Top

ಸ್ಥಳೀಯ ಸಂಸ್ಥೆ ಚುನಾವಣೆ: ಬಿಜೆಪಿ ಜಿಲ್ಲಾ ಉಸ್ತುವಾರಿಗಳ ನೇಮಕ

ಸ್ಥಳೀಯ ಸಂಸ್ಥೆ ಚುನಾವಣೆ: ಬಿಜೆಪಿ ಜಿಲ್ಲಾ ಉಸ್ತುವಾರಿಗಳ ನೇಮಕ
X

ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರಕಾರದ ಅಧಿಕಾರ ಹಂಚಿಕೆಯ ಕಸರತ್ತಿನಲ್ಲಿ ಮುಳುಗಿದ್ದರೆ, ಬಿಜೆಪಿ ಸ್ಥಳೀಯ ಸಂಸ್ಥೆ ಚುನಾವಣೆಯ ಸಿದ್ಧತೆ ಆರಂಭಿಸಿದೆ.

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜಯ ಸಾಧಿಸುವ ಮೂಲಕ ಲೋಕಸಭಾ ಸ್ಥಾನಗಳನ್ನು ಭದ್ರಪಡಿಸಿಕೊಳ್ಳಲು ಬಿಜೆಪಿ ಚಿಂತನೆ ನಡೆಸಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಶುಕ್ರವಾರ ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿಗಳನ್ನು ನೇಮಕ ಮಾಡಿದ್ದಾರೆ. ಕೆಲವು ಜಿಲ್ಲೆಗಳಿಗೆ ಇಬ್ಬರನ್ನು ನೇಮಕ ಮಾಡುವ ಮೂಲಕ ಹೆಚ್ಚು ಒತ್ತು ನೀಡಲಾಗಿದೆ. ವಿಶೇಷ ಅಂದರೆ ಜಿಲ್ಲಾ ಉಸ್ತುವಾರಿಗಳ ಪೈಕಿ ಯಡಿಯೂರಪ್ಪ ಪುತ್ರ ವಿಜಯೇಂದ್ರಗೆ ಕೂಡಾ ಸ್ಥಾನ ನೀಡಲಾಗಿದೆ. ವಿಜಯೇಂದ್ರ ರಾಜ್ಯ ಬಿಜೆಪಿ ಯುವ ಮೋರ್ಛಾ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.

ಬಿಜೆಪಿ ಜಿಲ್ಲಾ ಉಸ್ತುವಾರಿಗಳ ನೇಮಕ

  • ಬೆಳಗಾವಿ - ಜಗದೀಶ ಶೆಟ್ಟರ್
  • ಉತ್ತರ ಕನ್ನಡ - ಕೆ.ಎಸ್. ಈಶ್ವರಪ್ಪ
  • ಕೊಡಗು - ಆರ್. ಅಶೋಕ್
  • ಮಂಡ್ಯ- ಅಶ್ವತ್ಥನಾರಾಯಣ ಗೌಡ
  • ಮೈಸೂರು - ಫಣೀಶ್
  • ಚಾಮರಾಜನಗರ - ರಾಜೇಂದ್ರ, ಬಿ.ವೈ. ವಿಜಯೇಂದ್ರ
  • ತುಮಕೂರು - ವಿ. ಸೋಮಣ್ಣ
  • ದಕ್ಷಿಣ ಕನ್ನಡ- ವಿ. ಸುನೀಲ್ ಕುಮಾರ್
  • ಉಡುಪಿ- ಉದಯ್‌ಕುಮಾರ್ ಶೆಟ್ಟಿ
  • ಚಿತ್ರದುರ್ಗ- ವೈ.ಎ. ನಾರಾಯಣಸ್ವಾಮಿ
  • ದಾವಣಗೆರೆ- ಆಯನೂರು ಮಂಜುನಾಥ್
  • ಹಾವೇರಿ - ಎಂ. ನಾಗರಾಜ್
  • ವಿಜಯಪುರ- ಲಕ್ಷ್ಮಣ ಸವದಿ
  • ಬಾಗಲಕೋಟೆ- ಅರವಿಂದ ಲಿಂಬಾವಳಿ
  • ಯಾದಗಿರಿ- ಅಮರನಾಥ ಪಾಟೀಲ್
  • ಕಲ್ಬುರ್ಗಿ- ರವಿಕುಮಾರ್

Next Story

RELATED STORIES