Top

2ನೇ ಟೆಸ್ಟ್: ವೋಕ್ಸ್ ಚೊಚ್ಚಲ ಶತಕ, ಭಾರತಕ್ಕೆ ಆತಂಕ

2ನೇ ಟೆಸ್ಟ್: ವೋಕ್ಸ್ ಚೊಚ್ಚಲ ಶತಕ, ಭಾರತಕ್ಕೆ ಆತಂಕ
X

ಕೆಳ ಕ್ರಮಾಂಕದಲ್ಲಿ ಕ್ರಿಸ್ ವೋಕ್ಸ್ ಸಿಡಿಸಿದ ಚೊಚ್ಚಲ ಶತಕ ಹಾಗೂ ಬೇರ್ ಸ್ಟೋ ಅವರೊಂದಿಗಿನ ಭರ್ಜರಿ ಜೊತೆಯಾಟದಿಂದ ಇಂಗ್ಲೆಂಡ್ ತಂಡ 2ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಭಾರೀ ಮುನ್ನಡೆಯತ್ತ ಸಾಗಿದೆ.

ಭಾರತವನ್ನು 107 ರನ್ ಗೆ ಆಲೌಟ್ ಮಾಡಿರುವ ಇಂಗ್ಲೆಂಡ್, ಪಂದ್ಯದ ಮೂರನೇ ದಿನವಾದ ಶನಿವಾರದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 357 ರನ್ ಗಳಿಸಿದ್ದು, 250 ರನ್ ಗಳ ಭಾರೀ ಮುನ್ನಡೆ ಗಳಿಸಿದೆ.

ಇಂಗ್ಲೆಂಡ್ ಒಂದು ಹಂತದಲ್ಲಿ 131 ರನ್ ಗೆ 5 ವಿಕೆಟ್ ಕಳೆದುಕೊಂಡು ಶೋಚನೀಯ ಸ್ಥಿತಿಯಲ್ಲಿತ್ತು. ಆದರೆ 7ನೇ ವಿಕೆಟ್ ಗೆ ಜೊತೆಯಾದ ಬೇರ್ ಸ್ಟೋ ಮತ್ತು ವೋಕ್ಸ್ 189 ರನ್ ಜೊತೆಯಾಟ ನಿಭಾಯಿಸಿ ತಂಡವನ್ನು ಸುಭದ್ರ ಸ್ಥಿತಿಗೆ ಕೊಂಡೊಯ್ದರು.

ವೋಕ್ಸ್ 159 ಎಸೆತಗಳಲ್ಲಿ 18 ಬೌಂಡರಿ ನೆರವಿನಿಂದ 120 ರನ್ ಬಾರಿಸಿ ಔಟಾಗದೇ ಉಳಿದರೆ, ಬೇರ್ ಸ್ಟೋ 144 ಎಸೆತಗಳಲ್ಲಿ 20 ಬೌಂಡರಿ ಸೇರಿದ 93 ರನ್ ಬಾರಿಸಿದ್ದಾಗ ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಔಟಾದರು. ಈ ಮೂಲಕ 7 ರನ್ ನಿಂದ ಶತಕ ವಂಚಿತರಾದರು.

ಸಂಕ್ಷಿಪ್ತ ಸ್ಕೋರ್

ಭಾರತ ಮೊದಲ ಇನಿಂಗ್ಸ್ 107

ಇಂಗ್ಲೆಂಡ್ ಮೊದಲ ಇನಿಂಗ್ಸ್ 6 ವಿಕೆಟ್ ಗೆ 357 (ವೋಕ್ಸ್ ಅಜೇಯ 120, ಬೇರ್ ಸ್ಟೊ 93, ಪೊಪೆ 28, ಕುರಾನ್ ಅಜೇಯ 22, ಶಮಿ 74/3, ಹಾರ್ದಿಕ್ 66/2, ಇಶಾಂತ್ 88/1).

Next Story

RELATED STORIES