Top

ಬೆಂಗಳೂರಿನ ಕುಖ್ಯಾತ ರೌಡಿ ಅರಸಯ್ಯನ ಮೇಲೆ ಅಟ್ಯಾಕ್

ಬೆಂಗಳೂರಿನ ಕುಖ್ಯಾತ ರೌಡಿ ಅರಸಯ್ಯನ ಮೇಲೆ ಅಟ್ಯಾಕ್
X

ಮಂಡ್ಯ : ಬೆಂಗಳೂರಿನ ಕುಖ್ಯಾರ ರೌಡಿ ಎನಿಸಿಕೊಂಡಿದ್ದ, ರೌಡಿ ಶೀಟರ್ ಅರಸಯ್ಯನ ಮೇಲೆ ಭೀಕರವಾಗಿ ದಾಳಿ ನಡೆದಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗ ಪಟ್ಟಣ ತಾಲ್ಲೂಕಿನ ಟಿ.ಎಂ.ಹೊಸೂರು ಬಳಿ ರೌಡಿ ಅರಸಯ್ಯ ಮೇಲೆ ದಾಳಿ ಮಾಡಿರುವ ಮತ್ತೊಂದು ತಂಡ, ಭೀಕರವಾಗಿ ಹಲ್ಲೆ ನಡೆಸಿ ನಾಪತ್ತೆಯಾಗಿದೆ.

ಕುಖ್ಯಾತ ರೌಡಿ ಅರಸಯ್ಯ ಶ್ರೀರಂಗಪಟ್ಟಣದ ಬಳಿಯ ಮಹಾಕಾಳಿ ದೇವಸ್ಥಾನದ ಟ್ರಸ್ಟ್‌ನ ಅಧ್ಯಕ್ಷರಾಗಿದ್ದರು. ಅಮವಾಸೆ ದಿನವಾದ ಇಂದು ದೇವಸ್ಥಾನಕ್ಕೆ ಪೂಜೆಗೆ ತೆರಳಿದ್ದರು.

https://www.youtube.com/watch?v=RmqJtTE2aFY

ಇದೇ ಸಮಯವನ್ನು ಹೊಂಚು ಹಾಕಿದಂತೆ ಕಾಯುತ್ತಿದ್ದವರು ಭೀಕರವಾಗಿ ರೌಡಿ ಅರಸಯ್ಯ ಮೇಲೆ ದಾಳಿ ನಡೆಸಿದ್ದಾರೆ. ಅನಾಮಿಕರ ದಾಳಿಯಿಂದಾಗಿ ಕುಖ್ಯಾತ ರೌಡಿ ಅರಸಯ್ಯ ಗಂಭೀರವಾಗಿ ಗಾಯಗೊಂಡಿದ್ದಾರೆ.

ಭೀಕರ ಹಲ್ಲೆಯಿಂದಾಗಿ ರೌಡಿ ಅರಸಯ್ಯ ಗಂಭೀರವಾಗಿ ಗಾಯಗೊಂಡಿದ್ದು, ಮೈಸೂರಿನ ಕೊಲಂಬಿಯಾ ಏಷ್ಯಾ ಅಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಆದರೇ ಅರಸಯ್ಯನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ಅಂದಹಾಗೇ, ಆರಸಯ್ಯ ಮೇಲೆ ದಾಳಿ ಮಾಡಿದ್ದು ಯಾರು ಎಂಬುದು ತಿಳಿದು ಬಂದಿಲ್ಲ. ಈ ಸಂಬಂಧ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Next Story

RELATED STORIES