಿಕಾ ಕುಮಾರಸ್ವಾಮಿಗೆ ಬಂಪರ್ ಗಿಫ್ಟ್ ಬಂದಿದೆ. ಅದೇನಪ್ಪಾ ಅಂದ್ರೆ ಟಾಲಿವುಡ್​ನ ಸೂಪರ್ ಸ್ಟಾರ್ ಒಬ್ಬರ ಜೊತೆ ನಟಿಸೋ ಅವಕಾಶ ಬಂದೊದಗಿದೆ.

ಹೀಗೊಂದು ಸುದ್ದಿ ಸದ್ಯ ಸೌತ್ ಸಿನಿದುನಿಯಾದಲ್ಲಿ ದಟ್ಟವಾಗಿ ಹರಿದಾಡ್ತಿದೆ. ಸ್ಯಾಂಡಲ್​ವುಡ್​ನ ಗ್ಲಾಮರ್ ಡಾಲ್ ಸ್ವೀಟಿ ರಾಧಿಕಾ ಕುಮಾರಸ್ವಾಮಿ, ಟಾಲಿವುಡ್ ಮೆಗಾಸ್ಟಾರ್ ಮುಂದಿನ ಸಿನಿಮಾದ ನಾಯಕಿ ಎನ್ನಲಾಗ್ತಿದೆ. ಇತ್ತೀಚೆಗಷ್ಟೇ ಜೆಡಿ ಚಕ್ರವರ್ತಿ ಜೊತೆ ಕಾಂಟ್ರಾಕ್ಟ್ ಸಿನಿಮಾದ ಶೂಟಿಂಗ್ ಮುಗಿಸಿರೋ ಸ್ವೀಟಿ, ಇದೀಗ ಅದು ಮುಗೀತಾ ಇದ್ದಂತೆ ರಿಲೀಸ್​ಗೂ ಮೊದಲೇ ಈ ಸ್ವೀಟ್ ನ್ಯೂಸ್ ಕೊಟ್ಟಿದ್ದಾರೆ.

ಇತ್ತೀಚೆಗಷ್ಟೇ ಧಮಯಂತಿ ಅನ್ನೋ ಮಹಿಳಾ ಪ್ರಧಾನ ಸಿನಿಮಾ ಮಾಡ್ತಾರೆ ಅನ್ನೋ ಮೂಲಕ ಟಾಕ್ ಆಫ್ ದ ಟೌನ್ ಆಗಿದ್ರು ರಾಧಿಕಾ. ಆದ್ರೀಗ ಏಕ್ಧಮ್ ಮೆಗಾಸ್ಟಾರ್ ಜೊತೆ ನಟಿಸೋ ಅವಕಾಶ ಗಿಟ್ಟಿಸಿಕೊಂಡಿದ್ದಾರೆ ಎನ್ನಲಾಗ್ತಿದೆ. ಅಂದ-ಚೆಂದದ ಜೊತೆ ಅದ್ಭುತ ನಟನೆಗೆ ಹೆಸರಾದ ರಾಧಿಕಾಗೆ ಒಳ್ಳೆಯ ಅವಕಾಶಗಳು ಸಿಗದ ಕಾರಣ ಕೊಂಚ ದೂರ ಉಳಿದಿದ್ದ ಸ್ವೀಟಿಗೂ ಬಹುಶಃ ಇದು ಸ್ವೀಟ್ ನ್ಯೂಸ್.

ಸದ್ಯ ಸ್ವತಂತ್ರ ಹೋರಾಟಗಾರ ಉಯ್ಯಾಲವಾಡ ನರಸಿಂಹರೆಡ್ಡಿ ಕುರಿತ ಚಿತ್ರ ಸೈರಾದಲ್ಲಿ ನರಸಿಂಹ ರೆಡ್ಡಿ ಪಾತ್ರದಲ್ಲಿ ಬ್ಯುಸಿ ಆಗಿದ್ದಾರೆ ಚಿರು. ಇಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್, ಕಿಚ್ಚ ಸುದೀಪ್ ರಂತಹ ಬಹುಭಾಷಾ ಕಲಾವಿದರ ಜೊತೆ ಲೀಡ್ ಪಾತ್ರದಲ್ಲಿ ಕಾಣಿಸಿಕೊಳ್ತಿರೋ ಚಿರಂಜೀವಿ, ಇದೀಗ ಸೈಲೆಂಟ್ ಆಗಿ 152ನೇ ಸಿನಿಮಾಗೂ ಸಿದ್ದತೆ ನಡೆಸ್ತಿದ್ದಾರೆ.

ಸೈರಾ ಸಿನಿಮಾ ಮುಗೀತಾ ಇದ್ದಂತೆ ಮೆಗಾಸ್ಟಾರ್ ಜೊತೆ ಸ್ಟಾರ್ ಡೈರೆಕ್ಟರ್ ಕೊರಟಾಲ ಶಿವ ಚಿರು152ನೇ ಸಿನಿಮಾ ಶುರು ಮಾಡಲಿದ್ದಾರೆ. ಈಗಾಗ್ಲೇ ಕಥೆ ಕೂಡ ಸಿದ್ದ ಮಾಡಿಕೊಳ್ತಿರೋ ಕೊರಟಾಲ ಶಿವ, ಮೆಗಾಸ್ಟಾರ್ ಸ್ಟಾರಿಸಂ ಮತ್ತು ಫ್ಯಾನಿಸಂಗೆ ತಕ್ಕನಾದ ಕಥೆ ಹೆಣೆಯೋದ್ರಲ್ಲಿ ಬ್ಯುಸಿ ಆಗಿದ್ದಾರೆ.

ಮಿರ್ಚಿ, ಶ್ರೀಮಂತುಡು, ಜನತಾ ಗ್ಯಾರೇಜ್ ಸಿನಿಮಾಗಳ ಮೂಲಕ ಹ್ಯಾಟ್ರಿಕ್ ಹಿಟ್ ಹೊಡೆದ ಕೊರಟಾಲ ಶಿವ, ಇತ್ತೀಚೆಗೆ ಪ್ರಿನ್ಸ್ ಮಹೇಶ್ ಬಾಬುಗೆ ನಿರ್ದೇಶಿಸಿದ ಭರತ್ ಅನೆ ನೇನು ಚಿತ್ರ ಕೂಡ ಬ್ಲಾಕ್ ಬಸ್ಟರ್ ಹಿಟ್ ಲಿಸ್ಟ್ ಸೇರಿತು. ಬೇಸಿಕಲಿ ಸ್ಟೋರಿ ರೈಟರ್ ಆಗಿರೋ ಕೊರಟಾಲ, ಯಾವ ಸ್ಟಾರ್​ಗೆ ಯಾವ ರೀತಿಯ ಕಥೆ ಒಗ್ಗಲಿದೆ ಅನ್ನೋದನ್ನ ತುಂಬಾ ಚೆನ್ನಾಗಿ ಅರಿತಿದ್ದಾರೆ. ಹಾಗಾಗಿಯೇ ಕೈಯಿಟ್ಟ ಸಿನಿಮಾ ಎಲ್ಲಾ ಸೂಪರ್ ಹಿಟ್ ಆಗ್ತಿವೆ. ಸದ್ಯ ಚಿರುಗೂ ಅದೇ ರೀತಿಯ ಹಿಟ್ ಚಿತ್ರ ಕೊಡೋ ಧಾವಂತದಲ್ಲಿದ್ದಾರಂತೆ.

ಜನನಾಯಕನಾಗಿಯೇ ಗುರ್ತಿಸಿಕೊಂಡಿರೋ ಪ್ರಜಾ ನಾಯಕ ಚಿರುಗೆ ಮತ್ತದೇ ಜನಕ್ಕೆ ಹತ್ತಿರ ಆಗೋ ಅಂತಹ ಪಾತ್ರ ತಯಾರಿಸ್ತಿರೋ ಕೊರಟಾಲ, ಅದಕ್ಕೆ ನಾಯಕಿಯನ್ನಾಗಿ ರಾಧಿಕಾ ಕುಮಾರಸ್ವಾಮಿ ಫೈನಲ್ ಮಾಡೋ ಸಾಧ್ಯತೆಯಿದೆ. ಚಿರು ಜೊತೆ ಅವ್ರ ವಯಸ್ಸಿಗೆ ಹೋಲಿಕೆ ಆಗೋ ಅಂತಹ ಮೆಚೂರ್ಡ್​ ಫೇಸ್ ಹುಡುಕಾಟದಲ್ಲಿದ್ದ ಚಿತ್ರತಂಡಕ್ಕೆ ಸ್ವೀಟಿ ಹೆಸರನ್ನ ಸೂಚಿಸಲಾಗಿದೆಯಂತೆ. ಹಾಗಾಗಿ ಸದ್ಯದಲ್ಲೇ ರಾಧಿಕಾ ಕುಮಾರಸ್ವಾಮಿ ಹೆಸರು ಚಿರು ಜೊತೆ ಅಫಿಶಿಯಲ್ ಆಗಿ ರಿವೀಲ್ ಆಗಲಿದೆಯಂತೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ, ಮುಖ್ಯಸ್ಥ ಟಿವಿ5

Next Story

RELATED STORIES