Top

ಉಡುಪಿಯ ಎಲ್ಲೆಡೆ ಇಂದು ಆಟಿ ಅಮವಾಸೆ ಸಡಗರ

ಉಡುಪಿಯ ಎಲ್ಲೆಡೆ ಇಂದು ಆಟಿ ಅಮವಾಸೆ ಸಡಗರ
X

ಉಡುಪಿ : ಇಂದು ಒಂದೆಡೆ ವರ್ಷದ ಮೂರನೇ ಸೂರ್ಯಗ್ರಹಣದ ದಿನವಾದರೇ, ಮತ್ತೊಂದೆಡೆ ಆಷಾಢ ಮಾಸದ ಅಮವಾಸ್ಯೆ. ಈ ದಿನದಂದು, ಜಿಲ್ಲೆಯಲ್ಲಿ ಆಟಿ ಅಮವಾಸೆ ಸಡಗರ-ಸಂಭ್ರಮ. ಹೀಗಾಗಿ ಹಾಲೆ ಮರಕ್ಕೆ ಎಲ್ಲಿಲ್ಲದ ಡಿಮ್ಯಾಂಡ್..

ಓ ಯಾಕೆ ಇಷ್ಟು ಡಿಮ್ಯಾಂಡ್ ಎಂದು ಅಚ್ಚರಿ ಪಡಬೇಡಿ. ಉಡುಪಿಯ ಭಾಗದಲ್ಲಿ ಆಟಿ ಅಮಾವಾಸ್ಯೆಗೆ ತುಂಬಾನೇ ಪ್ರಾಮುಖ್ಯತೆ ಇದೆ. ಈ ಆಟಿ ಅಮವಾಸೆ ದಿನದಂದು ಹಾಲೆ ಮರದ ತೊಗಟೆಯ ಕಷಾಯವನ್ನು ಕುಡಿದರೇ ಆರೋಗ್ಯಕ್ಕೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ, ಕರಾವಳಿ ಭಾಗದಲ್ಲಿದೆ. ಹೀಗಾಗಿ ಇಂದು ಹಾಲೆ ಮರಕ್ಕೆ ಡಿಮ್ಯಾಂಡ್‌.

ಇಂದು ಮುಂಜಾನೆಯಿಂದಲೇ ಶ್ರದ್ಧಾಳುಗಳು ಹಾಲೆ ಮರದ ಬಳಿ ಬಳಿ ಜಮಾಯಿಸಿ, ಹಾಲೆ ಮರದ ತೊಗಟೆಯ ಕಷಾಯ ಸೇವಿಸಿದರು. ಆಯುರ್ವೇದದಲ್ಲಿ ಸಪ್ತಪರ್ಣ ಎಂದುಕರೆಸಿಕೊಳ್ಳುವ ಹಾಲೆ ಮರ, ಅನೇಕ ಔಷಧೀಯ ಗುಣಗಳನ್ನು ಹೊಂದಿದೆ.

ಹೀಗಾಗಿ ಆಟಿ ಅಮವಾಸೆ ದಿನ, ಈ ಮರದ ತೊಗಟೆಯ ಕಷಾಯ ಸೇವಿಸಿವುದು ಅನಾಧಿಕಾಲದಿಂದಲೂ ನಡೆದುಕೊಂಡು ಬಂದಿದೆ. ಮಳೆಯನ್ನೂ ಲೆಕ್ಕಿಸದ ಕರಾವಳಿಯ ಮಂದಿ ಹಾಲೆಮರದ ತೊಗಟೆ ಸೀಳಿದರು. ಆನಂತ್ರ ನೀರು ಮಿಶ್ರ ಮಾಡಿ, ಹಾಲೆ ರಸಕ್ಕೆ ಜೀರಿಗೆ, ಬೆಳ್ಳಿಳ್ಳಿ, ಅರಿಶಿನ ಮಿಶ್ರಮಾಡಿ ತಾವೂ ಕುಡಿದು, ನೆರೆಹೊರವಯವರಿಗೂ ನೀಡಿದರು.

ಅಂದಹಾಗೇ, ಹಾಲೆ ರಸಕ್ಕೆ, ವ್ಯಾಧಿ ಕ್ಷಮತ್ವ ಹೆಚ್ಚಿಸುವ ಗಣವಿದೆಯಂತೆ. ಅದರಲ್ಲೂ ವೈರಾಣ ನಿರೋಧಕ, ಕ್ಯಾನ್ಸರ್ ಗಡ್ಡೆ ಕಡಿಮೆ ಮಾಡುವ ಗುಣ, ಅತಿಸಾರ ನಿರೋಧಕ ಶಕ್ತಿ, ಜ್ವರ ತಾಪ ಕಡಿಮೆ ಮಾಡುವ ಗುಣ ಸೇರಿದಂತೆ ಅನೇಕ ಪ್ರಯೋಜನಗಳಿವೆ.

ಅಲ್ಲದೇ ಆಷಾಢ-ಶ್ಕಾವಣ ಮಾಸ ಪೂರ್ತಿ ಹಾಲೆ ಮರದಲ್ಲಿ ಗರಿಷ್ಠ ಗುಣಕಾರತ್ವವಿದೆ ಎಂಬ ಕಾರಣಕ್ಕೆ, ಅಮವಾಸೆ ದಿನವಾದ ಇಂದು, ಉಡುಪಿಯ ಬಹುಭಾಗದಲ್ಲಿ ಕಷಾಯ ಕುಡಿದು ಸಂಭ್ರಮಿಸಿದ್ದು ಕಂಡುಬಂದಿತು.

ಉಡುಪಿ ತುಳುಕೂಟ ಮತ್ತು ಎಸ್‌ಡಿಎಂ ಆಯುರ್ವೇದ ಸಂಸ್ಧೆ ಜೊತೆಗೂಡಿ ಆಟಿ ಅಮವಾಸೆ ಅಂಗವಾಗಿ ಆಟಿ ಕಷಾಯ ವಿತರಣೆ ಕಾರ್ಯಕ್ರಮ ಕೂಡ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ನೂರಾರು ಜನರು ಭಾಗವಹಿಸಿ, ಔಷಧೀಯ ಗುಣವುಳ್ಳ ಆಟಿ ಕಷಾಯ ಸಹಿತ, ಮೆಂತೆಗಂಜಿ ಸವಿದರು.

Next Story

RELATED STORIES